ಮಹಿಳಾ ತ್ರಿಕೋನ ಟಿ20: ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಭಾರತ

Suvarna News   | Asianet News
Published : Feb 13, 2020, 11:07 AM IST
ಮಹಿಳಾ ತ್ರಿಕೋನ ಟಿ20: ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಭಾರತ

ಸಾರಾಂಶ

ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಮಹಿಳಾ ತ್ರಿಕೋನ ಏಕದಿನ ಟಿ20  ಸರಣಿ ಅಂತ್ಯವಾಗಿದೆ. ಪ್ರಶಸ್ತಿ ಗೆಲ್ಲೋ ಅತ್ಯುತ್ತಮ ಅವಕಾಶವನ್ನು ಭಾರತ ಮಹಿಳಾ ಕಂಡ ಕೈಚೆಲ್ಲಿದೆ. 

ಮೆಲ್ಬರ್ನ್‌(ಫೆ.13): ಮಹಿಳಾ ತ್ರಿಕೋನ ಏಕದಿನ ಟಿ20 ಸರಣಿ ಫೈನಲ್ ಪ್ರವೇಶಿಸಿದ್ದ ಭಾರತ, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ 11 ರನ್ ಸೋಲು ಕಾಣೋ ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. 

ಇದನ್ನೂ ಓದಿ: ಕೊಹ್ಲಿ ಬಾಯ್ಸ್‌ಗೆ ಸಿಗೋ ಆದಾಯ ನಿರೀಕ್ಷಿಸುವುದು ತಪ್ಪು; ಸ್ಮೃತಿ ಮಂಧನಾ

ಜೆಸ್ಸ್ ಜಾನ್ಸನ್‌ (5-12) ಹಾಗೂ ಟೈಲಾ ವ್ಲಾಮಿನಿಕ್‌ (2-32) ಮಾರಕ ದಾಳಿಗೆ ತತ್ತರಿಸಿದ ಭಾರತ, ಆಸ್ಪ್ರೇಲಿಯಾ ವಿರುದ್ಧದ ಮಹಿಳಾ ತ್ರಿಕೋನ 20 ಸರಣಿಯ ಫೈನಲ್‌ ಪಂದ್ಯದಲ್ಲಿ 11 ರನ್‌ಗಳ ಸೋಲು ಕಂಡಿದೆ. ಪ್ರಶಸ್ತಿ ಗೆದ್ದು ಟಿ20 ವಿಶ್ವಕಪ್‌ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಉತ್ಸಾಹದಲ್ಲಿದ್ದ ಹರ್ಮನ್‌ ಪಡೆಗೆ ಈ ಸೋಲು ನಿರಾಸೆ ತಂದಿದೆ. 

ಇದನ್ನೂ ಓದಿ: ಟಿ20 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ; ಕರ್ನಾಟಕದ ಇಬ್ಬರಿಗೆ ಸ್ಥಾನ!

ಆಸ್ಪ್ರೇಲಿಯಾ ನೀಡಿದ 156 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ (66) ಹೋರಾಟದ ಹೊರತಾಗಿಯೂ ಸೋಲುಂಡಿತು. ಭಾರತ 15 ಓವರಲ್ಲಿ 3 ವಿಕೆಟ್‌ಗೆ 115 ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು. ನಂತರ 29 ರನ್‌ ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡು ಆಲೌಟ್‌ ಆಯಿತು. ಇದಕ್ಕೂ ಮುನ್ನ ಆಸ್ಪ್ರೇಲಿಯಾ ಬೆಥ್‌ ಮೂನಿ (71*) ಅರ್ಧಶತಕದಿಂದ 20 ಓವರಲ್ಲಿ 6 ವಿಕೆಟ್‌ಗೆ 155 ರನ್‌ಗಳಿಸಿತು.

ಸ್ಕೋರ್‌: ಆಸ್ಪ್ರೇಲಿಯಾ 155/6, ಭಾರತ 144/10

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!