ಇವರಿಬ್ಬರಿಗೆ ಬೌಲಿಂಗ್‌ ಮಾಡೋ ಬೌಲರ್ಸ್‌ ಭೂಮಿಯಲ್ಲಿ ಹುಟ್ಟಿದ್ದಾರಾ? ಅಭಿಷೇಕ್-ವೈಭವ್ ಆಟಕ್ಕೆ ದಂಗಾದ ಇಯಾನ್ ಸ್ಮಿತ್, ರವಿಶಾಸ್ತ್ರಿ!

Published : Oct 27, 2026, 07:11 PM IST
Ravi Shastri Ian Smith

ಸಾರಾಂಶ

ವೆಲ್ಲಿಂಗ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು 15 ವರ್ಷದ ವೈಭವ್ ಸೂರ್ಯವಂಶಿ ಐತಿಹಾಸಿಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇವರಿಬ್ಬರ ಅಬ್ಬರದಿಂದ ಟೀಮ್ ಇಂಡಿಯಾ ಪವರ್‌ಪ್ಲೇನಲ್ಲಿ 118 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದೆ.

ವೆಲ್ಲಿಂಗ್ಟನ್‌ (ಅ.27): ವೆಲ್ಲಿಂಗ್ಟನ್‌ ಮೈದಾನದಲ್ಲಿ ಕಿವೀಸ್ ಬೌಲರ್‌ಗಳ ಮೇಲೆ ಭಾರತೀಯ ಯುವ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ 15 ವರ್ಷದ ವೈಭವ್ ಸೂರ್ಯವಂಶಿಯ ರೌದ್ರಾವತಾರ ಇಡೀ ಕ್ರಿಕೆಟ್ ಜಗತ್ತನ್ನೇ ಕಂಗಾಲು ಮಾಡಿದೆ. ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 199 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ, ಮೊದಲ 6 ಓವರ್‌ಗಳ ಪವರ್‌ಪ್ಲೇನಲ್ಲೇ ಬರೋಬ್ಬರಿ 118 ರನ್ ಚಚ್ಚಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಪವರ್‌ಪ್ಲೇ ಸ್ಕೋರ್ (Highest Powerplay Total in T20I History) ದಾಖಲಿಸಿತು.

ಮೈದಾನದ ಪ್ರತಿಯೊಂದು ದಿಕ್ಕಿಗೂ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆ ಗೈದ ಈ ಯುವ ಜೋಡಿಯ ಅಬ್ಬರವನ್ನು ನೋಡಿ ಮೈಕ್ ಹಿಡಿದಿದ್ದ ವಿಶ್ವಪ್ರಸಿದ್ಧ ದಿಗ್ಗಜ ಕಾಮೆಂಟೇಟರ್ಸ್‌ಗಳಾದ 'ಇಯಾನ್ ಸ್ಮಿತ್' (Ian Smith) ಹಾಗೂ 'ರವಿಶಾಸ್ತ್ರಿ' (Ravi Shastri) ಸಂಪೂರ್ಣವಾಗಿ ಫಿದಾ ಆಗಿ, ಮೈದಾನದಲ್ಲೇ ಉದ್ಗಾರ ತೆಗೆದಿದ್ದಾರೆ!

