ಏಷ್ಯಾಕಪ್ 2023, ಸೂಪರ್ 4 ಹಂತದ ಎಲ್ಲಾ ಪಂದ್ಯದ ಸ್ಥಳಾಂತರ!

By Suvarna News  |  First Published Sep 4, 2023, 9:52 PM IST

ಏಷ್ಯಾಕಪ್ ಟೂರ್ನಿ  ಸೂಪರ್ 4 ಹಂತದ ಪಂದ್ಯದ ಸ್ಥಳ ಬದಲಿಸಲಾಗಿದೆ. ACC ಸಮಿತಿ ಮಹತ್ವದ ನಿರ್ಧಾರ ಬಹಿರಂಗಪಡಿಸಿದೆ. ಸದ್ಯ ಕೊಲೊಂಬೊದಲ್ಲಿ ಸೂಪರ್4 ಹಾಗೂ ಫೈನಲ್ ಪಂದ್ಯ ಆಯೋಜಿಸಲಾಗಿದೆ. ಆದರೆ ಕೊಲಂಬೊದಿಂದ ಪಂದ್ಯ ಶಿಫ್ಟ್ ಮಾಡಲಾಗಿದೆ.


ಕೊಲಂಬೊ(ಸೆ.03) ಏಷ್ಯಾಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ತೀವ್ರ ಕುತೂಹಲ ಕೆರಳಿಸುತ್ತಿದೆ. ಆದರೆ ಮಹತ್ವದ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಮಳೆಗೆ ಆಹುತಿಯಾಗಿದೆ.  ಪಾಕಿಸ್ತಾನ ಹಾಗೂ ಶ್ರೀಲಂಕಾ ಏಷ್ಯಾಕಪ್ ಟೂರ್ನಿಗೆ ಆತಿಥ್ಯವಹಿಸಿದೆ. ಭಾರತದ ಪಂದ್ಯ, ಸೂಪರ್ 4 ಹಾಗೂ ಫೈನಲ್ ಪಂದ್ಯಗಳು ಶ್ರೀಲಂಕಾದಲ್ಲಿ ಆಯೋಜಿಸಲಾಗಿದೆ. ಇನ್ನುಳಿದ ಲೀಗ್ ಪಂದ್ಯ ಪಾಕಿಸ್ತಾನ ಆಯೋಜಿಸಿದೆ. ಇದೀಗ ಏಷ್ಯಾಕಪ್  ಸೂಪರ್ 4 ಹಂತದ ಪಂದ್ಯಗಳನ್ನು ಸ್ಥಳಾಂತರಿಸಲಾಗಿದೆ.

ಏಷ್ಯಾಕಪ್ 2023 ಟೂರ್ನಿಯ ಸೂಪರ್ 4 ಹಂತದ ಪಂದ್ಯಗಳು ಹಾಗೂ ಫೈನಲ್ ಪಂದ್ಯವನ್ನು ಶ್ರೀಲಂಕಾದ ಕೊಲಂಬೊದಲ್ಲಿ ಆಯೋಜಿಸಲಾಗಿದೆ. ಕೊಲೊಂಬೊ ಹಾಗೂ ಪಲ್ಲಕೆಲೆಯಲ್ಲಿ ಮಳೆಯಾಗುತ್ತಿರುವ ಕಾರಣ ಪಂದ್ಯಗಳು ರದ್ದಾಗುತ್ತಿದೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯ ರದ್ದಾಗಿದ್ದರೆ, ಭಾರತ ಹಾಗೂ ನೇಪಾಳ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಸೂಪರ್4 ಹಂತದ ಪಂದ್ಯಗಳನ್ನು ಕೊಲೊಂಬೊದಿಂದ ಹಂಬನತೋಟಾಗೆ  ಸ್ಥಳಾಂತರಿಸಲು ನಿರ್ಧರಿಸಲಾಗಿದೆ.  ಇನ್ನು ಫೈನಲ್ ಪಂದ್ಯವನ್ನೂ ಹಂಬನತೋಟಾಗೆ ಸ್ಥಳಾಂತರಿಸು ಎಸಿಸಿ ಮುಂದಾಗಿದೆ.

Latest Videos

undefined

ಕೊಹ್ಲಿ ಪರ ಘೋಷಣೆಗೆ ಉರಿದು ಬಿದ್ದ ಗಂಭೀರ್, ಮಧ್ಯದ ಬೆರಳು ತೋರಿಸಿ ಸಂಸದನ ಅಸಭ್ಯ ನಡೆ!

