
ನವದೆಹಲಿ(ಮೇ.23): ಕೊರೋನಾ ವೈರಸ್ ಕಾರಣ ಕ್ರಿಕೆಟ್ ಟೂರ್ನಿ ಆಯೋಜನೆ ಸಾಧ್ಯವಾಗುತ್ತಿಲ್ಲ. ಆಯೋಜಿಸಿದ ಟೂರ್ನಿಗಳು ರದ್ದಾಗಿದೆ. ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕುರಿತು ಇನ್ನು ಸ್ಪಷ್ಟತೆ ಇಲ್ಲ. ಐಪಿಎಲ್ ಟೂರ್ನಿ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲು ಬಿಸಿಸಿ ಪ್ಲಾನ್ ಮಾಡುತ್ತಿದೆ. ಇದರ ನಡುವೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು 2023ಕ್ಕೆ ಮುಂದೂಡಲಾಗಿದೆ.
ಕೊರೋನಾದಿಂದ ಕ್ರಿಕೆಟ್‌ಗೆ ಮತ್ತೊಂದು ಹೊಡೆತ; ಏಷ್ಯಾಕಪ್ ಟೂರ್ನಿ ರದ್ದು!.
ಪಾಕಿಸ್ತಾನ ಆತಿಥ್ಯದಲ್ಲಿದ್ದ ಏಷ್ಯಾಕಪ್ ಟೂರ್ನಿಯನ್ನು ಶ್ರೀಲಂಕಾಗೆ ವರ್ಗಾಯಿಸಲಾಗಿತ್ತು. ಆದರೆ ಕೊರೋನಾ ವೈರಸ್ ಕಾರಣ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸದ್ಯ ಏಷ್ಯಾಕಪ್ ಟೂರ್ನಿ ಆಯೋಜನೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ವರ್ಷದ ಅಂತ್ಯದಲ್ಲಿ ಆಯೋಜಿಸುವ ಕುರಿತು ಚರ್ಚೆ ನಡೆಸಿತ್ತು. ಆದರೆ ಈಗಾಗಲೇ ಸ್ಥಗಿತಗೊಂಡಿರುವ ಟೂರ್ನಿಗಳು ಈ ವರ್ಷವಿಡಿ ಆಯೋಜಿಸಿದರೂ ಮುಗಿಸಲು ಸಾಧ್ಯವಿಲ್ಲದ ಕಾರಣ, ಬೇರೆ ದಾರಿ ಕಾಣದೆ ಏಷ್ಯಾಕಪ್ ಟೂರ್ನಿಯನ್ನು 2023ಕ್ಕೆ ಮುಂದೂಡಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈ ನಿರ್ಧಾರ ಪ್ರಕಟಿಸಿದೆ. ಟಿ20 ವಿಶ್ವಕಪ್, ದ್ವಿಪಕ್ಷೀಯ ಸರಣಿ ಸೇರಿದಂತೆ ಹಲವು ಟೂರ್ನಿಗಳು ರದ್ದಾಗಿದೆ. ಈ ಟೂರ್ನಿಗಳ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಹೀಗಾಗಿ ಏಷ್ಯಾಕಪ್ ಆಯೋಜಿಸಲು ದಿನಾಂಕ ಸಿಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಏಷ್ಯಕಪ್ ಟೂರ್ನಿ ಮುಂದೂಡಲಾಗುತ್ತಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಹೇಳಿದೆ.
ಜಗಳ ಮಾಡಲು ಹರ್ಭಜನ್ ಕೋಣೆಗೆ ತೆರಳಿದ್ದೆ, 2010ರ ಏಷ್ಯಾಕಪ್ ಸ್ಲೆಡ್ಜಿಂಗ್ ಕತೆ ಹೇಳಿದ ಅಕ್ತರ್!
ಪ್ರತಿ 2 ವರ್ಷಕ್ಕೊಮ್ಮೆ ಏಷ್ಯಾಕಪ್ ಟೂರ್ನಿ ಆಯೋಜಿಸಲಾಗುತ್ತಿದೆ. 2018ರಿಂದ ಏಷ್ಯಾಕಪ್ ಟೂರ್ನಿ ಆಯೋಜನೆಗೊಂಡಿಲ್ಲ. 2018ರ ಬಳಿಕ 2020ರಲ್ಲಿ ಟೂರ್ನಿ ಆಯೋಜಿಸಲಾಗಿತ್ತು. ಕೊರೋನಾ ಕಾರಣ ಟೂರ್ನಿ ರದ್ದಾಗಿತ್ತು. ಬಳಿಕ 2021ಕ್ಕೆ ಆಯೋಜಿಸಲು ಸಾಧ್ಯವಾಗಿಲ್ಲ. ಇದೀಗ 2023ಕ್ಕೆ ಮುಂದೂಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.