
ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ತಂಡದ ಓಪನರ್ ಅಭಿಷೇಕ್ ಶರ್ಮಾ, ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶತಕ ಸಿಡಿಸಿ ಅಪರೂಪದ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೈದರಾಬಾದ್‌ನ ಉಪ್ಪಳ ಸ್ಟೇಡಿಯಂನಲ್ಲಿ ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಭಿಷೇಕ್, ಕೇವಲ 47 ಎಸೆತಗಳಲ್ಲಿ ತಮ್ಮ ಎರಡನೇ ಐಪಿಎಲ್ ಶತಕ ಪೂರೈಸಿದರು. ಈ ಮೂಲಕ, ಐಪಿಎಲ್‌ನಲ್ಲಿ 50ಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೊಸ ಇತಿಹಾಸ ಬರೆದರು.
ಅಷ್ಟೇ ಅಲ್ಲ, ಒಂದೇ ಐಪಿಎಲ್ ಇನ್ನಿಂಗ್ಸ್‌ನಲ್ಲಿ ಎರಡು ಬಾರಿ 10 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಅಭಿಷೇಕ್ ತಮ್ಮದಾಗಿಸಿಕೊಂಡರು. 2025ರಲ್ಲಿ ಪಂಜಾಬ್ ವಿರುದ್ಧ 55 ಎಸೆತಗಳಲ್ಲಿ 141 ರನ್ ಗಳಿಸಿದ್ದಾಗಲೂ ಅಭಿಷೇಕ್ 10 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಐಪಿಎಲ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಇನ್ನಿಂಗ್ಸ್ ಒಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ಆಟಗಾರ ಅಭಿಷೇಕ್. ಈ ಸಾಧನೆಯನ್ನು 4 ಬಾರಿ ಮಾಡಿರುವ ದೈತ್ಯ ಆಟಗಾರ ಕ್ರಿಸ್ ಗೇಲ್ ಮಾತ್ರ ಅಭಿಷೇಕ್‌ಗಿಂತ ಮುಂದಿದ್ದಾರೆ. ತಮ್ಮ ಟಿ20 ವೃತ್ತಿಜೀವನದಲ್ಲಿ ಅಭಿಷೇಕ್ ಐದು ಬಾರಿ ಒಂದೇ ಇನ್ನಿಂಗ್ಸ್‌ನಲ್ಲಿ 10ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು ಎವಿನ್ ಲೂಯಿಸ್ ಮತ್ತು ಶ್ರೇಯಸ್ ಅಯ್ಯರ್ (ತಲಾ 4 ಬಾರಿ) ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ 18 ಬಾರಿ ಈ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದ್ದಾರೆ.
ಹೈದರಾಬಾದ್‌ನಲ್ಲಿ ಡೆಲ್ಲಿ ವಿರುದ್ಧ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಹೈದರಾಬಾದ್ ಪರ ಅಭಿಷೇಕ್, ಟ್ರಾವಿಸ್ ಹೆಡ್ (37) ಜೊತೆ ಸೇರಿ 97 ರನ್‌ಗಳ ಭರ್ಜರಿ ಆರಂಭಿಕ ಜೊತೆಯಾಟವಾಡಿದರು. ಹೆಡ್ ಔಟಾದ ನಂತರವೂ, ಇಶಾನ್ ಕಿಶನ್ (25) ಮತ್ತು ಹೆನ್ರಿಚ್ ಕ್ಲಾಸೆನ್ (37*) ಜೊತೆಗೂಡಿ ಅಭಿಷೇಕ್ ತಮ್ಮ ಅಬ್ಬರ ಮುಂದುವರಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಅವರು, 68 ಎಸೆತಗಳಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್‌ಗಳ ನೆರವಿನಿಂದ 135 ರನ್ ಗಳಿಸಿದರು. ನಂತರ ಫೀಲ್ಡಿಂಗ್‌ನಲ್ಲೂ ಅಭಿಷೇಕ್ ಮಿಂಚಿದರು. ಡೆಲ್ಲಿ ಓಪನರ್ ಕೆ.ಎಲ್. ರಾಹುಲ್ ಮತ್ತು ಸ್ಫೋಟಕ ಬ್ಯಾಟರ್ ನಿತೀಶ್ ರಾಣಾ ಅವರ ಅಮೋಘ ಕ್ಯಾಚ್‌ಗಳನ್ನು ಹಿಡಿದು ಪೆವಿಲಿಯನ್‌ಗೆ ಕಳುಹಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.