ಭಾರೀ ಮಳೆ ಭೀತಿ ಹಿನ್ನೆಲೆಯಲ್ಲಿ ಕೊಲಂಬೋದಲ್ಲಿ ನಡೆಯಬೇಕಿರುವ ಏಷ್ಯಾಕಪ್‌ನ ಸೂಪರ್‌-4 ಹಂತದ ಪಂದ್ಯಗಳು ದಾಂಬುಲಾಗೆ ಸ್ಥಳಾಂತರಕ್ಕೆ ನಿರ್ಧರಿಸಲಾಗಿತ್ತು. ಮುಂದಿನ ದಿನಗಳ ಹವಾಮಾನ ಪರಿಸ್ಥಿತಿ ಅವಲೋಕಿಸಿ ಇದೀಗ ಹಂಬನತೋಟಾಗೆ ಸ್ಥಳಾಂತರಿಸಲು ಎಸಿಸಿ ನಿರ್ಧರಿಸಿದೆ.  ಈ ಕುರಿತು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಅಧಿಕಾರಿಗಳು ಲಂಕಾ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಜೊತೆ ಮಾತುಕತೆ ನಡೆಸುದೆ. ಶೀಘ್ರದಲ್ಲೇ ನಿರ್ಧಾರ ಘೋಷಿಸಲಿದೆ. 

ಸೆ.9ರಿಂದ ಕೊಲಂಬೊದಲ್ಲಿ ಸೂಪರ್‌-4 ಹಂತದ ಐದು ಹಾಗೂ ಫೈನಲ್‌ ಪಂದ್ಯ ನಿಗದಿಯಾಗಿದೆ. ಆದರೆ ಕೊಲಂಬೊದಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ ವಾರವೂ ಮುಂದುವರಿಯುವ ಮುನ್ಸೂಚನೆ ಇದೆ. ಹೀಗಾಗಿ  ಹಂಬನ್‌ತೋಟ ಕ್ರೀಡಾಂಗಣಗಳಿಗೆ ಸ್ಥಳಾಂತರಗೊಳಲು ನಿರ್ಧರಿಸಲಾಗಿದೆ. ಸದ್ಯ ಪಲ್ಲಕೆಲೆಯಲ್ಲೂ ಮಳೆಯಾಗುತ್ತಿದ್ದು, ದಾಂಬುಲಾ ಕ್ರೀಡಾಂಗಣ ಟೂರ್ನಿ ಆಯೋಜನೆಗೆ ಇನ್ನಷ್ಟೇ ಸಜ್ಜುಗೊಳ್ಳಬೇಕಿದೆ. ಹೀಗಾಗಿ ಬಿಸಿಲಿನ ವಾತಾವರಣವಿರುವ ಹಂಬನ್‌ತೋಟದಲ್ಲಿ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ಕ್ಯಾಚ್ ಬಿಟ್ಟವರು ಒಬ್ಬಿಬ್ಬರಲ್ಲ, ನೇಪಾಳ ವಿರುದ್ಧ ಭಾರತದ ಕಳಪೆ ಫೀಲ್ಡಿಂಗ್ ಟ್ರೋಲ್!

ಭಾರತ ಹಾಗೂ ಪಾಕಿಸ್ತಾನವನ್ನು ಬಲಿಪಡೆದ ಮಳೆ, ಭಾರತ ನೇಪಾಳ ಪಂದ್ಯಕ್ಕೂ ಅಡ್ಡಿಯಾಗಿದೆ. ಪಾಕಿಸ್ತಾನ ಈಗಾಗಲೇ ಸೂಪರ್ ಹಂತಕ್ಕೆ ಲಗ್ಗೆ ಇಟ್ಟಿದೆ. ಇತ್ತ ಅಫ್ಘಾನಿಸ್ತಾನ ವಿರುದ್ಧ 89 ವಿಕೆಟ್ ಗೆಲುವು ಸಾಧಿಸಿದ ಬಾಂಗ್ಲಾದೇಶ ಏಷ್ಯಾಕಪ್‌ ಸೂಪರ್‌-4 ಹಂತದ ರೇಸ್‌ನಲ್ಲಿ ಉಳಿದುಕೊಂಡಿದೆ. ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿದ್ದ ಬಾಂಗ್ಲಾ ಮೊದಲ ಜಯ ತನ್ನದಾಗಿಸಿಕೊಂಡು ಅಂಕಪಟ್ಟಿಯ ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಕಾಯ್ದುಕೊಂಡಿತು. ಮಂಗಳವಾರ ನಡೆಯಲಿರುವ ಶ್ರೀಲಂಕಾ-ಆಫ್ಘನ್‌ ನಡುವಿನ ಪಂದ್ಯ ಗುಂಪಿನಿಂದ ಸೂಪರ್‌-4 ಪ್ರವೇಶಿಸುವ 2 ತಂಡಗಳ ಭವಿಷ್ಯ ನಿರ್ಧರಿಸಲಿದೆ.

click me!