* ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಐಪಿಎಲ್ ಮಾಧ್ಯಮ ಪ್ರಸಾರದ ಹಕ್ಕು ಪಡೆಯಲು ಪೈಪೋಟಿ
* ಅಮೆಜಾನ್, ರಿಲಯನ್ಸ್, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಿಂದ ತೀವ್ರ ಪೈಪೋಟಿ ಸಾಧ್ಯತೆ
* ಬಿಸಿಸಿಐ ಪ್ರಸಾರ ಹಕ್ಕನ್ನು 30,000 ಕೋಟಿ ರುಪಾಯಿಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಲು ನೋಡುತ್ತಿದೆ
ಮುಂಬೈ(ಫೆ.21): 2023-2027ರ ಅವಧಿಗೆ ಐಪಿಎಲ್ ಟಿ20 ಟೂರ್ನಿಯ ಪ್ರಸಾರ ಹಕ್ಕು (IPL Broadcast Rights) ಮಾರಾಟ ಮಾಡಲು ಬಿಸಿಸಿಐ (BCCI) ಸಿದ್ಧತೆ ನಡೆಸುತ್ತಿದ್ದು, ಈ ತಿಂಗಳಾಂತ್ಯದಲ್ಲಿ ಟೆಂಡರ್ ಕರೆಯುವ ನಿರೀಕ್ಷೆ ಇದೆ. ಅಮೆಜಾನ್ ಪ್ರೈಮ್ (Amazon Prime) ಹಾಗೂ ರಿಲಯನ್ಸ್ ಸಂಸ್ಥೆಗಳು ಪ್ರಸಾರ ಹಕ್ಕು ಖರೀದಿಗೆ ಸೋನಿ ಸ್ಪೋರ್ಟ್ (Sony Sports Network) ಹಾಗೂ ಡಿಸ್ನಿ ಸ್ಟಾರ್ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಿಸಿಸಿಐ ಪ್ರಸಾರ ಹಕ್ಕನ್ನು 30,000 ಕೋಟಿ ರುಪಾಯಿಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಲು ಎದುರು ನೋಡುತ್ತಿದೆ. ರಿಲಯನ್ಸ್ ಸಂಸ್ಥೆಗೆ ಮಾರಾಟ ಹಕ್ಕು ದೊರೆತರೆ, ವಯಾಕಾಮ್ 18 ವಾಹಿನಿಗಳು, ಜಿಯೋ ಟೀವಿಯಲ್ಲಿ ಪಂದ್ಯಗಳು ಪ್ರಸಾರವಾಗಲಿವೆ. ಅಮೆಜಾನ್ ಟೀವಿ ಹಾಗೂ ಡಿಜಿಟಲ್ ಎರಡೂ ಹಕ್ಕು ಪಡೆದರೆ, ಆಗ ಟೀವಿಯಲ್ಲಿ ಪಂದ್ಯಗಳನ್ನು ಪ್ರಸಾರ ಮಾಡಲು ಯಾವುದಾದರೂ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.
ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier Leaue) ಟೂರ್ನಿಯು ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗುವ ಸಾಧ್ಯತೆಯಿದ್ದು, ಈ ಬಾರಿ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಇದರ ಭಾಗವಾಗಿ ಮಹಾರಾಷ್ಟ್ರದ 5 ಮೈದಾನಗಳಲ್ಲಿ ಲೀಗ್ ಹಂತದ ಪಂದ್ಯಗಳು ನಡೆದರೆ, ಪ್ಲೇ ಆಫ್ಸ್ ಪಂದ್ಯಗಳನ್ನು ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
IPL 2022: ಐಪಿಎಲ್ ಟೂರ್ನಿಯು ಈ ದಿನಾಂಕದಿಂದ 6 ಸ್ಟೇಡಿಯಂನಲ್ಲಿ ಆರಂಭ..?
