Asia Cup 2022: ಕ್ವಾಲಿಫೈಯರ್ ಪಂದ್ಯಗಳ ಕುರಿತು ಕ್ರಿಕೆಟ್ ಫ್ಯಾನ್ಸ್‌ ತಿಳಿದಿರಬೇಕಾದ ಸಂಗತಿಗಳಿವು..!

Published : Aug 19, 2022, 04:30 PM IST
Asia Cup 2022: ಕ್ವಾಲಿಫೈಯರ್ ಪಂದ್ಯಗಳ ಕುರಿತು ಕ್ರಿಕೆಟ್ ಫ್ಯಾನ್ಸ್‌ ತಿಳಿದಿರಬೇಕಾದ ಸಂಗತಿಗಳಿವು..!

ಸಾರಾಂಶ

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಆಗಸ್ಟ್ 20ರಿಂದ ಏಷ್ಯಾಕಪ್ ಟೂರ್ನಿಯ ಅರ್ಹತಾ ಪಂದ್ಯಗಳು ಆರಂಭ ಒಂದು ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಪೈಪೋಟಿ

ದುಬೈ(ಆ.19): ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮುನ್ನ ಶನಿವಾರ(ಆ.20)ದಿಂದ 4 ತಂಡಗಳು ಒಂದು ಸ್ಥಾನಕ್ಕೆ ಪೈಪೋಟಿ ನಡೆಸಲಿವೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್, ಸಿಂಗಾಪುರ, ಯುನೈಟೆಡ್ ಅರಬ್‌ ಎಮಿರೇಟ್ಸ್‌ ಹಾಗೂ ಕುವೈತ್ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಆಪ್ಘಾನಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಿಕೊಂಡಿವೆ.  ನ್ನು

ಅರ್ಹತಾ ಸುತ್ತಿನಲ್ಲಿ ನಾಲ್ಕು ತಂಡಗಳು 5 ದಿನಗಳ ಅವಧಿಯಲ್ಲಿ ಒಟ್ಟು 6 ಪಂದ್ಯಗಳನ್ನು ಆಡಲಿದ್ದು, ಈ ಎಲ್ಲಾ ಪಂದ್ಯಗಳು ಒಮಾನ್‌ನ ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ಕ್ವಾಲಿಫೈಯರ್‌ನಲ್ಲಿ ಗೆಲುವು ಸಾಧಿಸಿದ ತಂಡವು, ಪ್ರಧಾನ ಸುತ್ತಿಗೆ ಲಗ್ಗೆಯಿಡಲಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳು ಇರುವ ಗುಂಪಿನಲ್ಲಿ ಮೊದಲ ಸುತ್ತಿನ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ. 2018ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ತಂಡವು ಪ್ರಧಾನ ಸುತ್ತಿಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿಯ ಅರ್ಹತಾ ಸುತ್ತಿನ ಕೊನೆಯ ಪಂದ್ಯವು ಆಗಸ್ಟ್ 24ರಂದು ನಡೆಯಲಿದೆ.

ಇನ್ನು ಇದೇ ವೇಳೆ ಯುಎಇ ತಂಡವು ತನ್ನ ನೂತನ ಟಿ20 ತಂಡದ ನಾಯಕರನ್ನಾಗಿ ಸಿಪಿ ರಿಜ್ವಾನ್ ಅವರನ್ನು ನೇಮಿಸಿಕೊಂಡಿದೆ. ಆದರೆ ಸಾಕಷ್ಟು ಅನುಭವಿ ಆಟಗಾರ ಎನಿಸಿಕೊಂಡಿದ್ದ ಅಹಮದ್ ರಾಜಾ, ಯುಎಇ ಏಕದಿನ ತಂಡದ ನಾಯಕರಾಗಿಯೇ ಮುಂದುವರೆದಿದ್ದಾರೆ. ಇನ್ನು ಸಿಂಗಾಪುರ ತಂಡದ ವಿಚಾರಕ್ಕೆ ಬಂದರೆ, ಚುಟುಕು ಕ್ರಿಕೆಟ್‌ನಲ್ಲಿ ಸಿಂಗಾಪುರ ತಂಡವು ಸತತ 6 ಸೋಲುಗಳನ್ನು ಅನುಭವಿಸಿದೆ. ಇನ್ನುಳಿದಂತೆ ಕುವೈತ್ ತಂಡವು ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದು, ಕಳೆದ 4 ಪಂದ್ಯಗಳಲ್ಲಿ ಕುವೈತ್ ತಂಡವು ಗೆಲುವಿನ ನಗೆ ಬೀರಿದ್ದು, ಆತ್ಮವಿಶ್ವಾಸದಿಂದ ಬೀಗುತ್ತಿದೆ.

Asia Cup 2022: ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡೌಟ್‌

ಎಲ್ಲಿ ನೇರಪ್ರಸಾರ: ಏಷ್ಯಾಕಪ್‌ ಅರ್ಹತಾ ಸುತ್ತಿನ ಪಂದ್ಯಗಳ ನೇರ ಪ್ರಸಾರವು ಫ್ಯಾನ್ ಕೋಡ್‌ ಆ್ಯಪ್ ಮೂಲಕ ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಬಹುದಾಗಿದೆ.

ಅರ್ಹತಾ ಸುತ್ತಿನ ವೇಳಾಪಟ್ಟಿ ಹೀಗಿದೆ ನೋಡಿ

ಆಗಸ್ಟ್‌ 20: ಸಿಂಗಾಪುರ-ಹಾಂಕಾಂಗ್, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 7:30 PM
ಆಗಸ್ಟ್ 21: ಯುಎಇ - ಹಾಂಕಾಂಗ್, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 7:30 PM
ಆಗಸ್ಟ್‌ 22: ಯುಎಇ - ಸಿಂಗಾಪುರ, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 7:30 PM
ಆಗಸ್ಟ್ 23: ಕುವೈತ್ - ಹಾಂಕಾಂಗ್, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 7:30 PM
ಆಗಸ್ಟ್ 24: ಸಿಂಗಾಪುರ -ಕುವೈತ್, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 4:30 PM
ಆಗಸ್ಟ್ 24: ಹಾಂಕಾಂಗ್ - ಯುಎಇ, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 7:30 PM

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!