ಆರ್‌ಸಿಬಿ ಕೆಣಕಿದ ಗಂಭೀರ್ ವಿರುದ್ದ ಸೇಡು ತೀರಿಸಿಕೊಂಡ್ರಾ ರಾಹುಲ್? ಲಖನೌ ಸೋಲಿಗೆ ನಾಯಕ ಟ್ರೋಲ್!

Published : Apr 22, 2023, 07:58 PM IST
ಆರ್‌ಸಿಬಿ ಕೆಣಕಿದ ಗಂಭೀರ್ ವಿರುದ್ದ ಸೇಡು ತೀರಿಸಿಕೊಂಡ್ರಾ ರಾಹುಲ್? ಲಖನೌ ಸೋಲಿಗೆ ನಾಯಕ ಟ್ರೋಲ್!

ಸಾರಾಂಶ

ಗುಜರಾತ್ ಟೈಟಾನ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಸೋಲು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಗೆಲ್ಲುವ ಪಂದ್ಯವನ್ನು ಲಖನೌ ಕೆಚೆಲ್ಲಿದೆ. ನಾಯಕ ಕೆಎಲ್ ರಾಹುಲ್ ಅತ್ಯಂತ ನಿಧಾನಗತಿಯ ಆಟವೇ ಈ ಸೋಲಿಗೆ ಕಾರಣ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ಕೆಲ ಅಭಿಮಾನಿಗಳು ಆರ್‌ಸಿಬಿ ಅಭಿಮಾನಿಗಳನ್ನು ಕೆಣಕಿದ ಲಖನೌ ಮೆಂಟರ್ ಗಂಭೀರ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ ಎಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ರಾಹುಲ್ ಫುಲ್ ಟ್ರೋಲ್ ಆಗಿದ್ದಾರೆ

ಲಖನೌ(ಏ.22): ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮತ್ತೆ ಟ್ರೋಲ್ ಆಗಿದ್ದಾರೆ. ಈ ಆವೃತ್ತಿಯಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿರುವ ರಾಹುಲ್, ಇದೀಗ ಗುಜರಾತ್ ವಿರುದ್ಧವೂ ಇದೇ ಪ್ರದರ್ಶನ ನೀಡಿ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ್ದಾರೆ ಅನ್ನೋ ಆಕ್ರೋಶ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ. ಗುಜರಾತ್ ವಿರುದ್ಧ ರಾಹುಲ್ ಸ್ಟ್ರೈಕ್ ರೇಟ್ 111. ಅಂತಿಮ ಹಂತದಲ್ಲಿ ಲಖನೌ ಪಂದ್ಯ ಗೆಲ್ಲಲಾಗದೆ ಸೋಲಿಗೆ ಶರಣಾಗಿದೆ. ಕೆಎಲ್ ರಾಹುಲ್ ಗುಜರಾತ್ ತಂಡದ ಪರ ಆಡಿದ್ದಾರೆ. ಹೀಗಾಗಿ ಲಖನೌ ಸೋಲು ಕಂಡಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಲಖನೌ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಗುಜರಾತ್ ತಂಡವನ್ನು 135 ರನ್‌ಗೆ ಕಟ್ಟಿ ಹಾಕಿತ್ತು. 136 ರನ್ ಸುಲಭ ಟಾರ್ಗೆಟ್ ಪಡೆದ ಲಖನೌ ಗೆಲುವಿನ ವಿಶ್ವಾಸದಲ್ಲಿತ್ತು. ಇತ್ತ ಕೆಎಲ್ ರಾಹುಲ್ 38 ಎಸೆತದಲ್ಲಿ ಹಾಫ್ ಸೆಂಚರಿ ಸಿಡಿಸಿ ಅಬ್ಬರಿಸಿದ್ದರು. ಆದರೆ ಬಳಿಕ ರಾಹುಲ್ ರನ್ ಬದಲು ವಿಕೆಟ್ ಉಳಿಸಿಕೊಳ್ಳುವತ್ತಲೇ ಹೆಚ್ಚಿನ ಗಮನಹರಿಸಿದರು. ಪಂದ್ಯ ರೋಚಕ ಘಟ್ಟ ಸಾಗುತ್ತಿದ್ದಂತೆ ಅಂತಿಮ ಹಂತದಲ್ಲಿ ಸಿಕ್ಸರ್‌ಗೆ ಮುಂದಾದರು. ಆದರೆ ಕ್ಯಾಚ್ ನೀಡಿ ಹೊರನಡೆದರು. 61 ಎಸೆತದಲ್ಲಿ ರಾಹುಲ್ 68ರನ್ ಸಿಡಿಸಿ ಹೊರನಡೆದರು. ಬಳಿಕ ಒಂದೇ ಸಮನೆ ಲಖನೌ ವಿಕೆಟ್ ಪತನಗೊಂಡಿತು. 7 ವಿಕೆಟ್ ಕಳೆದುಕೊಂಡು 128 ರನ್ ಸಿಡಿಸಿ ಲಖನೌ ಸೋಲಿಗೆ ಗುರಿಯಾಯಿತು.

