Nari Contractor 60 ವರ್ಷ ಹಿಂದೆ ಟೀಂ ಇಂಡಿಯಾ ಅಟಗಾರನ ತಲೆಗೆ ಹಾಕಿದ್ದ ಲೋಹದ ಪ್ಲೇಟ್‌ ಹೊರಕ್ಕೆ!

Published : Apr 07, 2022, 09:08 AM IST
Nari Contractor 60 ವರ್ಷ ಹಿಂದೆ ಟೀಂ ಇಂಡಿಯಾ ಅಟಗಾರನ ತಲೆಗೆ ಹಾಕಿದ್ದ ಲೋಹದ ಪ್ಲೇಟ್‌ ಹೊರಕ್ಕೆ!

ಸಾರಾಂಶ

* ಟೀಂ ಇಂಡಿಯಾ ಮಾಜಿ ನಾಯಕ ನಾರಿ ಕಂಟ್ರ್ಯಾಕ್ಟರ್ ಅವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ * 60 ವರ್ಷಗಳ ಹಿಂದೆ ತಲೆಯಲ್ಲಿ ಅಳವಡಿಸಲಾಗಿದ್ದ ಲೋಹದ ಪ್ಲೇಟ್ ಹೊರಕ್ಕೆ * 88 ವರ್ಷದ ಕಂಟ್ರ್ಯಾಕ್ಟರ್‌ ಆರೋಗ್ಯ ಸ್ಥಿರವಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ

ಮುಂಬೈ(ಏ.07): 60 ವರ್ಷಗಳ ಹಿಂದೆ ಎಂದರೆ 1962ರಲ್ಲಿ ಬಾರ್ಬೊಡೊಸ್‌(ವೆಸ್ಟ್‌ಇಂಡೀಸ್‌)ನ ದೈತ್ಯ ವೇಗಿ ಚಾರ್ಲಿ ಗ್ರಿಫಿಥ್‌ (Charlie Griffith) ಎಸೆದ ಬೌನ್ಸರ್‌, ಭಾರತ ತಂಡದ ಅಂದಿನ ನಾಯಕರಾಗಿದ್ದ ನಾರಿ ಕಂಟ್ರ್ಯಾಕ್ಟರ್‌ಗೆ (Nari Contractor) ತಲೆಗೆ ಬಡಿದು ಆಸ್ಪತ್ರೆ ಸೇರುವಂತೆ ಮಾಡಿತ್ತು. ದೊಡ್ಡ ಪ್ರಮಾಣದಲ್ಲಿ ರಕ್ತ ಕಳೆದುಕೊಂಡಿದ್ದ ಕಂಟ್ರ್ಯಾಕ್ಟರ್‌ರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಅವರ ತಲೆಯಲ್ಲಿ ಲೋಹದ ಪ್ಲೇಟ್‌ವೊಂದನ್ನು ಅಳವಡಿಸಲಾಗಿತ್ತು. ಆ ಪ್ಲೇಟ್‌ ಅನ್ನು ಬುಧವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಯಿತು. 88 ವರ್ಷದ ಕಂಟ್ರ್ಯಾಕ್ಟರ್‌ ಆರೋಗ್ಯ ಸ್ಥಿರವಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದ್ದು, ಅವರ ಆರೋಗ್ಯ ಕೂಡಾ ಸ್ಥಿರವಾಗಿದ್ದು, ಸದ್ಯದಲ್ಲೇ ಚೇತರಿಸಿಕೊಳ್ಳಲಿದ್ದಾರೆ. ಇನ್ನು ಕೆಲವು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿಯೇ ಉಳಿಯಲಿದ್ದಾರೆ ಹಾಗೂ ವೈದ್ಯರ ಸಲಹೆಯ ಬಳಿಕವಷ್ಟೇ ನಾವು ಅವರನ್ನು ಮನೆಗೆ ಕರೆದೊಯ್ಯಲಿದ್ದೇವೆ. ಪ್ಲೇಟ್‌ ತೆಗೆಯುವ ಸಂದರ್ಭದಲ್ಲಿ ತಲೆಯ ಭಾಗದ ಚರ್ಮವನ್ನು ತೆಗೆಯಲಾಗಿದೆ. ಅದು ಕೂಡಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತಗುಲಲಿದೆ. ನಾವೆಲ್ಲರೂ ಆಪರೇಷನ್ ವೇಳೆ ಕೊಂಚ ಆತಂಕಕ್ಕೆ ಒಳಗಾಗಿದ್ದೆವು. ಎಲ್ಲವೂ ಒಳ್ಳೆಯದಾದಂತೆ ಆಗಿದೆ ಎಂದು ನಾರಿ ಕಂಟ್ರ್ಯಾಕ್ಟರ್‌ ಪುತ್ರ ಹೋಶಿದಾರ್ ತಿಳಿಸಿದ್ದಾರೆ. 