ಗುಜರಾತ್ ಟೈಟಾನ್ಸ್ ಲೋಗೋ ಬಿಡುಗಡೆ
ಅಹಮದಾಬಾದ್: 15ನೇ ಆವೃತ್ತಿಯ ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟಾನ್ಸ್ (Gujarat Titans) ತಂಡದ ಲೋಗೋ ಭಾನುವಾರ ಬಿಡುಗಡೆಯಾಗಿದೆ. ಪಿರಮಿಡ್ ಆಕಾರದಲ್ಲಿ ತಯಾರಿಸಲಾಗಿರುವ ಲೋಗೋವನ್ನು ಸಾಮಾಜಿಕ ತಾಣದಲ್ಲಿ ಬಿಡುಗಡೆ ಮಾಡಲಾಯಿತು.
ಬಿಳಿ, ನೀಲಿ ಹಾಗೂ ಬಂಗಾರದ ಬಣ್ಣದ ಲೋಗೋದಲ್ಲಿ ‘ಗುಜರಾತ್ ಟೈಟಾನ್ಸ್’ ಎಂದು ಬರೆಯಲಾಗಿದೆ. ಹರಾಜಿನಲ್ಲಿ 5,625 ಕೋಟಿ ರುಪಾಯಿಗೆ ಸಿವಿಸಿ ಕ್ಯಾಪಿಟಲ್ಸ್ (CVC Capitals) ಸಂಸ್ಥೆ ಖರೀದಿಸಿರುವ ತಂಡವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಮುನ್ನಡೆಸಲಿದ್ದು, ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಪ್ರಧಾನ ಕೋಚ್ ಆಗಿ ಕಾರ‍್ಯನಿರ್ವಹಿಸಲಿದ್ದಾರೆ.
🏃🏃♀️Step into the Titans Dugout! ▶️ Watch our stars unveil the logo in the metaverse! ⭐ ▶️ https://t.co/dCcIzWpM4U pic.twitter.com/9N6Cl6a3y4
— Gujarat Titans (@gujarat_titans)ಐಪಿಎಲ್ ಮೆಗಾ ಹರಾಜಿಗೂ ಮುನ್ನ ಅಹಮದಾಬಾದ್ ಫ್ರಾಂಚೈಸಿಯು ಮೆಗಾ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ (Rashid Khan) ಹಾಗೂ ಶುಭ್‌ಮನ್ ಗಿಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇನ್ನು ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜಿನಲ್ಲಿ ಅಹಮದಾಬಾದ್ ಫ್ರಾಂಚೈಸಿಯು ಮೊಹಮ್ಮದ್ ಶಮಿ, ಜೇಸನ್ ರಾಯ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಅವರಂತಹ ಟಿ20 ಸ್ಪೆಷಲಿಸ್ಟ್‌ಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ
ಟಿ20: ಲಂಕಾ ವಿರುದ್ಧ ಆಸೀಸ್‌ಗೆ 4-1ರ ಜಯ
ಮೆಲ್ಬರ್ನ್: ಆಸ್ಪ್ರೇಲಿಯಾ ವಿರುದ್ಧದ 5ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಶ್ರೀಲಂಕಾ 5 ವಿಕೆಟ್‌ಗಳ ರೋಚಕ ಜಯಗಳಿಸಿದೆ. ಮೊದಲ 4 ಪಂದ್ಯಗಳಲ್ಲಿ ಗೆದ್ದಿದ್ದ ಆಸ್ಪ್ರೇಲಿಯಾ 4-1ರಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಆತಿಥೇಯ ಆಸೀಸ್, 6 ವಿಕೆಟ್ ಕಳೆದುಕೊಂಡು 154 ರನ್ ಕಲೆ ಹಾಕಿತು. ಮ್ಯಾಥ್ಯೂ ವೇಡ್ ಔಟಾಗದೆ 43 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 29 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಲಂಕಾ 19.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಕುಸಾಲ್ ಮೆಂಡಿಸ್(ಅಜೇಯ 69) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೆಂಡಿಸ್ ಪಂದ್ಯಶ್ರೇಷ್ಠ, ಮ್ಯಾಕ್ಸ್‌ವೆಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.