Ashes 2021: ಇಂಗ್ಲೆಂಡ್ ಪಾಳಯದ ನಾಲ್ವರಿಗೆ ಕೋವಿಡ್ ಪಾಸಿಟಿವ್..!

By Suvarna NewsFirst Published Dec 27, 2021, 11:40 AM IST
Highlights

* ಆ್ಯಷಸ್ ಟೆಸ್ಟ್ ಸರಣಿ ಮೇಲೆ ಕೋವಿಡ್ 19 ಸೋಂಕು ವಕ್ರದೃಷ್ಠಿ

* ಇಂಗ್ಲೆಂಡ್‌ನ ನಾಲ್ವರು ವ್ಯಕ್ತಿಗಳಿಗೆ ಕೋವಿಡ್ ಸೋಂಕು ದೃಢ

* ಅರ್ಧಗಂಟೆ ತಡವಾಗಿ ಆರಂಭವಾದ ಎರಡನೇ ದಿನದಾಟ

ಮೆಲ್ಬೊರ್ನ್‌(ಡಿ.27): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಮೂರನೇ ಟೆಸ್ಟ್ ಪಂದ್ಯವಾದ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದ ಮೇಲೆ ಕೋವಿಡ್ ತನ್ನ ವಕ್ರದೃಷ್ಠಿಯನ್ನು ಬೀರಿದ್ದು, ಇಂಗ್ಲೆಂಡ್ ಕ್ರಿಕೆಟ್ ತಂಡದ (Englad Cricket Team) ಇಬ್ಬರು ಸಹಾಯಕ ಕೋಚ್ ಸಿಬ್ಬಂದಿ ಹಾಗೂ ಇಬ್ಬರು ಕುಟುಂಬಸ್ಥರಿಗೆ ಕೋವಿಡ್ 19 (Coronavirus) ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ಆ್ಯಷಸ್ ಟೆಸ್ಟ್ ಸರಣಿಗೆ ಆತಿಥ್ಯ ವಹಿಸಿರುವ ಕ್ರಿಕೆಟ್‌ ಆಸ್ಟ್ರೇಲಿಯಾ ಈ ಕುರಿತಂತೆ ಪ್ರಕಟಣೆ ಹೊರಡಿಸಿದ್ದು, ಸೋಂಕು ದೃಢಪಟ್ಟ ಎಲ್ಲಾ ವ್ಯಕ್ತಿಗಳನ್ನು ಐಸೋಲೇಷನ್‌ನಲ್ಲಿಡಲಾಗಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ನಿಕ್ ಹಾಕ್ಲೆ (Nick Hockley) ತಿಳಿಸಿದ್ದಾರೆ.

ಇಲ್ಲಿನ ಮೆಲ್ಬೊರ್ನ್‌ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಎರಡನೇ ದಿನದಾಟವು ಕೋವಿಡ್ ಭೀತಿಯಿಂದಾಗಿ 30 ನಿಮಿಷಗಳ ಕಾಲ ತಡವಾಗಿ ಆರಂಭವಾಯಿತು. ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳ ಎಲ್ಲಾ ಆಟಗಾರರು ಹಾಗೂ ಕೋಚ್‌ ಮತ್ತು ಸಹಾಯಕ ಸಿಬ್ಬಂದಿಗಳಿ ರ‍್ಯಾಪಿಡ್‌ ಆ್ಯಂಟಿಜನ್ ಟೆಸ್ಟ್‌ಗೆ ಒಳಗಾದದರು. ಆಟಗಾರರು ಹಾಗೂ ಸಿಬ್ಬಂದಿಗಳ ರಿಪೋರ್ಟ್‌ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ, ಎರಡನೇ ದಿನದಾಟವನ್ನು ಆರಂಭಿಸಲಾಯಿತು. ಸೋಂಕು ದೃಢಪಟ್ಟುವನ್ನು ತಂಡದಿಂದ ಪ್ರತ್ಯೇಕವಾಗಿರಿಸಲಾಗಿದೆ ಎಂದು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಇನ್ನು ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಹಾಗೂ ಕ್ರೆಗ್ ಓವರ್‌ಟನ್ ಹಾಗೂ ಮತ್ತೊಬ್ಬರು ಇಂಗ್ಲೆಂಡ್ ಸಹಾಯಕ ಸಿಬ್ಬಂದಿಯನ್ನು ಐಸೋಲೇಷನ್‌ನಲ್ಲಿಡಲಾಗಿದ್ದು, ಅವರ ಆರೋಗ್ಯದ ಮೇಲೂ ಕಣ್ಣಿಡಲಾಗಿದೆ.

