ವಿರಾಟ್ ಕೊಹ್ಲಿ ನೆರವಿಗೆ ಬಂದ ಎಬಿ ಡಿವಿಲಿಯರ್ಸ್, ಟೀಕಿಸಿದ್ದ ಗವಾಸ್ಕರ್-ಸೆಹ್ವಾಗ್ ಗಪ್‌ಚುಪ್

Published : May 06, 2025, 08:35 PM IST
ವಿರಾಟ್ ಕೊಹ್ಲಿ ನೆರವಿಗೆ ಬಂದ ಎಬಿ ಡಿವಿಲಿಯರ್ಸ್, ಟೀಕಿಸಿದ್ದ ಗವಾಸ್ಕರ್-ಸೆಹ್ವಾಗ್ ಗಪ್‌ಚುಪ್

ಸಾರಾಂಶ

ಆರ್‌ಸಿಬಿ ಪರ ಸದಾ ಮಿಡಿಯುವ ಎಬಿ ಡಿವಿಲಿಯರ್ಸ್ ಇದೀಗ  ವಿರಾಟ್ ಕೊಹ್ಲಿ ನೆರವಿಗೆ ಬಂದಿದ್ದಾರೆ. ಕೊಹ್ಲಿ ಟೀಕಿಸಿದ್ದ ಸುನಿಲ್ ಗವಾಸ್ಕರ್ ಹಾಗೂ ವಿರೇಂದ್ರ ಸೆಹ್ವಾಗ್‌ಗೆ ಇದನ್ನು ನುಂಗಿಕೊಳ್ಳಿ ಎಂದು ಖಡಕ್ ತಿರುಗೇಟು ನೀಡಿದ್ದಾರೆ. ಕೊಹ್ಲಿ ಪರ ಎಬಿಡಿ ಹೇಳಿದ್ದೇನು? ಟೀಕಾಕಾರಾ ಬಾಯಿ ಮುಚ್ಚಿಸಿದ್ದು ಹೇಗೆ? 

ಬೆಂಗಳೂರು(ಮೇ.06) ಎಬಿ ಡಿವಿಲಿಯರ್ಸ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಹಲವು ವರ್ಷಗಳಾಗಿದೆ. ಐಪಿಎಲ್ ಟೂರ್ನಿಯಲ್ಲಿ ಎಬಿಬಿಡಿ ಹಲವು ಫ್ರಾಂಚೈಸಿ ಪರ ಆಡಿದ್ದಾರೆ. ಆದರೆ ಎಬಿ ಡಿವಿಲಿಯರ್ಸ್‌ ಅಬ್ಬರ, ಅಭಿಮಾನಿಗಳಿಂದ ಅತೀ ಹೆಚ್ಚು ಪ್ರೀತಿ ಸಿಕ್ಕಿದ್ದು ಆರ್‌ಸಿಬಿಯಲ್ಲಿ. ಆರ್‌ಸಿಬಿ , ವಿರಾಟ್ ಕೊಹ್ಲಿ ವಿರುದ್ಧ ಟೀಕೆಗಳು ಕೇಳಿಬಂದರೆ ಮೊದಲು ಎಬಿ ಡಿವಿಲಿಯರ್ಸ್ ತಿರುಗೇಟು ನೀಡುತ್ತಾರೆ. ಇದೀಗ ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದ ಸುನಿಲ್ ಗವಾಸ್ಕರ್ ಹಾಗೂ ವಿರೇಂದ್ರ ಸೆಹ್ವಾಗ್‌ಗೆ ಡಿವಿಲಿಯರ್ಸ್ ಖಡಕ್ ಉತ್ತರ ನೀಡಿದ್ದಾರೆ. ಇದನ್ನು ನುಂಗಿಕೊಳ್ಳಿ ಎಂದು ಎಬಿಡಿ ಹೇಳಿದ್ದಾರೆ.

ಸ್ಲೋ ಅಂದಿದ್ದವರಿಗೆ ಸ್ಟ್ರೈಕ್ ರೇಟ್ ನೋಡಲು ಹೇಳಿದ ಎಬಿಡಿ
ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದ ಗವಾಸ್ಕರ್ ಹಾಗೂ ಸೆಹ್ವಾಗ್‌ಗೆ ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ತಕ್ಕ ಉತ್ತರ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಎಬಿ ಡಿವಿಲಿಯರ್ಸ್ ಹೆಸರು ಹೇಳದೆ ಗವಾಸ್ಕರ್ ಹಾಗೂ ಸೆಹ್ವಾಗ್‌ಗೆ ತಿರುಗೇಟು ನೀಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಕೆಲವರು ಟಿ20 ಕ್ರಿಕೆಟ್‌ಗೆ ಸೂಕ್ತವಲ್ಲ, ತುಂಬಾ ಸ್ಲೋ ಆಡುತ್ತಾರೆ. ಅತೀ ನಿಧಾನ ಐಪಿಎಲ್ ಇನ್ನಿಂಗ್ಸ್ ಎಂದೆಲ್ಲಾ ಟೀಕಿಸಿದ್ದೀರಿ. ಈಗ ನೋಡಿ ಕೊಹ್ಲಿ ಸ್ಟ್ರೈಕ್ ರೇಟ್ 200. ಕೊಹ್ಲಿ ಇದ್ದರೆ ಭಯ ಇಲ್ಲ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಬೇಸರಗೊಂಡಿರುವ ಕೊಹ್ಲಿ ಅಣಕಿಸಿದ ಗಾಯಕ ರಾಹುಲ್, ಆರ್‌ಸಿಬಿ ಅಭಿಮಾನಿಗಳು ಗರಂ