ವೈರಲ್‌ ಆದ ಇಯಾನ್ ಸ್ಮಿತ್ & ರವಿಶಾಸ್ತ್ರಿ ಮಾತು

ನ್ಯೂಜಿಲೆಂಡ್‌ನ ಪ್ರಸಿದ್ಧ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಇಯಾನ್ ಸ್ಮಿತ್ ಮತ್ತು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಆನ್-ಏರ್‌ನಲ್ಲೇ ನೀಡಿದ ವೈಲ್ಡ್ ಹಾಗೂ ರೋಮಾಂಚನಕಾರಿ ಕಾಮೆಂಟ್ರಿ ಕ್ರೀಡಾಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. 'ಓಹ್, ಇದು ಅತ್ಯಂತ ಅದ್ಭುತ ಮತ್ತು ಅಪರೂಪದ ದೃಶ್ಯ! ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ನ್ಯೂಜಿಲೆಂಡ್‌ ಬೌಲಿಂಗ್ ಪಡೆಯನ್ನು ಸಂಪೂರ್ಣವಾಗಿ ಚೂರು ಚೂರು ಮಾಡುತ್ತಿದ್ದಾರೆ! ನನ್ನ ಇಡೀ ಜೀವಮಾನದಲ್ಲಿ ಪವರ್‌ಪ್ಲೇ ಒಂದರಲ್ಲಿ ಇಂತಹ ಭೀಕರ ಬ್ಯಾಟಿಂಗ್ ಅನ್ನು ನಾನು ಎಂದೂ ನೋಡಿಲ್ಲ. ಪ್ರತಿಯೊಂದು ಎಸೆತವೂ ಮೈದಾನದಿಂದ ಹೊರಗೆ ಹೋಗುತ್ತಿದೆ! ದೇವರೆ, ಇವರಿಬ್ಬರಿಗೆ ಬೌಲಿಂಗ್ ಮಾಡಲು ಬೌಲರ್ಸ್‌ ಈ ಭೂಮಿಯಲ್ಲಿ ಇದ್ದಾರಾ? ಎಂದು ಇಯಾನ್‌ ಸ್ಮಿತ್‌ ಮಾತನಾಡಿದ್ದಾರೆ.

ಇನ್ನು ರವಿಶಾಸ್ತ್ರಿ ಕೂಡ, 'ಕೇವಲ 6 ಓವರ್‌ಗಳಲ್ಲಿ 118 ರನ್‌ಗಳು! ನಿಮ್ಮ ಕಣ್ಣುಗಳನ್ನು ನೀವೇ ನಂಬಲು ಸಾಧ್ಯವೇ? ಇದು ಸಂಪೂರ್ಣ ವಿನಾಶಕಾರಿ ರೌದ್ರಾವತಾರ! ಅಭಿಷೇಕ್ ಶರ್ಮಾ ಮತ್ತು ಯುವ ಆಟಗಾರ ವೈಭವ್ ಸೂರ್ಯವಂಶಿ ದಾಖಲೆಗಳ ಪುಸ್ತಕವನ್ನೇ ಮರುಬರಹ ಮಾಡಿದ್ದಾರೆ! ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಪವರ್‌ಪ್ಲೇ ಸ್ಕೋರ್ ಇದು! ನಿಮಗೊಂದು ಬಿಗ್ ಸೆಲ್ಯೂಟ್, ಹುಡುಗರೇ.. ಇದು ನಿಜಕ್ಕೂ ಬೇರೆ ಯಾವುದೋ ಗ್ರಹದಿಂದ ಬಂದು ಮಾಡುತ್ತಿರುವ ಬ್ಯಾಟಿಂಗ್' ಎಂದು ಮಾತನಾಡಿದ್ದಾರೆ.

ಒಂದೆಡೆ 15ರ ಹರೆಯದ ಬಿಹಾರದ ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 45 ರನ್ ಚಚ್ಚಿ ಔಟಾದರೆ, ಇನ್ನೊಂದೆಡೆ ಅಭಿಷೇಕ್ ಶರ್ಮಾ ಬೌಲರ್‌ಗಳ ಮೇಲೆ ಕರುಣೆಯೇ ಇಲ್ಲದೆ ಎರಗಿಬಿದ್ದರು. ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್, 35 ಎಸೆತಗಳಲ್ಲಿ ತಮ್ಮ ಸ್ಫೋಟಕ ಶತಕವನ್ನು ಪೂರೈಸಿದರು. ಅಂತಿಮವಾಗಿ 38 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನಿಂದ 113 ರನ್ ಸಿಡಿಸಿ ಪಂದ್ಯವನ್ನು ಭಾರತದ ಗೆಲುವನ್ನು ತೀರಾ ಸರಳ ಮಾಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

19ನೇ ಓವರ್‍‌ನಲ್ಲಿ ಹೈ-ಲೆವೆಲ್ ನಾಟಕ; ಆ ದೊಡ್ಡ ಮಿಸ್ಟೇಕ್ಸ್‌ಗೆ ಅಕ್ಸರ್ ಪಟೇಲ್ ಕೋಪಿಸಿಕೊಂಡಿದ್ದು ಯಾರ ಮೇಲೆ?
40 ಲಕ್ಷ ಬೆಲೆ ಬಾಳುವ‌ ಮನೆಯಲ್ಲಿ ಸೂರ್ಯವಂಶಿ ವಾಸ, ಅಲ್ಲಿ ಮರೆಯಲಾಗದ ಜಾಗವೊಂದು ಇದೆ! ಅದರ ವಿಶೇಷತೆ ಏನು?