IPL 2023: ಒಂದೇ ಓವರ್‌ನಲ್ಲಿ 31 ರನ್‌ ಚಚ್ಚಿಸಿಕೊಂಡ ಅರ್ಜುನ್‌ ತೆಂಡುಲ್ಕರ್‌, ಪಂಜಾಬ್‌ ಬಿಗ್‌ ಸ್ಕೋರ್‌!

Published : Apr 22, 2023, 09:24 PM ISTUpdated : Apr 22, 2023, 09:33 PM IST
IPL 2023: ಒಂದೇ ಓವರ್‌ನಲ್ಲಿ 31 ರನ್‌ ಚಚ್ಚಿಸಿಕೊಂಡ ಅರ್ಜುನ್‌ ತೆಂಡುಲ್ಕರ್‌, ಪಂಜಾಬ್‌ ಬಿಗ್‌ ಸ್ಕೋರ್‌!

ಸಾರಾಂಶ

ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಅವರ ಒಂದೇ ಓವರ್‌ನಲ್ಲಿ 31 ರನ್‌ ಬಿಟ್ಟುಕೊಟ್ಟರೆ, ಪಂಜಾಬ್‌ ಕಿಂಗ್ಸ್‌ ತಂಡ ತನ್ನ 20 ಓವರ್‌ಗಳ ಆಟದಲ್ಲಿ ಬೃಹತ್‌ ಮೊತ್ತ ದಾಖಲಿಸಲು ಯಶಸ್ವಿಯಾಗಿದೆ.  

ಮುಂಬೈ (ಏ.22): ಬ್ಯಾಟಿಂಗ್‌ನ ಆರಂಭದಿಂದಲೂ ಕುಂಟುತ್ತಲೇ ಬ್ಯಾಟಿಂಗ್‌ ನಡೆಸಿದ ಪಂಜಾಬ್‌, 15ನೇ ಓವರ್‌ ವೇಳೆಗೆ 4 ವಿಕೆಟ್‌ಗೆ 118 ರನ್‌ ಬಾರಿಸಿತ್ತು. 160 ಅಥವಾ 170ರ ಆಸುಪಾಸಿನ ಸ್ಕೋರ್‌ ಬಾರಿಸುವ ಇರಾದೆಯಲ್ಲಿದ್ದ ಪಂಜಾಬ್‌ ಕಿಂಗ್ಸ್‌ ತಂಡ, ಕೊನೆಗ 20 ಓವರ್‌ ಮುಕ್ತಾಯವಾದಾಗ ಬಾರಿಸಿದ ಸ್ಕೋರ್‌ 214 ರನ್‌. ಇದಕ್ಕೆ ಕಾರಣವಾಗಿದ್ದು ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಎಡಗೈ ವೇಗಿ ಅರ್ಜುನ್‌ ತೆಂಡುಲ್ಕರ್‌ ಅವರ ಒಂದೇ ಒಂದು ಓವರ್‌. ಅರ್ಜುನ್‌ ತೆಂಡುಲ್ಕರ್‌ ಎಸೆದ 16ನೇ ಓವರ್‌ನಲ್ಲಿ ಎರಡು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಯೊಂದಿಗೆ ಬರೋಬ್ಬರಿ 31 ರನ್‌ ಸಿಡಿಸಿದ ಸ್ಯಾಮ್‌ ಕರ್ರನ್‌ ಹಾಗೂ ಹರ್‌ಪ್ರೀತ್‌ ಸಿಂಗ್‌ ಭಾಟಿಯಾ ಜೋಡಿ ಪಂಜಾಬ್‌ ತಂಡದ ಬೃಹತ್‌ ಮೊತ್ತಕ್ಕೆ ಕಾರಣವಾದರು. ಅದಾದ ಬಳಿಕ 18ನೇ ಓವರ್‌ನಲ್ಲಿ ಕ್ಯಾಮರೂನ್‌ ಗ್ರೀನ್‌ಗೆ ಕರ್ರನ್‌ ಹಾಗೂ ಜಿತೇಶ್‌ ಶರ್ಮ ಸೇರಿ ಬಾರಿಸಿದ ನಾಲ್ಕು ಸಿಕ್ಸರ್‌ಗಳೂ ಪಂಜಾಬ್‌ ಕಿಂಗ್ಸ್‌ನ ದೊಡ್ಡ ಮೊತ್ತಕ್ಕೆ ಕಾರಣವಾಯಿತು. ಕೊನೆಯ ಐದು ಓವರ್‌ಗಳಲ್ಲಿ 96 ರನ್‌ ಸಿಡಿಸಲು ಯಶಸ್ವಿಯಾದ ಪಂಜಾಬ್‌ ಕಿಂಗ್ಸ್‌ ತಂಡ ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿಗೆ 215 ರನ್‌ಗಳ ಗುರಿ ನಿಗದಿ ಮಾಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶನಿವಾರ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡ 8 ವಿಕೆಟ್‌ಗೆ 214 ರನ್‌ ಬಾರಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ತಂಡ ಮೊದಲ 15 ಓವರ್‌ಗಳ ಬ್ಯಾಟಿಂಗ್‌ ಬಹಳ ನೀರಸವಾಗಿತ್ತು.ಪ್ರಭ್‌ ಸಿಮ್ರನ್‌ ಸಿಂಗ್‌ 17 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 1 ಬೌಂಡರಿ ಇದ್ದ 26 ರನ್‌ ಸಿಡಿಸಿದರೆ, ಅಥರ್ವ ಟೈಡೆ ಇಷ್ಟೇ ಎಸೆತದಲ್ಲಿ 1 ಸಿಕ್ಸರ್‌ ಹಾಗೂ 3 ಬೌಂಡರಿಗಳಿದ್ದ 29 ರನ್‌ ಸಿಡಿಸಿದರು. ಇವರಿಬ್ಬರ ಹೊರತಾಗಿ ಉಳಿದವರು ಅಷ್ಟಾಗಿ ಮುಂಬೈ ಇಂಡಿಯನ್ಸ್‌ ಬೌಲಿಂಗ್‌ ಮುಂದೆ ಮೈಚಳಿ ಬಿಟ್ಟು ಬ್ಯಾಟಿಂಗ್‌ ಮಾಡುವ ಗೋಜಿಗೆ ಹೋಗಿಲಿಲ್ಲ.

