2ನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 43 ರನ್
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಏಕಾಂಗಿ ಹೋರಾಟ
ವಿವಾದಕ್ಕೆ ಕಾರಣವಾದ ಜಾನಿ ಬೇರ್‌ಸ್ಟೋವ್ ಸ್ಟಂಪೌಟ್
ಲಂಡನ್(ಜು.03): ಬೆನ್ ಸ್ಟೋಕ್ಸ್ ಸಾಹಸದ ಹೊರತಾಗಿಯೂ 2ನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 43 ರನ್ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಹಾಲಿ ವಿಶ್ವ ಚಾಂಪಿಯನ್ ಆಸೀಸ್ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ.
ಗೆಲ್ಲಲು 371 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ಪಂದ್ಯದ ಕೊನೆ ದಿನವಾದ ಭಾನುವಾರ 327ಕ್ಕೆ ಆಲೌಟಾಯಿತು. 4ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 114 ರನ್ ಗಳಿಸಿದ್ದ ಇಂಗ್ಲೆಂಡ್ ಕೊನೆ ದಿನ ಗೆಲ್ಲಲು 257 ರನ್ ಗಳಿಸಬೇಕಿತ್ತು. ಆಸೀಸ್ ಜಯಕ್ಕೆ 6 ವಿಕೆಟ್ ಅಗತ್ಯವಿತ್ತು. ಆದರೆ 5ನೇ ವಿಕೆಟ್‌ಗೆ ಬೆನ್ ಡಕೆಟ್(83) ಜೊತೆ 132 ರನ್ ಜೊತೆಯಾಟವಾಡಿದ ಬೆನ್ ಸ್ಟೋಕ್ಸ್, ಇಂಗ್ಲೆಂಡ್ ಪಾಳಯದಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿದರು.
undefined
ಮೊಹಮ್ಮದ್ ಕೈಫ್-ಪೂಜಾ ಯಾದವ್ ಮುದ್ದಾದ ಲವ್ ಸ್ಟೋರಿ..! ಇದು ಲವ್ ಜಿಹಾದ್ ಅಲ್ಲ..!
ಡಕೆಟ್ ನಿರ್ಗಮನದ ಬಳಿಕ ಇತರರಿಂದ ಸೂಕ್ತ ಬೆಂಬಲ ಸಿಗದಿದ್ದರೂ ಏಕಾಂಗಿಯಾಗಿ ಅಬ್ಬರಿಸಿದ ಬೆನ್ ಸ್ಟೋಕ್ಸ್, ತಂಡವನ್ನು ಗೆಲುವಿನ ಸನಿಹಕ್ಕೆ ತಲುಪಿಸಿದರು. ಆದರೆ 214 ಎಸೆತಗಳಲ್ಲಿ 9 ಬೌಂಡರಿ, 9 ಸಿಕ್ಸರ್‌ನೊಂದಿಗೆ 155 ರನ್ ಗಳಿಸಿದ್ದ ಸ್ಟೋಕ್ಸ್, ಗೆಲುವಿಗೆ 70 ರನ್ ಬೇಕಿದ್ದಾಗ ಹೇಜಲ್‌ವುಡ್‌ಗೆ ಬಲಿಯಾದರು. ಬಳಿಕ ಇತರ ವಿಕೆಟ್‌ಗಳನ್ನು ಕಬಳಿಸಲು ಆಸೀಸ್‌ಗೆ ಹೆಚ್ಚು ಸಮಯ ಬೇಕಾಗಲಿಲ್ಲ.
A hard-fought win 💪
Australia overcome brilliant Ben Stokes to go 2-0 up in the ✌ | 📝: https://t.co/liWqlPCKqn pic.twitter.com/Zc2cyOsrBw
ಇದಕ್ಕೂ ಮೊದಲು ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಗಳಿಸಿ, ಇಂಗ್ಲೆಂಡನ್ನು 325ಕ್ಕೆ ನಿಯಂತ್ರಿಸಿತ್ತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಆಸೀಸ್ 279ಕ್ಕೆ ಆಲೌಟಾಗಿತ್ತು. ಆಸ್ಟ್ರೇಲಿಯಾ ಪರ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಸಮಯೋಚಿತ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಸ್ಕೋರ್: ಆಸ್ಟ್ರೇಲಿಯಾ 416/10 ಮತ್ತು 279/10
ಇಂಗ್ಲೆಂಡ್ 325/10 ಮತ್ತು 327/10
ಜಾನಿ ಬೇರ್‌ಸ್ಟೋವ್ ಸ್ಟಂಪ್ ಔಟ್ ವಿವಾದ!
ಇಂಗ್ಲೆಂಡ್ ಬ್ಯಾಟರ್ ಜಾನಿ ಬೇರ್‌ಸ್ಟೋವ್ ಸ್ಪಂಪ್‌ಔಟ್ ವಿವಾದಕ್ಕೆ ಕಾರಣವಾಯಿತು. ಕ್ಯಾಮರೋನ್ ಗ್ರೀನ್ ಬೌಲಿಂಗ್‌ನಲ್ಲಿ ಚೆಂಡು ಕೀಪರ್ ಅಲೆಕ್ಸ್ ಕೇರ್ರಿ ಕೈಸೇರುವ ಮೊದಲೇ ಬೇರ್‌ಸ್ಟೋವ್ ಕ್ರೀಸ್ ಬಿಟ್ಟು ಮತ್ತೊಂದು ಬದಿಯಲ್ಲಿದ್ದ ಸ್ಟೋಕ್ಸ್ ಜೊತೆ ಮಾತನಾಡಲು ಹೊರಟರು. ಕೇರ್ರಿ ಚೆಂಡನ್ನು ಸ್ಟಂಪ್ಸ್‌ಗೆ ಎಸೆಯುತ್ತಿದ್ದಂತೆ ಆಸೀಸ್ ಆಟಗಾರರು ಔಟ್‌ಗೆ ಮನವಿ ಸಲ್ಲಿಸಿದರು. ಲೆಗ್ ಅಂಪೈರ್ 3ನೇ ಅಂಪೈರ್‌ಗೆ ತೀರ್ಪು ನೀಡುವಂತೆ ಕೋರಿದಾಗ ಔಟ್ ಎನ್ನುವ ಉತ್ತರ ಸಿಕ್ಕಿತು. ಬೇರ್‌ಸ್ಟೋವ್ ಅವರ ಅಜಾಗರೂಕತೆಯಿಂದಾಗಿ ಇಂಗ್ಲೆಂಡ್‌ಗೆ ಭಾರೀ ನಷ್ಟ ಉಂಟಾಯಿತು.