
ಸಿಡ್ನಿ(ಜೂ.21): ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಆದರೆ ಇಂಜುರಿ ಸಮಸ್ಯೆಯಿಂದ ಕೆಲ ಆವೃತ್ತಿಗಳಿಂದ ಸ್ಟಾರ್ಕ್ ಹೊರಗುಳಿದಿದ್ದಾರೆ. 2018ರಲ್ಲಿ ಮಿಚೆಲ್ ಸ್ಟಾರ್ಕ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಸೇರಿಕೊಂಡಿದ್ದರು. ಆದರೆ ಗಾಯಗೊಂಡ ಕಾರಣ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿಲ್ಲ. ಹೀಗಾಗಿ ತನ್ನ ವಿಮಾ ಮೊತ್ತವನ್ನು ನೀಡಬೇಕು ಎಂದು ಕೋರ್ಟ್‌ಗೆ ಮಹತ್ವದ ದಾಖಲೆ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 26ರಿಂದ ನವೆಂಬರ್ 08ರ ವರೆಗೂ ಐಪಿಎಲ್?
ಐಪಿಎಲ್ ಆಟಗಾರರ ಖರೀದಿ ಬಳಿಕ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಈ ವೇಳೆ ಆಟಗಾರರು ಪಡೆಯುವ ಸಂಭಾವನೆ ಮೇಲೆ ವಿಮೆ ಮಾಡಿಸಲಾಗುತ್ತದೆ. ಆಟಗಾರರ ಇಂಜುರಿ ಸೇರಿದಂತೆ ಇತರ ಕಾರಣಗಳಿಗ ಈ ವಿಮೆ ಮುಖ್ಯವಾಗಿದೆ. ಹೀಗೆ 2018ರಲ್ಲಿ ಮಿಚೆಲ್ ಸ್ಟಾರ್ಕ್ ಗಾಯಗೊಂಡ ಕಾರಣ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿಲ್ಲ. ಸಂಭಾವನೆ ವಿಮೆ ಮೊತ್ತ ನೀಡಲು ಇನ್ಶುರೆನ್ಸ್ ಕಂಪನಿ ನಿರಾಕರಿಸಿತ್ತು. ಇದರ ವಿರುದ್ಧ ಕಾನೂನು ಸಮರ ಆರಂಭಿಸಿದ ಸ್ಟಾರ್ಕ್ ಇದೀಗ ತಾನು ಗಾಯಗೊಂಡ ವಿಡಿಯೋವನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಯುಎಇನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಪ್ಲ್ಯಾನ್
2018ರಲ್ಲಿ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಗಾಯಗೊಂಡಿದ್ದರು. ಈ ವೇಳೆ ಪಂದ್ಯ ಪ್ರಸಾರ ಮಾಡಿದ್ದ ಸ್ಕೈ ಸ್ಪೋರ್ಟ್ ವಾಹಿನಿಯಿಂದ ಸ್ಟಾರ್ಕ್ ಗಾಯಗೊಂಡ ವಿಡಿಯೋವನ್ನು ಹುಡುಕಿ ತೆಗೆದು ಕೋರ್ಟ್‌ಗೆ ಸಲ್ಲಿಸಲಾಗಿದೆ. ಇಷ್ಟೇ ತನ್ನ 1.53 ಮಿಲಿಯನ್ ಅಮೆರಿಕ ಡಾಲರ್ ವಿಮೆ ಮೊತ್ತವನ್ನು ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.