ನನಗೆ ಆನೆ ಮೆದುಳು ಇದೆ
ತಂಡಕ್ಕಾಗಿ ವಿರಾಟ್ ಯಾವತ್ತೂ ಇರುತ್ತಾರೆ. ಇವರು ಮಿಸ್ಟರ್ ಸೇಫ್ಟಿ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.ವಿರಾಟ್ ಕೊಹ್ಲಿ ಆಟ ಬದಲಾಗಿಲ್ಲ. ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾಗುತ್ತಾರೆ. ಮಾಧ್ಯಮ ಜನರೇ ನಾನು ಕೆಲ ವಿಚಾರಗಳನ್ನು ಹೇಳಬೇಕಿದೆ. ನನಗೆ ಆನೆಯ ಮದೆಳು ಇದೆ. ಹೀಗಾಗಿ ನಾನು ಯಾವುದನ್ನು ಮರೆತಿಲ್ಲ. ನನ್ನ ಎಲ್ಲಾ ಪತ್ರಕರ್ತರೇ, ಕ್ರೀಡಾ ವಿಶ್ಲೇಷಕರೇ ನಿಮ್ಮ ಮೇಲೆ ಪ್ರೀತಿ ಇದೆ. ಆದರೆ ನೀವು, ವಿರಾಟ್ ಕೊಹ್ಲಿ ತುಂಬಾ ಸ್ಲೋ ಬ್ಯಾಟಿಂಗ್ ಮಾಡುತ್ತಾರೆ. ಟಿ20 ಕ್ರಿಕೆಟ್ಗೆ ಹೇಗೆ ಸೂಕ್ತ ಎಂದು ಪ್ರಶ್ನಿಸಿದ್ದು, ಟೀಕಿಸಿದ್ದು ನಾನು ಮರೆತಿಲ್ಲ. ಸಿಎಸ್‌ಕೆ ವಿರುದ್ದ ಕೊಹ್ಲಿ ಬ್ಯಾಟಿಂಗ್ ಸ್ಟ್ರೈಕ್ ರೇಟ್ 200. ಈಗ ನೀವು ಹೇಳಿದ ಎಲ್ಲಾ ಮಾತು ನುಂಗಿಕೊಳ್ಳಿ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಐಪಿಎಲ್ ಇತಿಹಾಸದ ಅತೀ ಸ್ಲೋ ರನ್
ವಿರಾಟ್ ಕೊಹ್ಲಿ ಬ್ಯಾಟಿಂಗ್ ಕುರಿತು ಸುನಿಲ್ ಗವಾಸ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಕಿಡಿ ಕಾರಿದ್ದರು. ಕೊಹ್ಲಿ ಅತೀ ಸ್ಲೋ ಬ್ಯಾಟಿಂಗ್ ಮಾಡುತ್ತಾರೆ. ಇದು ಟಿ20 ಮಾದರಿಗೆ ಸೂಕ್ತವಲ್ಲ. ಟಿ20ಯಲ್ಲಿ ರನ್ ಹರಿದು ಬರಬೇಕು. ನಿಧಾನವಾಗಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕ, ಶತಕ ಸಿಡಿಸಿದರೆ ಪ್ರಯೋಜನವಿಲ್ಲ. ಸ್ಟ್ರೈಕ್ ರೇಟ್ ಉತ್ತಮವಿರಬೇಕು ಎಂದು ಇಬ್ಬರು ದಿಗ್ಗಜರು ಅಭಿಪ್ರಾಯಪಟ್ಟಿದ್ದರು. 

 

 

ಸಿಎಸ್‌ಕೆ ವಿರುದ್ದ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ 33 ಎಸೆತದಲ್ಲಿ 62 ರನ್ ಸಿಡಿಸಿದ್ದರು. ಜಾಕೋಬ್ ಬೆಥೆಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ 97 ರನ್ ಜೊತೆಯಾಟ ನೀಡಿದ್ದರು. ಇಬ್ಬರು ಸ್ಫೋಟಕ ಬ್ಯಾಟಿಂಗ್ ಆರ್‌ಸಿಬಿಗೆ ನೆರವಾಗಿತ್ತು. ಕೊಹ್ಲಿ 5 ಭರ್ಜರಿ ಸಿಕ್ಸರ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ ಕೊನೆಯ ಎಸೆತದಲ್ಲಿ ರೋಚಕ ಗೆಲವು ದಾಖಲಿಸಿತ್ತು.

ಅಷ್ಟಕ್ಕೂ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದೇಕೆ? ಕೊನೆಗೂ ಮೌನ ಮುರಿದ ವಿರಾಟ್!
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!