
ಬೆಂಗಳೂರು(ಆ.04): ಏಷ್ಯಾಕಪ್ ಟಿ20 ಟೂರ್ನಿಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 28ರಂದು ಕ್ರಿಕೆಟ್ ಜಗತ್ತಿನ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ಕಾದು ಕುಳಿತಿದೆ. ಯಾಕಂದ್ರೆ ಭಾರತ-ಪಾಕ್ ಕಾಳಗ ಅಂದ್ರೆ ಬರೀ ಅದು ಪಂದ್ಯವಷ್ಟೇ ಅಲ್ಲ. ಅದೊಂದು ರೋಚಕ ಸಮರ. ಪ್ರತಿಷ್ಠೆಯ ಮಹಾಬ್ಯಾಟಲ್. ಕ್ರಿಕೆಟ್ ಪ್ರೇಮಿಗಳನ್ನು ಒಂದು ಕ್ಷಣ ಕಣ್ಣು ಮಿಟುಕಿಸದೇ ಕೊನೆ ಎಸೆತದವರೆಗೆ ತದೇಕಚಿತ್ತದಿಂದ ನೋಡುವಂತ ಮಹಾ ಕೌತುಕತೆಯ ಸಮರ. ಆದ್ರೆ ಈ ಸಲ ಯಾಕೋ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯ ಹಿಂದೆಂದೂ ಕಾಣದಷ್ಟು ಕ್ರೇಜ್ ಕಳೆದುಕೊಳ್ಳುತ್ತಾ ಅನ್ನೋ ಪ್ರಶ್ನೆ ಎದ್ದಿದೆ.
ಭಾರತ-ಪಾಕ್ ಪಂದ್ಯಕ್ಕಿಲ್ಲ ಮೌಕಾ ಮೌಕಾ ಜಾಹೀರಾತು:
ಬದ್ಧವೈರಿ ಭಾರತ-ಪಾಕ್ ಅಂದ್ರೆ ಮೊದಲಿಗೆ ನೆನಪಾಗೋದೆ ರಿವೆಂಜ್. ಆ ರಿವೆಂಜ್ ಅನ್ನು ಮತ್ತಷ್ಟು ಹೆಚ್ಚಿಸಿದ್ದು ಮೌಕಾ ಮೌಕಾ ಅನ್ನೋ ಜಾಹೀರಾತು. ಯಾವುದೇ ವಿಶ್ವಕಪ್ ಅಥವಾ ದೊಡ್ಡ ಟೂರ್ನಿಗಳಿರಲಿ. ಭಾರತ-ಪಾಕ್ ಪಂದ್ಯ ಸಮೀಪಿಸ್ತಿದ್ದಂತೆ ಪ್ರತಿ ಸಲ ಮೌಕಾ ಮೌಕಾ ಅಡ್ವರ್ಟೈಸ್ಮೆಂಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತೆ.
ಎಂ ಎಸ್ ಧೋನಿ ಫಾಲೋ ಮಾಡಲು ಹೋಗಿ ಎಡವಿಬಿದ್ದ ರೋಹಿತ್ ಶರ್ಮಾ..!
ಪಾಕ್ ಅಭಿಮಾನಿಗೆ ಪಂಚ್ ಕೊಡುವ ಈ ಜಾಹೀರಾತು ನೋಡುಗರಿಗೆ ಸಖತ್ ಮಜಾ ಕೊಡ್ತಿತ್ತು. ಪಂದ್ಯದ ಕ್ರೇಜ್ ಅನ್ನ ದುಪ್ಪಟ್ಟಾಗಿಸ್ತಿತ್ತು. ಜೊತೆಗೆ ಪ್ರಸಾರ ವಾಹಿನಿ ಪ್ರೇಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಈ ಯಶಸ್ವಿ ಮೌಕಾ ಮೌಕಾ ಕ್ಯಾಂಪೇನ್ ಅನ್ನು ನಿಲ್ಲಿಸಲು ಸ್ಟಾರ್ ಪ್ರಸಾರ ವಾಹಿನಿ ನಿರ್ಧರಿಸಿದೆ. ಇದರಿಂದ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ನಿರಾಸೆ ಯಾಗಿದೆ.
ಫೇಮಸ್ ಮೌಕಾ ಮೌಕಾ ಕ್ಯಾಂಪೇನ್ ಸ್ಟಾಪ್ ಆಗ್ತಿರೋದ್ಯಾಕೆ..? :
2015ರ ಒನ್ಡೇ ವಿಶ್ವಕಪ್ನಿಂದ ಮೌಕಾ ಮೌಕಾ ಜಾಹೀರಾತು ಶುರುವಾಗಿ, ಸಖತ್ ಫೇಮಸ್ ಆಗಿತ್ತು. ಸದ್ಯ ಈ ಕ್ಯಾಂಪೇನ್ ಅನ್ನು ನಿಲ್ಲಿಸಲು ಸ್ಟಾರ್ ವಾಹಿನಿ ಮುಂದಾಗಿದೆ. ಇದಕ್ಕೆ ಕಾರಣ 2021ರ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ತೋರಿದ ಹೀನಾಯ ಪ್ರದರ್ಶನ.
ಹೌದು, ಕಳೆದ ವಿಶ್ವಕಪ್ನಲ್ಲಿ ಕೊಹ್ಲಿ ಆಂಡ್ ಗ್ಯಾಂಗ್ ಲೀಗ್ನಲ್ಲೇ ಹೊರಬಿದ್ದು ತೀವ್ರ ಮುಖಭಂಗ ಅನುಭವಿಸಿತ್ತು. ಅದ್ರಲ್ಲೂ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ದ ಎಂದೂ ಸೋಲದ ಭಾರತ ತಂಡ 2021ರ ಟಿ20 ವಿಶ್ವಕಪ್ನಲ್ಲಿ ಪಾಕ್ ಎದುರು 10 ವಿಕೆಟ್ಗಳಿಂದ ಸೋತು ಅವಮಾನಕ್ಕೆ ತುತ್ತಾಗಿತ್ತು. ಇದೇ ಕಾರಣಕ್ಕಾಗಿ ಸ್ಟಾರ್ ವಾಹಿನಿ ಇನ್ಮುಂದೆ ಮೌಕಾ ಮೌಕಾ ಜಾಹೀರಾತು ಮಾಡದಿರಲು ನಿರ್ಧರಿಸಿದೆ. ಒಟ್ಟಿನಲ್ಲಿ ಫೇಮಸ್ ಮೌಕಾ ಅಡ್ವರ್ಟೈಸ್ಮೆಂಟ್ ಇಲ್ಲದ ಈ ಸಲದ ಏಷ್ಯಾಕಪ್ ಆರಂಭದಲ್ಲೇ ಹೇಳಿದಂತೆ ಕೌತುಕತೆ ಕಳೆದುಕೊಂಡ್ರೂ ಅಚ್ಚರಿಯಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.