ಅಫ್ಘಾನಿಸ್ತಾನ ಕ್ರಿಕೆಟಿಗನ ಕಾರು ಅಪಘಾತ; ವಾಹನ ಪುಡಿ ಪುಡಿ!

By Suvarna NewsFirst Published Jun 21, 2020, 11:02 PM IST
Highlights

ಕೊರೋನಾ ವೈರಸ್‌ನಿಂದ ಅಫ್ಘಾನಿಸ್ತಾನ ಕ್ರಿಕೆಟಿಗರು ಕಂಗಾಲಾಗಿ ಹೋಗಿದ್ದಾರೆ. ಅಫ್ಘಾನ್ ಕ್ರಿಕೆಟ್ ಮಂಡಳಿ ಆಟಗಾರರ ವೇತನ ಕಡಿತ ಮಾಡಿದೆ. ಇದರ ಬೆನ್ನಲ್ಲೇ ಅಫ್ಘಾನಿಸ್ತಾನ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಅಫ್ಸರ್ ಝಝೈ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದೆ.

ಕಾಬೂಲ್(ಜೂ.21): ಕೊರೋನಾ ವೈರಸ್ ಕಾರಣ ಕ್ರಿಕೆಟ್ ಟೂರ್ನಿಗಳು ಸ್ಥಗಿತಗೊಂಡಿದೆ. ಮೊದಲ ಆರ್ಥಿಕ ಸಂಕಷ್ಟದಲ್ಲಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರ ವೇತನ ಕಡಿತ ಮಾಡಿದೆ. ಕೊರೋನಾ ಹೊಡೆತದ ಬೆನ್ನಲ್ಲೇ ಅಫ್ಘಾನಿಸ್ತಾನ ಯುವ ಕ್ರಿಕೆಟಿಗ ಅಫ್ಸರ್ ಝಝೈ ಕಾರು ಅಪಘಾತವಾಗಿದೆ. ಕಾರು ಸಂಪೂರ್ಣ ಪುಡಿ ಪುಡಿಯಾಗಿದೆ. ಅದೃಷ್ಟವಶಾತ್ ಅಫ್ಸರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಆಗಸ್ಟ್‌ಗೆ ಮುಗಿಯಲಿದೆ ನಿಷೇಧ; ಕ್ರಿಕೆಟ್‌ಗೆ ಮರಳಲು ಶ್ರೀಶಾಂತ್ ಅಭ್ಯಾಸ ಶುರು!

ವೈಯುಕ್ತಿ ಕಾರಣಕ್ಕೆ ತೆರಳುತ್ತಿದ್ದ ವೇಳೆ ಅಫ್ಸರ್ ಕಾರು ಅಪಘಾತಕ್ಕೆ ತುತ್ತಾಗಿದೆ. ಎದುರಿನಿಂದ ಬಂದ ಬಸ್‌ಗೆ ಡಿಕ್ಕಿಯಾದ ಪರಿಣಾಮ ಕಾರು ಪುಡಿ ಪುಡಿಯಾಗಿದೆ. ಎರಡೂ ವಾಹನಗಳು ವೇಗವಾಗಿ ಚಲಿಸುತ್ತಿದ್ದ ಕಾರಣ ಭೀಕರ ಅಪಘಾತ ಸಂಭವಿಸಿದೆ. ಅಫ್ಸರ್ ತಲೆಗೆ ಸಣ್ಣ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. 

ಅಫ್ಸರ್ ಅಪಘಾತ ಕುರಿತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮಾಜಿ ಮ್ಯಾನೇಜರ್ ಟ್ವಿಟ್ ಮೂಲಕ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

 

National cricketer wicket-keeper batsman survived in a car accident with a minor injuries in his head but his car damaged most.
May Allah bless you 🙏 get well soon bro. pic.twitter.com/6MJdVSfWzX

— M.ibrahim Momand (@IbrahimReporter)

ಕೊರೋನಾ ವೈರಸ್ ಹೊಡೆತದಿಂದ ನಲುಗಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ಇದೀಗ ಪ್ರಮುಖ ವಿಕೆಟ್ ಕೀಪರ್ ಕಾರು ಅಪಘಾತಕ್ಕೆ ತುತ್ತಾಗಿರುವುದು ಆತಂಕ ಹೆಚ್ಚಿಸಿದೆ
 

click me!