The England team and management are currently at the team hotel awaiting results of RFT COVID tests following a positive test in the team’s family group.

We will provide more information in due course.

— England Cricket (@englandcricket)

Ashes 2021: ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಮತ್ತೆ ಪಂಚ್‌ ಕೊಟ್ಟ ಆಸೀಸ್‌

ಕೋವಿಡ್ ರೂಪಾಂತರ ತಳಿಯಾದ ಒಮಿಕ್ರೋನ್ ಕೂಡಾ ತನ್ನ ಅಟ್ಟಹಾಸ ಬೀರುವ ಮುನ್ಸೂಚನೆ ನೀಡಿದ್ದು, ಚಾನೆಲ್ 7 ಸಂಸ್ಥೆಯ ಕ್ರೀಡಾವಾಹಿನಿಯ ವೀಕ್ಷಕ ವಿವರಣೆಗಾರರಿಗೂ ಸೋಂಕು ದೃಢಪಟ್ಟಿಗೆ. ಒಮಿಕ್ರೋನ್ ದೃಢಪಟ್ಟ ವ್ಯಕ್ತಿಗೆ ಯಾವುದೇ ಸೋಂಕಿನ ಲಕ್ಷಣವಿಲ್ಲವಾದರೂ ಸಹಾ, ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿದೆ. ಹೀಗಾಗಿ ಆ ವೀಕ್ಷಕ ವಿವರಣೆಗಾರರನ್ನು ಐಸೋಲೇಷನ್‌ನಲ್ಲಿಡಲಾಗಿದೆ.

ಇಂಗ್ಲೆಂಡ್‌ಗೆ 60 ರನ್‌ಗಳ ಮುನ್ನಡೆ:

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನವೇ ಕೇವಲ 185 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ, ಬೌಲರ್‌ಗಳು ಆಸರೆಯಾಗಿದ್ದಾರೆ. ಹೀಗಿದ್ದು, ಆತಿಥೇಯ ಆಸ್ಟ್ರೇಲಿಯಾ ತಂಡವು ಮೆಲ್ಬೊರ್ನ್ ಟೆಸ್ಟ್ ಪಂದ್ಯದಲ್ಲಿ 60 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ. ಮೊದಲ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 61 ರನ್ ಬಾರಿಸಿದ್ದ ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲಿ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರವನ್ನು ಇಂಗ್ಲೆಂಡ್ ಬೌಲರ್‌ಗಳು ತಲೆಕೆಳಗಾಗುವಂತೆ ಮಾಡಿದರು. ಟೆಸ್ಟ್ ನಂ.1 ಬ್ಯಾಟರ್ ಮಾರ್ನಸ್ ಲಬುಶೇನ್ ಕೇವಲ ಒಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಸ್ಟೀವ್ ಸ್ಮಿತ್ ರನ್ ಗಳಿಕೆ ಕೇವಲ 10 ರನ್‌ಗಳಿಗೆ ಸೀಮಿತವಾಯಿತು. ಸದ್ಯ 83 ಓವರ್ ಅಂತ್ಯದ ವೇಳೆಗೆ ಅಸ್ಟ್ರೇಲಿಯಾ ತಂಡವು 8 ವಿಕೆಟ್ ಕಳೆದುಕೊಂಡು 245 ರನ್ ಬಾರಿಸಿದ್ದು, ಒಟ್ಟಾರೆ 60 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ನಾಯಕ ಪ್ಯಾಟ್ ಕಮಿನ್ಸ್ 21 ಹಾಗೂ ಮಿಚೆಲ್ ಸ್ಟಾರ್ಕ್ 9 ರನ್ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

click me!