ವಿಂಡೀಸ್‌ಗೆ ತಿರುಗೇಟು ನೀಡಿದ ಭಾರತ, ಕೊಹ್ಲಿ ಸೈನ್ಯಕ್ಕೆ ಟಿ20 ಸರಣಿ!

By Web DeskFirst Published Dec 11, 2019, 10:48 PM IST
Highlights

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಟೀಂ ಇಂಡಿಯಾ ಪಾಲಾಗಿದೆ. 1-1 ಅಂತರದಲ್ಲಿ ಸಮಬಲಗೊಂಡಿದ್ದ ಸರಣಿಯ ಅಂತಿಮ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಜಯಭೇರಿ ಬಾರಿಸೋ ಮೂಲಕ ಟೀಂ ಇಂಡಿಯಾ ಇತಿಹಾಸ ರಚಿಸಿದೆ.

ಮುಂಬೈ(ಡಿ.11): ವೆಸ್ಟ್ ಇಂಡೀಸ್ ವಿರುದ್ದದ 3ನೇ ಹಾಗೂ ಅಂತಿಮ ಟಿ20  ಪಂದ್ಯದಲ್ಲಿ ಟೀಂ ಇಂಡಿಯಾ 67 ರನ್ ಗೆಲುವು ಸಾಧಿಸಿದೆ. ಮುಂಬೈ ಪಂದ್ಯ ಗೆಲ್ಲುವ ಮೂಲಕ 2ನೇ ಪಂದ್ಯದ ಸೋಲು ಮಾತ್ರವಲ್ಲ, 2016ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದ ಸೋಲಿಗೂ ತಿರುಗೇಟು ನೀಡಿದೆ. ನಿರ್ಣಾಯಕ ಪಂದ್ಯ ಗೆದ್ದ ಭಾರತ, 2-1 ಅಂತರದಲ್ಲಿ ವಶಪಡಸಿಕೊಂಡಿದೆ.

ಇದನ್ನೂ ಓದಿ: ಗಾಯಾಳು ಧವನ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡ ಮಯಾಂಕ್!

ಗೆಲುವಿಗೆ 241 ರನ್ ಬೃಹತ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್‌ಗೆ ಆರಂಭದಲ್ಲೇ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಶಾಕ್ ನೀಡಿದರು. ಲಿಂಡ್ಲ್ ಸಿಮೋನ್ಸ್ 7 ಹಾಗೂ ಬ್ರ್ಯಾಂಡನ್ ಕಿಂಗ್ 5 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ದೀಪಕ್ ಚಹಾರ್ ದಾಳಿಗೆ ನಿಕೋಲಸ್ ಪೂರನ್ ವಿಕೆಟ್ ಕೈಚೆಲ್ಲಿದರು. 17 ರನ್‌ಗೆ 3 ವಿಕೆಟ್ ಕಬಳಿಸಿದ ಭಾರತ, ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಇದನ್ನೂ ಓದಿ: ನಿರ್ಣಾಯಕ ಟಿ20: ವಿಂಡೀಸ್‌ಗೆ ಬೃಹತ್ ಟಾರ್ಗೆಟ್ ನೀಡಿದ ಭಾರತ!

ಶಿಮ್ರೊನ್ ಹೆಟ್ಮೆಯರ್ ಹಾಗೂ ನಾಯಕ ಕೀರನ್ ಪೊಲಾರ್ಡ್ ಜೊತೆಯಾಟದಿಂದ ವಿಂಡೀಸ್ ಚೇತರಿಕೆ ಕಂಡಿತು. ಹೆಟ್ಮೆಯರ್ 24  ಎಸೆತದಲ್ಲಿ 41 ರನ್ ಸಿಡಿಸಿ ಔಟಾದರು. ಜೇಸನ್ ಹೋಲ್ಡರ್ ಕೇವಲ 8 ರನ್ ಸಿಡಿಸಿ ಹೊರ ನಡೆದರು. ಆಸರೆಯಾಗಿದ್ದ ಕೀನರ್ ಪೊಲಾರ್ಡ್‌ಗೆ ಭುವನೇಶ್ವರ್ ಕುಮಾರ್ ಪೆವಿಲಿಯನ್ ಹಾದಿ ತೋರಿಸಿದರು. ಪೊಲಾರ್ಡ್ 39 ಎಸೆತದಲ್ಲಿ 68 ರನ್ ಸಿಡಿಸಿ ಔಟಾದರು. 

ಹೈಡನ್ ವಾಲ್ಶ್ 11 ರನ್ ಕಾಣಿಕೆ ನೀಡಿದರು.  ಕೆಸ್ರಿಕ್ ವಿಲಿಯಮ್ಸ್ ಅಜೇಯ 13 ರನ್ ಸಿಡಿಸಿದರು. ಈ ಮೂಲಕ ವೆಸ್ಟ್ ಇಂಡೀಸ್  8 ವಿಕೆಟ್ ಕಳೆದುಕೊಂಡು 173 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಭಾರತ 67 ರನ್ ಗೆಲುವು ಸಾಧಿಸೋ ಮೂಲಕ ಪಂದ್ಯ ಮಾತ್ರವಲ್ಲ, ಟಿ20 ಸರಣಿ ಗೆದ್ದುಕೊಂಡಿತು. 
 

click me!