
ಸಿಡ್ನಿ(ಡಿ.06): ಮ್ಯಾಥ್ಯೂ ವೇಡ್ ಹಾಫ್ ಸೆಂಚುರಿ, ಸ್ಟೀವ್ ಸ್ಮಿತ್ 46 ರನ್ ಸೇರಿದಂತೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ 195 ರನ್ ಗುರಿ ನೀಡಿದೆ. ಈ ಗುರಿಯನ್ನು ಟೀಂ ಇಂಡಿಯಾ ಬೆನ್ನಟ್ಟಿ ಟಿ20 ಸರಣಿ ಕೈವಶ ಮಾಡುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಆದರೆ ಅಂಕಿ ಅಂಶ ಟೀಂ ಇಂಡಿಯಾ ಪರವಾಗಿದೆ.
ಟೀಂ ಇಂಡಿಯಾಗೆ ಬೃಹತ್ ಗುರಿ ನೀಡಿದ ಆಸೀಸ್; ಕೊಹ್ಲಿ ಸೈನ್ಯಕ್ಕೆ ನೆರವಾಗುತ್ತಾ ಸಿಡ್ನಿ ಇತಿಹಾಸ?
ಸಿಡ್ನಿ ಮೈದಾನದಲ್ಲಿ 2 ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ಎರಡಲ್ಲೂ ಗೆಲುವು ಸಾಧಿಸಿದೆ. ಎರಡೂ ಪಂದ್ಯಗಳನ್ನು ಟೀಂ ಇಂಡಿಯಾ ಚೇಸ್ ಮಾಡಿ ಗೆದ್ದುಕೊಂಡಿದೆ. ಹೀಗಾಗಿ ಮೂರನೇ ಪಂದ್ಯದಲ್ಲೂ ಟೀಂ ಇಂಡಿಯಾಗೆ ಗೆಲುವು ಸಾಧ್ಯವಿದೆ ಅನ್ನೋದು ಅಂಕಿ ಅಂಶಗಳ ವಿವರ.
ಕನ್ಕಶನ್ ಸಬ್‌ಸ್ಟಿಟ್ಯೂಟ್ ಬಗ್ಗೆ ಟೀಕಾಕಾರರ ಬಾಯಿ ಮುಚ್ಚಿಸಿದ ಗವಾಸ್ಕರ್..!.
2015-16ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಿಡ್ನಿ ಮೈದಾನದಲ್ಲಿ ನಡೆದ ಟಿ20 ಪಂದ್ಯ ಭಾರತಕ್ಕೆ ಅತ್ಯಂತ ಕಠಿಣ ಸವಾಲಾಗಿತ್ತು. ಆಸೀಸ್ 198 ರನ್ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಭಾರತ ಚೇಸ್ ಮಾಡಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಸುಲಭವಾಗಿ ಗುರಿ ಚೇಸ್ ಮಾಡಿದ್ದರು.
2018ರ ಪ್ರವಾಸದಲ್ಲಿ ಟೀಂ ಇಂಡಿಗೆ ಸಿಡ್ನಿ ಮೈದಾನದಲ್ಲಿ ಆಸ್ಟ್ರೇಲಿಯಾ 165 ರನ್ ಟಾರ್ಗೆಟ್ ನೀಡಿತ್ತು. ಈ ವೇಳೆ ವಿರಾಟ್ ಕೊಹ್ಲಿ ಅಜೇಯ 61 ರನ್ ಸಿಡಿಸೋ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
ಸಿಡ್ನಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ತುಂಬಾ ಮುಖ್ಯವಾಗಿದೆ. ಕಳೆದೆರಡು ಬಾರಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ವಿರಾಟ್ ಕೊಹ್ಲಿ ಇದೀಗ 3ನೇ ಬಾರಿ ಅದೇ ಜವಾಬ್ದಾರಿ ನಿರ್ವಹಿಸಬೇಕಿದೆ. ಹೀಗಾದಲ್ಲಿ ಟೀಂ ಇಂಡಿಯಾ ಸುಲಭವಾಗಿ ರನ್ ಚೇಸ್ ಮಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.