
ಜಮೈಕಾ(ಫೆ.13): ವೆಸ್ಟ್ ಇಂಡೀಸ್ ಕ್ರಿಕೆಟಿಗ ಆ್ಯಂಡ್ರೆ ರೆಸೆಲ್ ವಿಶ್ವದ ಅತ್ಯುತ್ತಮ ಹಾಗೂ ಬೆಸ್ಟ್ ಟಿ20 ಕ್ರಿಕೆಟಿಗ. ಲೀಗ್ ಕ್ರಿಕೆಟ್‌ನಲ್ಲಿ ಹೆಚ್ಚು ಜನಪ್ರಿಯವಾಗಿರು ರಸೆಲ್, ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ಕೀ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಹುಡುಗಿಯರನ್ನು ಆಕರ್ಷಿಸಲು ಹೋಗಿ ಇಂಜುರಿಗೆ ತುತ್ತಾದ ಕತೆಯನ್ನ ಸ್ವತಃ ರಸೆಲ್ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: ತುಂಟ ರಸೆಲ್, ಖಾಸಗಿ ವಿಡಿಯೋ ವೈರಲ್..!
31 ವರ್ಷದ ಆ್ಯಂಡ್ರೆ ರಸೆಲ್ ತಮ್ಮ ತಪ್ಪುಗಳನ್ನು ಗಲ್ಫ್ ನ್ಯೂಸ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 20ರ ಹರೆಯದಲ್ಲಿ ರಸೆಲ್, ಹುಡುಗಿಯರನ್ನು ಆಕರ್ಷಿಸುವ ಸಲುವಾಗಿ ಬಾಡಿ ಬಿಲ್ಡ್ ಮಾಡಿದ್ದರು. ಎದೆ, ಕೈ ಹಾಗೂ ಸಿಕ್ಸ್ ಪ್ಯಾಕ್‌ಗಾಗಿ ಹೆಚ್ಚು ವರ್ಕೌಟ್ ಮಾಡಿದ ರಸೆಲ್, ತೊಡೆ ಹಾಗೂ ಕಾಲುಗಳತ್ತ ಗಮನ ಹರಿಸದೇ ಬಿಟ್ಟರು.
ಇದನ್ನೂ ಓದಿ: ಸ್ಫೋಟಕ ಆಲ್ರೌಂಡರ್ ರಸೆಲ್ ಪತ್ನಿ ಬಿಕಿನಿ ಪೋಟೋಗಳು ವೈರಲ್
ದೇಹದ ಮೇಲ್ಬಾಗ ತೂಕ ಹೆಚ್ಚಾಯಿತು. ಕಾಲು ನೋವು ಆರಂಭವಾಯಿತು. ರಸೆಲ್‌ಗೆ ನಡೆಯುವುದೇ ಕಷ್ಟವಾಯಿತು. ನೋವು ಕಾಣಿಸಿಕೊಂಡಾಗ ಪೈನ್ ಕಿಲ್ಲರ್ ಮಾತ್ರೆ ತೆಗೆದುಕೊಳ್ಳುತ್ತಿದ್ದೆ ಎಂದು ರಸೆಲ್ ಹೇಳಿದ್ದಾರೆ.
ಮಾರ್ಚ್ 29 ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಆ್ಯಂಡ್ರೆ ರಸೆಲ್ ಕಣಕ್ಕಿಳಿಯುತ್ತಿದ್ದಾರೆ. 2019ರಲ್ಲಿ ಉತ್ತಮ ಪದರ್ಶನ ನೀಡಿದ ರಸೆಲ್ 14 ಪಂದ್ಯಗಳಿಂದ 510 ರನ್ ಹಾಗೂ 11 ವಿಕೆಟ್ ಕಬಳಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.