
ಲಾಹೋರ್: ತ್ರಿಕೋನ ಸರಣಿಯ ಭಾಗವಾಗಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ತನ್ನ ಖಾಯಂ ಹಸಿರು ಜೆರ್ಸಿ ಬದಲು ಪಿಂಕ್ ಜೆರ್ಸಿ ತೊಟ್ಟು ಮೈದಾನಕ್ಕಿಳಿಯಿತು. ಲಾಹೋರ್‌ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಪಾಕ್ ಆಟಗಾರರು ಗುಲಾಬಿ ಬಣ್ಣದ ಜೆರ್ಸಿಯಲ್ಲಿ ಗಮನ ಸೆಳೆದರು.
ಸ್ತನ ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸಲು (ಪಿಂಕ್‌ಟೋಬರ್) ಪಾಕಿಸ್ತಾನ ತಂಡ ಈ ವಿಶೇಷ ಪಿಂಕ್ ಜೆರ್ಸಿ ಧರಿಸಿದೆ. 'ಪಿಂಕ್ ರಿಬ್ಬನ್ ಪಾಕಿಸ್ತಾನ್' ಸಂಸ್ಥೆ ಜೊತೆ ಸೇರಿ ಪಿಸಿಬಿ (PCB) ಈ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಕ್ಯಾನ್ಸರ್ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಹಾಗೂ ಆರಂಭಿಕ ಹಂತದಲ್ಲೇ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವಂತೆ ಜನರನ್ನು ಪ್ರೇರೇಪಿಸಲು ಕ್ರಿಕೆಟ್‌ನ ಜನಪ್ರಿಯತೆಯನ್ನು ಬೋರ್ಡ್ ಬಳಸಿಕೊಳ್ಳುತ್ತಿದೆ.
ಸ್ತನ ಕ್ಯಾನ್ಸರ್ ಪೀಡಿತರು ಮತ್ತು ಅದರಿಂದ ಗುಣಮುಖರಾದವರಿಗೆ ಬೆಂಬಲ ಸೂಚಿಸಲು ಜೆರ್ಸಿ ಬದಲಾಯಿಸಿದ್ದಷ್ಟೇ ಅಲ್ಲದೆ, ಎರಡೂ ತಂಡಗಳ ಆಟಗಾರರು, ಮ್ಯಾಚ್ ಅಫಿಷಿಯಲ್ಸ್ ಹಾಗೂ ಕೋಚಿಂಗ್ ಸಿಬ್ಬಂದಿ ಕೂಡ ಪಿಂಕ್ ರಿಬ್ಬನ್ ಧರಿಸಿ ಪಂದ್ಯದಲ್ಲಿ ಪಾಲ್ಗೊಂಡಿದ್ದರು. ಪಾಕಿಸ್ತಾನ ತಂಡ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಪಿಂಕ್ ಜೆರ್ಸಿ ತೊಡುತ್ತಿರುವುದು ಇದೇ ಮೊದಲೇನಲ್ಲ. 2025ರ ಅಕ್ಟೋಬರ್‌ನಲ್ಲಿ ರಾವಲ್ಪಿಂಡಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲೂ ಪಿಸಿಬಿ ಇದೇ ರೀತಿ ಪಿಂಕ್ ಕಿಟ್ ಪರಿಚಯಿಸಿತ್ತು.
ಲಾಹೋರ್: ಪಾಕಿಸ್ತಾನದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಸತತ 2ನೇ ಪಂದ್ಯದಲ್ಲಿ ಆಘಾತ ಅನುಭವಿಸಿದೆ. ಕೆಲ ದಿನಗಳ ಹಿಂದೆ ಶ್ರೀಲಂಕಾ ವಿರುದ್ಧ 429 ರನ್ ರಕ್ಷಿಸಿಕೊಳ್ಳಲು ವಿಫಲವಾಗಿದ್ದ ಇಂಗ್ಲೆಂಡ್, ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಬೆನ್ ಡಕೆಟ್ (105)ರ ಶತಕದ ನೆರವಿನಿಂದ 46.4 ಓವರಲ್ಲಿ 241 ರನ್ ಗಳಿಸಿತು. ಪಾಕಿಸ್ತಾನ 154 ರನ್‌ಗೆ 9 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದ್ದಾಗ 10ನೇ ವಿಕೆಟ್‌ಗೆ ಶದಾಬ್ ಖಾನ್ ಜೊತೆ ಹ್ಯಾರಿಸ್ ರೌಫ್ (ಔಟಾಗದೆ 7 ರನ್) ದಾಖಲೆಯ 89 ರನ್ ಸೇರಿಸಿ ತಂಡಕ್ಕೆ 1 ವಿಕೆಟ್ ರೋಚಕ ಗೆಲುವು ತಂದುಕೊಟ್ಟರು. ಶದಾಬ್ 96 ಎಸೆತದಲ್ಲಿ ಔಟಾಗದೆ 113 ರನ್ ಗಳಿಸಿದರು. ಪಾಕಿಸ್ತಾನ 47.1 ಓವರಲ್ಲಿ 9 ವಿಕೆಟ್‌ಗೆ 243 ರನ್ ಗಳಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.