ಎಬಿಡಿ ಸ್ಕೂಪ್ ಶಾಟ್ ಶೈಲಿ ಕಾಪಿ ಮಾಡಿ ಕೊಹ್ಲಿ ಸಿಕ್ಸರ್; ಗೆಳೆಯನಿಂದ ಬಂತು ಪ್ರತಿಕ್ರಿಯೆ!

Published : Dec 06, 2020, 09:40 PM ISTUpdated : Dec 06, 2020, 11:07 PM IST
ಎಬಿಡಿ ಸ್ಕೂಪ್ ಶಾಟ್ ಶೈಲಿ ಕಾಪಿ ಮಾಡಿ ಕೊಹ್ಲಿ ಸಿಕ್ಸರ್; ಗೆಳೆಯನಿಂದ ಬಂತು ಪ್ರತಿಕ್ರಿಯೆ!

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗೆಲುವು ದಾಖಲಿಸೋ ಮೂಲಕ ಸರಣಿ ಕೈವಶ ಮಾಡಿದೆ. ಬೃಹತ್ ಟಾರ್ಗೆಟ್ ಚೇಸ್ ಮಾಡೋ ವೇಳೆ ನಾಯಕ ವಿರಾಟ್ ಕೊಹ್ಲಿ, ಆರ್‌ಸಿಬಿ ಸಹ ಆಟಗಾರ ಎಬಿ ಡಿವಿಲಿಯರ್ಸ್ ಸ್ಕೂಪ್ ಶಾಟ್ ಕಾಪಿ ಮಾಡಿ ಸಿಕ್ಸರ್ ಸಿಡಿಸಿದ್ದಾರೆ. ಇದೀಗ ಎಬಿಡಿ ಪ್ರತಿಕ್ರಿಯೆ ನೀಡಿದ್ದಾರೆ.

ಸಿಡ್ನಿ(ಡಿ.06): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ 2-0 ಅಂತರದಲ್ಲಿ ಭಾರತ ಗೆದ್ದುಕೊಂಡಿದೆ. ಅಂತಿಮ ಪಂದ್ಯ ಗೆದ್ದು ಕ್ಲೀನ್ ಸ್ವೀರ್ ಮಾಡಲು ಟೀಂ ಇಂಡಿಯಾ ಸಜ್ಜಾಗಿದೆ. ಸಿಡ್ನಿಯಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ 195 ಬೃಹತ್ ಗುರಿ ಬೆನ್ನಟ್ಟಿ ಸರಣಿ ಗೆದ್ದುಕೊಂಡಿದೆ. ಚೇಸಿಂಗ್ ವೇಳೆ ನಾಯಕ ವಿರಾಟ್ ಕೊಹ್ಲಿ, ಸೌತ್ ಆಫ್ರಿಕಾ ಮಾಜಿ ನಾಯಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್ ಸಿಗ್ನೇಚರ್ ಸ್ಕೂಪ್ ಶಾಟ್‌ನ್ನು ಕಾಪಿ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯ ಗೆದ್ದು ಹಲವು ದಾಖಲೆ ಬರೆದ ಕೊಹ್ಲಿ ಸೈನ್ಯ!

ಸ್ಕೂಪ್ ಶಾಟ್ ಮೂಲಕ ವಿರಾಟ್ ಕೊಹ್ಲಿ ಸಿಕ್ಸರ್ ಸಿಡಿಸಿದ್ದಾರೆ. ಇದೇ ಮೊದಲ ಬಾರಿಗೆ ಕೊಹ್ಲಿ ಸ್ಕೂಪ್ ಶಾಟ್ ಇಷ್ಟು ಪರ್ಫೆಕ್ಟ್ ಸಿಕ್ಸರ್ ಸಿಡಿಸಿದ್ದಾರೆ. ಎಬಿ ಡಿವಿಲಿಯರ್ಸ್ ರೀತಿಯಲ್ಲೇ ಒಂದಿಂಚು ಬದಲಾವಣೆ ಇಲ್ಲದೆ ಸ್ಕೂಪ್ ಶಾಟ್ ಕಾರ್ಯಗತ ಮಾಡಿದ್ದಾರೆ. 

 

INDvAUS:2ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ರೋಚಕ ಗೆಲುವು; ಸರಣಿ ಕೈವಶ!

ಪಂದ್ಯದ ಬಳಿಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸ್ಕೂಪ್ ಶಾಟ್ ಪ್ರಯತ್ನ ಮಾಡಿ ಯಶಸ್ವಿಯಾದೆ. ಎಬಿಡಿಗೆ ಮೆಸೇಜ್ ಮೂಲಕ ಈ ಸ್ಕೂಪ್ ಶಾಟ್ ವಿಡಿಯೋ ಕಳುಹಿಸುತ್ತೇನೆ. ಎಬಿಡಿ ಪ್ರತಿಕ್ರಿಯೆ ನನ್ನ ಕುತೂಹಲ ಹೆಚ್ಚಿಸಿದೆ ಎಂದಿದ್ದರು. ಇದೀಗ ಎಬಿಡಿ ಕೊಹ್ಲಿ ಸ್ಕೂಪ್ ಶಾಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ವಿರಾಟ್ ಕೊಹ್ಲಿ ಸ್ಕೂಪ್ ಶಾಟ್ ಸೂಪರ್ ಎಂದು ಎಬಿ ಡಿವಿಲಿಯರ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಕ್ಸರ್ , ಬೌಂಡರಿ ಮೂಲಕ ವಿರಾಟ್ ಕೊಹ್ಲಿ 24 ಎಸೆತದಲ್ಲಿ 40 ರನ್ ಸಿಡಿಸಿದ್ದರು. ಈ ಮೂಲಕ ಸಿಡ್ನಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?