ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ ಹಾಗೂ ನಿಷೇಧದ ಬಳಿಕ ಕಮ್‌ಬ್ಯಾಕ್ ಮಾಡಿರುವ ಪೃಥ್ವಿ ಶಾ ಭಾರತ ’ಎ’ ತಂಡದಲ್ಲಿ ಸ್ಥಾನ ಪಡೆದಿದ್ದು, ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಡಿ]: ಲಯದಲ್ಲಿರುವ ಪೃಥ್ವಿ ಶಾ, ಭಾರತ ತಂಡಕ್ಕೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಇದರ ಮಧ್ಯೆಯೇ ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆಯಲು ಅವಕಾಶ ದೊರೆತಿದೆ.
ದಶಕದ ಏಕದಿನ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಧೋನಿಗೆ ನಾಯಕ ಪಟ್ಟ !
undefined
ಮುಂದಿನ ದಿನಗಳಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತ ‘ಎ’ ತಂಡದಲ್ಲಿ ಪೃಥ್ವಿಗೆ ಸ್ಥಾನ ಕಲ್ಪಿಸಲಾಗಿದೆ. 3 ಏಕದಿನ ಪಂದ್ಯಗಳು, 2 ನಾಲ್ಕು ದಿನದ ಪಂದ್ಯಗಳಿಗೆ ಪೃಥ್ವಿ ‘ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉದ್ದೀಪನಾ ಮದ್ದು ಸೇವಿಸಿ 8 ತಿಂಗಳು ನಿಷೇಧ ಶಿಕ್ಷೆ ಅನುಭವಿಸಿದ್ದ ಪೃಥ್ವಿ, ರಣಜಿ ಟ್ರೋಫಿಯಲ್ಲಿ ಬರೋಡಾ ವಿರುದ್ಧ ದ್ವಿಶತಕ ಸಾಧನೆ ಮಾಡಿದ್ದರು.
ರಣಜಿ ಟ್ರೋಫಿ: ದೆಹಲಿ ತಂಡದಲ್ಲಿ ಇಶಾಂತ್, ಧವನ್
ಟೆಸ್ಟ್‌ನಲ್ಲಿ ಭಾರತ ತಂಡದಲ್ಲಿ ರೋಹಿತ್ ಹಾಗೂ ಮಯಾಂಕ್ ಖಾಯಂ ಆರಂಭಿಕರಾಗಿದ್ದಾರೆ. ಕಿವೀಸ್ ಸರಣಿಗೆ ಮೀಸಲು ಆರಂಭಿಕನಾಗಿ ಪೃಥ್ವಿ ಪ್ರಯತ್ನಿಸಬಹುದಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್. ಕೆ. ಪ್ರಸಾದ್ ಹೇಳಿದ್ದಾರೆ. ಕಳೆದ ವರ್ಷ ವಿಂಡೀಸ್ ವಿರುದ್ಧದ ಟೆಸ್ಟ್ ಪದಾರ್ಪಣೆ ಪಂದ್ಯದಲ್ಲಿ ಪೃಥ್ವಿ, ಶತಕ ಸಿಡಿಸಿದ್ದರು. 4 ದಿನಗಳ ಪಂದ್ಯಕ್ಕೆ ಹನುಮ ವಿಹಾರಿ ನಾಯಕರಾಗಿದ್ದರೆ, ಏಕದಿನ ಮಾದರಿಗೆ ಶುಭ್‌ಮನ್ ತಂಡ ಮುನ್ನಡೆಸಲಿದ್ದಾರೆ. ಏಕದಿನ ತಂಡಕ್ಕೆ ಹಾರ್ದಿಕ್ ಪಾಂಡ್ಯಗೆ ಸ್ಥಾನ ನೀಡಲಾಗಿದೆ. ಬೆನ್ನುಹುರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಹಾರ್ದಿಕ್ ಕಿವೀಸ್ ಸರಣಿ ವೇಳೆಗೆ ಸಂಪೂರ್ಣ ಚೇತರಿಸಿಕೊಳ್ಳುವ ಸಾಧ್ಯತೆಯಿದೆ.