2027ರ ಏಕದಿನ ವಿಶ್ವಕಪ್‌ಗೆ ಭಾರತದ ಟಾಪ್-5 ವೇಗಿಗಳನ್ನು ಆಯ್ಕೆ ಮಾಡಿದ ಅಜಿಂಕ್ಯ ರಹಾನೆ..! ಭುವಿ, ಶಮಿಗಿಲ್ಲ ಸ್ಥಾನ

Published : Oct 26, 2026, 09:12 AM IST
Ajinkya Rahane

ಸಾರಾಂಶ

2027ರ ಏಕದಿನ ವಿಶ್ವಕಪ್‌ಗಾಗಿ ಅಜಿಂಕ್ಯ ರಹಾನೆ ಐವರು ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿದ್ದು, ಅನುಭವಿ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದ್ದಾರೆ. ಯುವ ವೇಗಿಗಳಾದ ಮಯಾಂಕ್ ಯಾದವ್ ಮತ್ತು ಅರ್ಷದೀಪ್ ಸಿಂಗ್‌ಗೆ ಮಣೆ ಹಾಕಿದ್ದಾರೆ. ಅಲ್ಲದೆ, 2027ರ ಅಕ್ಟೋಬರ್ 10ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಮುಂಬೈ: ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ 2027ರ ಏಕದಿನ ವಿಶ್ವಕಪ್ ನಡೆಯಲಿದೆ. ಈ ಟೂರ್ನಿಗೆ ಟೀಂ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ ಐವರು ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಜಸ್ಪ್ರೀತ್ ಬುಮ್ರಾ ನೇತೃತ್ವದ ಈ ಬೌಲಿಂಗ್ ಪಡೆಯಲ್ಲಿ ಯುವಕರಿಗೆ ರಹಾನೆ ಮಣೆ ಹಾಕಿದ್ದಾರೆ. ಆದರೆ, ಅನುಭವಿಗಳಾದ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಅವರನ್ನು ಕೈಬಿಟ್ಟಿದ್ದಾರೆ. ಯುವ ವೇಗಿ ಹರ್ಷಿತ್ ರಾಣಾಗೂ ರಹಾನೆ ಪಟ್ಟಿಯಲ್ಲಿ ಜಾಗ ಸಿಕ್ಕಿಲ್ಲ.

ರಹಾನೆ ಆಯ್ಕೆ ಮಾಡಿದ ಟಾಪ್-5 ಬೌಲರ್‌ಗಳು:

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಹಂಚಿಕೊಂಡಿರುವ ವಿಡಿಯೋದಲ್ಲಿ ರಹಾನೆ ತಮ್ಮ ನೆಚ್ಚಿನ ಐವರು ವೇಗಿಗಳನ್ನು ಹೆಸರಿಸಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಜೊತೆಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಹಾಗೂ ಡೆಲ್ಲಿಯ ಎಕ್ಸ್‌ಪ್ರೆಸ್ ಬೌಲರ್ ಮಯಾಂಕ್ ಯಾದವ್ ಅವರನ್ನು ರಹಾನೆ ತಮ್ಮ ಬಳಗಕ್ಕೆ ಸೇರಿಸಿಕೊಂಡಿದ್ದಾರೆ.