ಲಖನೌ ಸೋಲಿಗೆ ಕೆಎಲ್ ರಾಹುಲ್ ನಿಧಾನಗತಿಯ ಬ್ಯಾಟಿಂಗ್ ಮುಖ್ಯ ಕಾರಣ. ರಾಹುಲ್ ಹಾಫ್ ಸೆಂಚುರಿ ಬಳಿಕ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಗೆಲುವು ಸಾಧಿಸಿದ ಬಳಿಕ ಲಖನೌ ಮೆಂಟರ್ ಆರ್‌ಸಿಬಿ ಅಭಿಮಾನಿಗಳತ್ತ ತಿರುಗಿ  ಬಾಯಿ ಮುಚ್ಚಿರಿ ಎಂದು ಸನ್ನೆ ಮಾಡಿದ್ದರು. ಈ ಸೇಡಿಗೆ ಕನ್ನಡಿಗ ಕೆಎಲ್ ರಾಹುಲ್, ತಮ್ಮ ತಂಡದ ಮೆಂಟರ್ ವಿರುದ್ಧವೇ ಸೇಡು ತೀರಿಸಿಕೊಂಡಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

 

 

ಕೆಎಲ್ ರಾಹುಲ್ ತಂಡವನ್ನು ಗೆಲುವಿನ ದಡ ಸೇರಿಸಲು ಆಡಿಲ್ಲ, ಆರೇಂಜ್ ಕ್ಯಾಪ್‌ಗಾಗಿ ಆಡುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.ಲಖನೌ ಸೂಪರ್ ಜೈಂಟ್ಸ್ ತಂಡದ ಗೆಲುವಿಗೆ ಅಂತಿಮ 36 ಎಸೆತದಲ್ಲಿ 31  ರನ್ ಅವಶ್ಯಕತೆ ಇತ್ತು. ಕೆಎಲ್ ರಾಹುಲ್ ಸಹಿತ ಪ್ರಮುಖರ ವಿಕೆಟ್ ಕೈಚೆಲ್ಲಿ 7 ರನ್‌ಗಳಿಂದ ಟಿ20 ಪಂದ್ಯದ ಸೋತಿದೆ. ಇದು ನಂಬಲು ಸಾಧ್ಯವೇ? ಎಂದು ಹಲವರು ಪ್ರಶ್ನಿಸಿದ್ದಾರೆ.

ಕೆಎಲ್ ರಾಹುಲ್ ಐಪಿಎಲ್ ಟೂರ್ನಿಯಲ್ಲಿ 26 ಬಾರಿ 50 ಹೆಚ್ಚು ಎಸೆತ ಎದುರಿಸಿದ್ದಾರೆ. ಇದರಲ್ಲಿ 12 ಬಾರಿ ಪಂದ್ಯ ಸೋಲಿಗೆ ಗುರಿಯಾಗಿದೆ. ಕೆಎಲ್ ರಾಹುಲ್ ಐಪಿಎಲ್ ಟೂರ್ನಿಯಲ್ಲಿ ನಿಧಾನಗತಿಯ ಬ್ಯಾಟಿಂಗ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. 

ಐಪಿಎಲ್ ನಿಧಾನಗತಿಯ ಬ್ಯಾಟಿಂಗ್
93.65 ಸ್ಟ್ರೈಕ್‌ರೇಟ್ - 59 ರನ್(63) ಜೆಪಿ ಡುಮಿನಿ vs ಪಂಜಾಬ್( 2009 
109.68 ಸ್ಟ್ರೈಕ್‌ರೇಟ್ - 68 ರನ್(62) ಆ್ಯರೋನ್ ಫಿಂಚ್ vs ಮುಂಬೈ(2014 )
111.48 ಸ್ಟ್ರೈಕ್‌ರೇಟ್ - 68 ರನ್(61) ಕೆಎಲ್ ರಾಹುಲ್ vs ಗುಜರಾತ್(2023)

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