ಮಾಡಿದ್ದೆಲ್ಲಾ ಮಾಡಿ ತಪ್ಪಾಯ್ತು ಸಾರಿ ಎಂದ ಆಸ್ಟ್ರೇಲಿಯಾ ನಾಯಕ!

By Suvarna NewsFirst Published Jan 12, 2021, 6:55 PM IST
Highlights

ಸಿಡ್ನಿ ಟೆಸ್ಟ್ ಪಂದ್ಯ ಗೆಲ್ಲಲು ಆಸ್ಟ್ರೇಲಿಯಾ ಎಲ್ಲಾ ದಾರಿ ಟ್ರೈ ಮಾಡಿತ್ತು. ಮಾತಿನ ಸಮರವನ್ನೂ ಮಾಡಿತ್ತು. ಕೊನೆಗೆ ಯಾವುದೂ ಕೈಗೂಡದಿದ್ದಾಗ, ತಪ್ಪಾಯ್ತು ಬುಟ್ಬುಡಿ ಎಂದಿದೆ.

ಸಿಡ್ನಿ(ಜ.12): ಎದುರಾಳಿ ಯಾರೇ ಆಗಿರಲಿ, ಆಸ್ಟ್ರೇಲಿಯಾ ತಂಡ ಮೈಂಡ್ ಗೇಮ್ ಆಡದೇ ಟೆಸ್ಟ್ ಪಂದ್ಯ ಮುಗಿಸಲ್ಲ. ತಮ್ಮ ಪ್ಲಾನ್ ಪ್ರಕಾರ ನಡೆಯದಿದ್ದರೆ, ಹೇಗಾದರು ಮಾಡಿ ಗೆಲುವು ಸಾಧಿಸಲು ಆಸ್ಟ್ರೇಲಿಯಾ ಬಯಸುತ್ತದೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಲೆಕ್ಕಾಚಾರ ಉಲ್ಟಾಗೊಂಡಾಗ, ಭಾರತೀಯ ಬ್ಯಾಟ್ಸ್‌ಮನ್‌ಗಳ ಮೇಲೆ ಸ್ಲೆಡ್ಜಿಂಗ್ ಆರಂಭಿಸಿದ್ದಾರೆ.  ಅದರಲ್ಲೂ ವಿಕೆಟ್ ಕಬಳಿಸಲು ಸಾಧ್ಯವಾಗದಿದ್ದಾಗ, ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್, ಮಾತುಗಳ ಮೂಲಕ ಬ್ಯಾಟ್ಸ್‌ಮನ್ ಕೆರಳಿಸೋ ಪ್ರಯತ್ನ ಮಾಡಿದ್ದರು. ಎಲ್ಲಾ ಪ್ರಯತ್ನ ಮಾಡಿದ ಟಿಮ್ ಪೈನೆ ಇದೀಗ ತಪ್ಪಾಯ್ತು ಸಾರಿ ಎಂದಿದ್ದಾರೆ.

ಸಿಡ್ನಿ ಟೆಸ್ಟ್‌ ಕೈಜಾರಲು ನಾನೇ ಕಾರಣ: ತಪ್ಪೊಪ್ಪಿಕೊಂಡ ಆಸೀಸ್‌ ನಾಯಕ..!.

ಸಿಡ್ನಿ ಟೆಸ್ಟ್ ಪಂದ್ಯದ ಅಂತಿಮ ದಿನ ಹನುಮಾ ವಿಹಾರಿ ಹಾಗೂ ಆರ್ ಅಶ್ವಿನ್ ಬ್ಯಾಟಿಂಗ್ ಪಂದ್ಯದ ಗತಿಯನ್ನು ಬದಲಿಸಿತ್ತು. ಗೆಲುವಿನ ಲೆಕ್ಕಾಚಾರದಲ್ಲಿದ್ದ ಆಸ್ಟ್ರೇಲಿಯಾಗೆ ಆಘಾತ ನೀಡಿದ್ದರು. ಆಸೀಸ್ ಬೌಲರ್‌ಗಳನ್ನು ಅಷ್ಟೇ ತಾಳ್ಮೆಯಿಂದ ಎದುರಿಸಿ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಆಸೀಸ್ ಬೌಲರ್‌ಗಳ ದಾಳಿಗೆ ವಿಕೆಟ್ ಉರುಳದಿದ್ದಾಗ, ನಾಯಕ ಟಿಮ್ ಪೈನೆ, ಮಾತಿನ ಮೂಲಕ ಆರ್ ಅಶ್ವಿನ್ ಕೆರಳಿಸುವ ಪ್ರಯತ್ನ ಮಾಡಿದ್ದರು. 

ಟಿಮ್ ಪೈನೇ ಅದೇನೇ ಹೇಳಿದರೂ ಅಶ್ವಿನ್ ವಿಕೆಟ್ ಮಾತ್ರ ಬಿಟ್ಟುಕೊಡಲಿಲ್ಲ. ಇತ್ತ ಅಶ್ವಿನ್ ಕೂಡ ಮಾತಿನ ಮೂಲಕ ತಿರುಗೇಟು ನೀಡಿದ್ದರು. ಆಸೀಸ್ ಆಟಾಗರರ ಎಲ್ಲಾ ಸವಾಲುಗಳನ್ನು ಎದುರಿಸಿದ ಆರ್ ಅಶ್ವಿನ್ ಹಾಗೂ ಹನುಮಾ ವಿಹಾರಿ ಪಂದ್ಯ ಡ್ರಾಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಮ್ ಪೈನೆ, ಕ್ಯಾಚ್ ಕೈಚೆಲ್ಲಿದ ನೋವು ಕಾಡುತ್ತಿತ್ತು. ಹೀಗಾಗಿ ಮಾತಿನ ಮೂಲಕ ಆರ್ ಅಶ್ವಿನ್ ಕೆರಳಿಸೋ ಪ್ರಯತ್ನ ಮಾಡಿದ್ದೆ. ಇದಕ್ಕೆ ಕ್ಷಮೆ ಕೇಳುತ್ತೇನೆ ಎಂದರು.
 

click me!