'ಮೂರ್ಖತನದ ಆಟ..' ಕೆಎಲ್‌ ರಾಹುಲ್‌ ಬ್ಯಾಟಿಂಗ್‌ಗೆ ವೆಂಕಟೇಶ್‌ ಪ್ರಸಾದ್‌ ಕಿಡಿ!

ಆದರೆ, ಇಡೀ ಪಂದ್ಯ ಬದಲಾಗಿದ್ದು, ಅರ್ಜುನ್‌ ತೆಂಡುಲ್ಕರ್‌ ಎಸೆದ 16ನೇ ಓವರ್‌ನಲ್ಲಿ. ಮೊದಲ ಎಸೆತವನ್ನು ಸ್ಯಾಮ್‌ ಕರ್ರನ್‌ ಸಿಕ್ಸರ್‌ಗಟ್ಟಿದರೆ, ಮರು ಎಸೆತ ವೈಡ್‌. ನಂತರದ ಎಸೆತದಲ್ಲಿ ಬೌಂಡರಿ ಸಿಡಿಸಿದ ಕರ್ರನ್‌ ಮೂರನೇ ಎಸೆತದಲ್ಲಿ 1 ರನ್‌ ತೆಗೆದು ಹರ್‌ಪ್ರೀತ್‌ ಸಿಂಗ್‌ಗೆ ಬ್ಯಾಟಿಂಗ್‌ ನೀಡಿದರು. ನಾಲ್ಕನೇ ಎಸೆತದಲ್ಲಿ ಹರ್‌ಪ್ರೀತ್‌ ಬೌಂಡರಿ ಸಿಡಿಸಿ ಇಬ್ಬರ ನಡುವಿನ ಅರ್ಧಶತಕದ ಜೊತೆಯಾಟ ಪೂರ್ಣ ಮಾಡಿದರೆ, 5ನೇ ಎಸೆತವನ್ನು ಸಿಕ್ಸರ್‌ಗಟ್ಟಿದರು. ನೋಬಾಲ್‌ ಆಗಿದ್ದ 6ನೇ ಎಸೆತದಲ್ಲಿ ಹರ್‌ಪ್ರೀತ್‌ ಬೌಂಡರಿ ಸಿಡಿಸಿದರೆ, ಫ್ರೀ ಹಿಟ್‌ ಆಗಿದ್ದ ಕೊನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಸಿಡಿಸಿ ಓವರ್‌ನಲ್ಲಿ ಒಟ್ಟು 31 ರನ್‌ ಚಚ್ಚಿದರು.

IPL 2023: ಗೆಲ್ಲೋ ಮ್ಯಾಚ್‌ ಸೋಲಿಸಿದ ಕೆಎಲ್‌ ರಾಹುಲ್‌, ನೆಟ್ಟಿಗರ ಟೀಕೆ!

ಆ ಬಳಿಕ ಕ್ಯಾಮರೂನ್‌ ಗ್ರೀನ್‌ ಎಸೆದ 18ನೇ ಓವರ್‌ನ ಮೊದಲ ಎರಡು ಎಸೆತದಲ್ಲಿ ಕರ್ರನ್‌ ಸಿಕ್ಸರ್‌ ಸಿಡಿಸಿದರೆ, ಮೂರನೇ ಎಸೆತದಲ್ಲಿ 1 ರನ್‌ ನೀಡಿ ಹರ್‌ಪ್ರೀತ್‌ಗೆ ಬ್ಯಾಟಿಂಗ್‌ ನೀಡಿದರು.4ನೇ ಎಸೆತದಲ್ಲಿ ಹರ್‌ಪ್ರೀತ್‌ (41ರನ್‌, 28 ಎಸೆತ, 4 ಬೌಂಡರಿ, 2 ಸಿಕ್ಸರ್‌) ಔಟಾದರೆ, ಕ್ರೀಸ್‌ಗಿಳಿದ ಜಿತೇಶ್‌ ಶರ್ಮ ತಾವು ಎದುರಿಸಿದ ಮೊದಲ ಎರಡು ಎಸೆತಗಳನ್ನೂ ಸಿಕ್ಸರ್‌ಗಟ್ಟಿದರು. ಇದರಿಂದಾಗಿ ಈ ಓವರ್‌ನಲ್ಲಿ ಪಂಜಾಬ್‌ 25 ರನ್‌ ಸಿಡಿಸಿತು. 29 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ ಸಿಡಿಸಿ ಸ್ಯಾಮ್‌ ಕರ್ರನ್‌ 19ನೇ ಓವರ್‌ನ ಕೊನೇ ಎಸೆತದಲ್ಲಿ ಔಟಾದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ICC Men’s T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಅಚ್ಚರಿಯ ಆಯ್ಕೆ, ಗಿಲ್‌ಗಿಲ್ಲ ಸ್ಥಾನ
ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