
ಬ್ರಿಸ್ಬೇನ್(ಜ.13): ಆಸೀಸ್ ವಿರುದ್ಧ 4ನೇ ಟೆಸ್ಟ್ ಆಡಲು ಭಾರತ ತಂಡ ಮಂಗಳವಾರ ಬ್ರಿಸ್ಬೇನ್‌ಗೆ ತಲುಪಿದೆ. ಕಠಿಣ ಕ್ವಾರಂಟೈನ್ ನಿಯಮಗಳಿಗೆ ವಿರೋಧಿಸಿದ್ದರೂ ಭಾರತ ತಂಡದ ಮನವೊಲಿಸುವಲ್ಲಿ ಕ್ರಿಕೆಟ್ ಆಸ್ಪ್ರೇಲಿಯಾ ಯಶಸ್ವಿಯಾಗಿದೆ.
ಕ್ರೀಡಾಂಗಣದಿಂದ 4 ಕಿ.ಮೀ. ದೂರದಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಭಾರತ ತಂಡ, ‘ಫೈವ್‌ಸ್ಟಾರ್ ಜೈಲು ವಾಸ ಅನುಭವಿಸುತ್ತಿದೆ’ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಜಡ್ಡು, ವಿಹಾರಿ ಬಳಿಕ ಟೀಂ ಇಂಡಿಯಾದ ಮತ್ತೋರ್ವ ಸ್ಟಾರ್ ಆಟಗಾರ ಬ್ರಿಸ್ಬೇನ್ ಟೆಸ್ಟ್‌ನಿಂದ ಔಟ್..!
‘ಇಡೀ ಹೋಟೆಲ್‌ನಲ್ಲಿ ನಮ್ಮನ್ನು ಬಿಟ್ಟು ಬೇರಾರಯರೂ ಇಲ್ಲ. ಹತ್ತಿರದ ಭಾರತೀಯ ರೆಸ್ಟೋರೆಂಟ್‌ನಿಂದ ಆಹಾರ ತರಿಸಿ ನಮ್ಮ ಫ್ಲೋರ್‌ನಲ್ಲಿ ಇಡಲಾಗುತ್ತಿದೆ. ಕ್ರೀಡಾಂಗಣದಿಂದ ಬಂದ ಮೇಲೆ ಫ್ಲೋರ್ ಬಿಟ್ಟು ಹೊರಹೋಗುವಂತಿಲ್ಲ. ನಮ್ಮ ಕೊಠಡಿಗಳಲ್ಲಿ ನಾವೇ ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಬೇಕು, ಟಾಯ್ಲೆಟ್ ಸ್ವಚ್ಛಗೊಳಿಸಬೇಕು. ಈಜುಕೊಳ, ಜಿಮ್ ಸೌಲಭ್ಯ, ಲಿಫ್ಟ್ ಉಪಯೋಗಿಸುವಂತಿಲ್ಲ. ಹೋಟೆಲ್‌ನಲ್ಲಿ ನಮ್ಮನ್ನು ಬಿಟ್ಟು ಬೇರಾರಯರೂ ಇಲ್ಲದಿದ್ದಾಗ ಜಿಮ್, ಈಜುಕೊಳ ಉಪಯೋಗಿಸಿದರೆ ಏನು ತೊಂದರೆ’ ಎಂದು ತಂಡದ ಸದಸ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಸಿಸಿಐ, ಕ್ರಿಕೆಟ್ ಆಸ್ಪ್ರೇಲಿಯಾ ಜೊತೆ ಚರ್ಚಿಸಲಿದೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.