Ind vs ZIM: ಜಿಂಬಾಬ್ವೆಯನ್ನು ಅನಾಯಾಸವಾಗಿ ಬಗ್ಗುಬಡಿದ ಟೀಂ ಇಂಡಿಯಾ, ಮೀಮ್ಸ್ ವೈರಲ್‌

By Naveen KodaseFirst Published Aug 19, 2022, 10:32 AM IST
Highlights

ಜಿಂಬಾಬ್ವೆ ಎದುರು ಅನಾಯಸವಾಗಿ ಗೆಲುವು ದಾಖಲಿಸಿದ ಟೀಂ ಇಂಡಿಯಾ
ಜಿಂಬಾಬ್ವೆ ಎದುರು 10 ವಿಕೆಟ್‌ಗಳ ಗೆಲುವು ಕಂಡ ಭಾರತ
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ

ಬೆಂಗಳೂರು(ಆ.19): ಕೆ ಎಲ್ ರಾಹುಲ್‌ ನೇತೃತ್ವದ ಟೀಂ ಇಂಡಿಯಾ, ಜಿಂಬಾಬ್ವೆ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಸಾಕಷ್ಟು ಸಮಯದ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದ ದೀಪಕ್‌ ಚಹರ್, ಇಂಗ್ಲೆಂಡ್‌ನ ಅಗ್ರಕ್ರಮಾಂಕದ ಮೂರು ವಿಕೆಟ್ ಕಬಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಜಿಂಬಾಬ್ವೆ ತಂಡವು, ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 31 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಕೊನೆಯಲ್ಲಿ 9ನೇ ವಿಕೆಟ್‌ಗೆ ಬ್ರಾಡ್ ಎವಾನ್ಸ್‌(33) ಹಾಗೂ ರಿಚರ್ಡ್ ಗರಾವ(34) ಸಮಯೋಚಿತ 70 ರನ್‌ಗಳ ಜತೆಯಾಟವಾಡುವ ಮೂಲಕ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಅಂತಿಮವಾಗಿ ಜಿಂಬಾಬ್ವೆ ತಂಡವು 189 ರನ್‌ಗಳಿಗೆ ಸರ್ವಪತನ ಕಂಡಿತು. ಟೀಂ ಇಂಡಿಯಾ ಪರ ದೀಪಕ್ ಚಹರ್, ಪ್ರಸಿದ್ದ್ ಕೃಷ್ಣ ಹಾಗೂ ಅಕ್ಷರ್ ಪಟೇಲ್ ತಲಾ 3 ವಿಕೆಟ್ ಕಬಳಿಸಿದರೇ, ಪ್ರಸಿದ್ದ್‌ ಕೃಷ್ಣ ಒಂದು ವಿಕೆಟ್ ಪಡೆದರು. 

ಇನ್ನು ಜಿಂಬಾಬ್ವೆ ನೀಡಿದ್ದ 190 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭಿಕ ಬ್ಯಾಟರ್‌ಗಳಾದ ಶಿಖರ್ ಧವನ್(81*) ಹಾಗೂ ಶುಭ್‌ಮನ್‌ ಗಿಲ್‌(82*) ಮುರಿಯದ 192 ರನ್‌ಗಳ ಜತೆಯಾಟವಾಡುವ ಮೂಲಕ ಭಾರತ ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು. ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ 31ನೇ ಓವರ್‌ನಲ್ಲಿ ಆಕರ್ಷಕ ಬೌಂಡರಿ ಬಾರಿಸುವ ಮೂಲಕ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. 

ಪಂದ್ಯ ಮುಕ್ತಾಯದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದೀಪಕ್ ಚಹರ್, 6 ತಿಂಗಳ ಬಳಿಕ ಮೊದಲ ಪಂದ್ಯವನ್ನಾಡಿದ್ದರಿಂದ ಸ್ವಲ್ಪ ತಳಮಳಗೊಂಡಿದ್ದೆ. ಆ ಬಳಿಕ ಲಯಕ್ಕೆ ಮರಳುವಲ್ಲಿ ಯಶಸ್ವಿಯಾದೆ. ನಾನು ಇಲ್ಲಿಗೆ ಬರುವ ಮುನ್ನ ಕೆಲ ಅಭ್ಯಾಸ ಪಂದ್ಯಗಳನ್ನು ಆಡಿದ್ದೆ. ನಾವು ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದೇವೆ ಎಂದರೆ ಮೈದಾನದಲ್ಲಿ ನಾವು 100% ಪ್ರದರ್ಶನ ನೀಡಬೇಕು ಎಂದು ದೀಪಕ್ ಚಹರ್ ಹೇಳಿದ್ದಾರೆ.

ರಾಹುಲ್ ನೇತೃತ್ವದ ಟೀಂ ಇಂಡಿಯಾ, ಜಿಂಬಾಬ್ವೆ ತಂಡವನ್ನು ಅನಾಯಾಸವಾಗಿ ಬಗ್ಗುಬಡಿಯುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೀಮ್ಸ್‌ಗಳು ವೈರಲ್ ಆಗಿವೆ. ಮೊದಲ ಏಕದಿನ ಪಂದ್ಯ ಮುಕ್ತಾಯದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಬೆಸ್ಟ್‌ ಮೀಮ್ಸ್‌ಗಳು ಇಲ್ಲಿವೆ ನೋಡಿ

 
 
 
 
 
 
 
 
 
 
 
 
 
 
 

A post shared by Cricket Memes (@cricomemes)

 
 
 
 
 
 
 
 
 
 
 
 
 
 
 

A post shared by Cricket Memes (@cricomemes)

 
 
 
 
 
 
 
 
 
 
 
 
 
 
 

A post shared by YT MeMer (@yt_memer777)

click me!