88 ವರ್ಷದ ನಾರಿ ಕಂಟ್ರ್ಯಾಕ್ಟರ್‌, ಭಾರತ ಕ್ರಿಕೆಟ್ ತಂಡದ (Indian Cricket Team) ಪರ 31 ಟೆಸ್ಟ್ ಹಾಗೂ 138 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಎಡಗೈ ಆರಂಭಿಕ ಬ್ಯಾಟರ್ ಆಗಿದ್ದ ಕಂಟ್ರ್ಯಾಕ್ಟರ್, 1955ರಿಂದ 1972ರವರೆಗೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ದೈತ್ಯ ವೇಗಿ ಚಾರ್ಲಿ ಗ್ರಿಫಿಥ್‌ ಎಸೆದ ಬೌನ್ಸರ್, ನಾರಿ ಕಂಟ್ರ್ಯಾಕ್ಟರ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕನ್ನೇ ಅಂತ್ಯಗೊಳಿಸಿಬಿಟ್ಟಿತ್ತು. ಹೀಗಿದ್ದೂ ನಾರಿ ಕಂಟ್ರ್ಯಾಕ್ಟರ್, ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ಮೂಲಕ ಹಲವಾರು ಪಂದ್ಯಗಳನ್ನಾಡಿದ್ದರು. 

10 IPL ಟ್ರೋಫಿ ಗೆದ್ದಿರುವ 3 ತಂಡಗಳು ಒಂದೂ ಪಂದ್ಯ ಗೆದ್ದಿಲ್ಲ..!

ಇನ್ನು 1959ರಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್‌ ಮೈದಾನದಲ್ಲಿ (Lord's Stadium) ಇಂಗ್ಲೆಂಡ್ ಎದುರು ನಡೆದ ಪಂದ್ಯದಲ್ಲಿ ತಮ್ಮ ಪಕ್ಕೆಲುಬಿಗೆ ಬಲವಾದ ಪೆಟ್ಟು ಬಿದ್ದು ಗಾಯಗೊಂಡಿದ್ದರೂ ಸಹಾ 81 ರನ್ ಬಾರಿಸಿದ್ದು, ಅವರು ಕ್ರಿಕೆಟ್ ಮೇಲೆ ಹೊಂದಿದ್ದ ಬದ್ದತೆಯನ್ನು ತೋರಿಸುತ್ತದೆ. ಇನ್ನು ಅದೇ ವರ್ಷದ ಕೊನೆಯಲ್ಲಿ ಕಾನ್ಪುರಲ್ಲಿ, ಅಸ್ಟ್ರೇಲಿಯಾ ಎದುರು ನಡೆದ ಪಂದ್ಯದಲ್ಲಿ ನಾರಿ ಕಂಟ್ರ್ಯಾಕ್ಟರ್ ಆಕರ್ಷಕ 74 ರನ್ ಚಚ್ಚುವ ಮೂಲಕ ಭಾರತ ತಂಡವು ಮೊದಲ ಬಾರಿಗೆ ಆಸ್ಟ್ರೇಲಿಯಾ ಎದುರು ಟೆಸ್ಟ್ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 2007ರಲ್ಲಿ ಬಿಸಿಸಿಐ, ಅವರ ಸಾಧನೆಯನ್ನು ಗುರುತಿಸಿ ನಾರಿ ಕಂಟ್ರ್ಯಾಕ್ಟರ್ ಅವರಿಗೆ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತ್ತು.

ಏಕೈಕ ಟಿ20: ಪಾಕಿಸ್ತಾನ ವಿರುದ್ಧ ಆಸೀಸ್‌ಗೆ ಜಯ

ಲಾಹೋರ್‌: ಆತಿಥೇಯ ಪಾಕಿಸ್ತಾನ ವಿರುದ್ಧದ ಏಕೈಕ ಟಿ20 ಪಂದ್ಯದಲ್ಲಿ ಆಸ್ಪ್ರೇಲಿಯಾ 3 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 24 ವರ್ಷಗಳ ಬಳಿಕ ಪಾಕ್‌ಗೆ ಕೈಗೊಂಡಿದ್ದ ಪ್ರವಾಸವನ್ನು ಗೆಲುವಿನೊಂದಿಗೆ ಕೊನೆಗೊಳಿಸಿದೆ. ಟೆಸ್ಟ್‌ ಸರಣಿಯಲ್ಲಿ ಆಸೀಸ್‌ 1-0 ಗೆದ್ದಿದ್ದರೆ, ಏಕದಿನ ಸರಣಿಯಯನ್ನು ಪಾಕ್‌ 2-1 ಅಂತರದಲ್ಲಿ ವಶಪಡಿಸಿಕೊಂಡಿತ್ತು. 

ಮೊದಲು ಬ್ಯಾಟ್‌ ಮಾಡಿದ ಪಾಕ್‌ 8 ವಿಕೆಟ್‌ಗೆ 162 ರನ್‌ ಕಲೆ ಹಾಕಿತು. ಬಾಬರ್‌ ಆಜಂ(66) ಅರ್ಧಶತಕ ಬಾರಿಸಿದರೆ, ಕುಶ್ದಿಲ್‌ ಶಾ 24, ರಿಜ್ವಾನ್‌ 23 ರನ್‌ ಕೊಡುಗೆ ನೀಡಿದರು. ನೇಥನ್‌ ಎಲ್ಲಿಸ್‌ 4 ವಿಕೆಟ್‌ ಕಿತ್ತರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸೀಸ್‌ 19.1 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು. ಆ್ಯರೋನ್‌ ಫಿಂಚ್‌(55), ಟ್ರ್ಯಾವಿಸ್‌ ಹೆಡ್‌ (26) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!
ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!