ಗೌತಮ್ ಗಂಭೀರ್ ಕೋಚ್ ಆದ ಬಳಿಕ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುತ್ತಿರುವ ಹರ್ಷಿತ್ ರಾಣಾ ಅವರನ್ನು ರಹಾನೆ ಸೆಲೆಕ್ಟ್ ಮಾಡಿಲ್ಲ. ಇತ್ತೀಚೆಗಷ್ಟೇ ಟಿ20 ತಂಡಕ್ಕೆ ಮರಳಿದ್ದ ಭುವನೇಶ್ವರ್ ಕುಮಾರ್ ಅವರಿಗೂ ಅವಕಾಶ ನೀಡಿಲ್ಲ. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೊಹಮ್ಮದ್ ಶಮಿ ಅವರನ್ನು ಕೈಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಟಿ20ಯಲ್ಲಿ ಮಿಂಚುತ್ತಿರುವ ಅರ್ಷದೀಪ್ ಸಿಂಗ್ ಹಾಗೂ ಇನ್ನೂ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡದ ಮಯಾಂಕ್ ಯಾದವ್ ಅವರನ್ನು ಆಯ್ಕೆ ಮಾಡುವ ಮೂಲಕ ರಹಾನೆ ಅಚ್ಚರಿ ಮೂಡಿಸಿದ್ದಾರೆ. ಬುಮ್ರಾ, ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ 2023ರ ಏಕದಿನ ವಿಶ್ವಕಪ್ ತಂಡದಲ್ಲೂ ಇದ್ದರು.

ಜೋಹಾನ್ಸ್‌ಬರ್ಗ್‌ನಲ್ಲಿ 2027ರ ಅಕ್ಟೋಬರ್ 10ಕ್ಕೆ ಭಾರತ-ಪಾಕ್ ಪಂದ್ಯ

2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 02ರಿಂದ ಆರಂಭವಾಗಲಿದ್ದು, ನವೆಂಬರ್ 21ರವರೆಗೆ 12 ತಂಡಗಳ ನಡುವೆ ನಡೆಯಲಿದೆ. ನಿರೀಕ್ಷೆಯಂತೆಯೇ ಭಾರತ-ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ. ಅ.7ರಂದು ಭಾರತ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇಪ್‌ಟೌನ್‌ನಲ್ಲಿ ಆಡಲಿದ್ದು, ಬದ್ಧವೈರಿ ಪಾಕಿಸ್ತಾನ ವಿರುದ್ಧ ಜೋಹಾನ್ಸ್‌ಬರ್ಗ್‌ನಲ್ಲಿ ಅ.10ರಂದು ಸೆಣಸಾಡಲಿದೆ. ಕ್ವಾಲಿಫೈಯರ್‌ ತಂಡದ ವಿರುದ್ಧ ಅ.14ಕ್ಕೆ ಆಡಲಿರುವ ಭಾರತ, ಬಳಿಕ ಜಿಂಬಾಬ್ವೆ ವಿರುದ್ಧ ಅ.24ಕ್ಕೆ ಮುಖಾಮುಖಿಯಾಗಲಿದೆ. ಸೆಮಿಫೈನಲ್‌ ಪಂದ್ಯಗಳು ನ.17, 18ರಂದು ಕ್ರಮವಾಗಿ ಕೇಪ್‌ಟೌನ್, ಸೆಂಚೂರಿಯನ್‌ನಲ್ಲಿ ನಡೆಯಲಿದ್ದು, ನ.21ರಂದು ವ್ಯಾಂಡರರ್ಸ್‌ನಲ್ಲಿ ಫೈನಲ್‌ ಪಂದ್ಯ ನಿಗದಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

CSK ಗಿಂತ ನಮ್ಮ ಆರ್‌ಸಿಬಿ ಅತ್ಯುತ್ತಮ ತಂಡವಾಗಿದ್ದು ಹೇಗೆ? ಕೊನೆಗೂ ಅಚ್ಚರಿ ಮಾಹಿತಿ ಬಿಚ್ಚಿಟ್ಟ ಎಂ ಎಸ್ ಧೋನಿ..!
Marriage ಬೆನ್ನಲ್ಲೇ ಬ್ರೇಕಪ್: ನಟನ ಮೊದಲ ರಿಯಾಕ್ಷನ್! ಕ್ರಿಕೆಟರ್ ಜೊತೆ ಡೇಟಿಂಗ್‌ನಲ್ಲಿದ್ದಾರಾ ಮಾಜಿ ಪ್ರೇಯಸಿ?