ಕೊರೋನಾ ಹೆಮ್ಮಾರಿಗೆ ಮಹಾನಗರಿ ಮುಂಬೈ ಅಕ್ಷರಶಃ ಬೆಚ್ಚಿಬಿದ್ದಿದೆ. ಹೀಗಿರುವಾಗಲೇ ಮುಂಬೈನ 90ಕ್ಕೂ ಹೆಚ್ಚು ಕ್ರಿಕೆಟಿಗರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಉಳಿದವರಿಗೆ ಮಾದರಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಜೂ.09): ಅತಿಹೆಚ್ಚು ಕೊರೋನಾ ಸೋಂಕಿತರಿರುವ ಮುಂಬೈ ನಗರದಲ್ಲಿ ಹಲವರಿಗೆ ರಕ್ತದ ಅಗತ್ಯವಿದ್ದು, ಸೋಮವಾರ ಸ್ವಯಂ ಪ್ರೇರಣೆಯಿಂದ 90 ಕ್ರಿಕೆಟಿಗರು ರಕ್ತದಾನ ಮಾಡಿದರು.
ಮುಂಬೈ ಕ್ರಿಕೆಟ್ ಸಂಸ್ಥೆ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ರಣಜಿ ತಂಡದಲ್ಲಿ ಆಡುವ ಆಟಗಾರರಾದ ವಿನಾಯಕ್ ಭೋಯಿರ್, ರಾಯ್ಸ್‌ಟನ್ ದಿಯಾಸ್ ಸೇರಿದಂತೆ ವಿವಿಧ ಕ್ಲಬ್‌ಗಳ ಆಟಗಾರರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಸ್ಥಳೀಯ ಶಾಸಕ ಕ್ಷಿತಿಜ್ ಠಾಕೂರ್, ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿ ಅಜಿಂಕ್ಯ ನಾಯಕ್, ಮಾಜಿ ಅಧಿಕಾರಿ ಪಂಕಜ್ ಠಾಕೂರ್ ಸಹ ಶಿಬಿರದಲ್ಲಿ ಪಾಲ್ಗೊಂಡರು.
undefined
ಆನ್‌ಲೈನ್‌ನಲ್ಲೇ ಕೋಚ್, ಆಟಗಾರರಿಗೆ ಹುಡುಕಾಟ!
ನವದೆಹಲಿ: ಕೊರೋನಾ ಲಾಕ್‌ಡೌನ್‌ನಿಂದಾಗಿ ಟೂರ್ನಿಗಳು ಸ್ಥಗಿತಗೊಂಡಿದ್ದರೂ, ಭಾರತೀಯ ಫುಟ್ಬಾಲ್ ಕ್ಲಬ್‌ಗಳು ಮುಂಬರುವ ಋುತುಗಳಿಗೆ ಸಿದ್ಧತೆ ನಡೆಸುತ್ತಿವೆ. ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಹಾಗೂ ಐ-ಲೀಗ್‌ನ ಕ್ಲಬ್‌ಗಳು ಆನ್‌ಲೈನ್‌ನಲ್ಲೇ ಕೋಚ್, ಆಟಗಾರರಿಗೆ ಹುಡುಕಾಟ ನಡೆಸುತ್ತಿವೆ.
ಕೊರೋನಾ ವೈರಸ್‌ಗೆ ಮಾಜಿ ಪುಟ್ಬಾಲ್ ಪಟು ಬಲಿ!
ಐಎಸ್‌ಎಲ್‌ನ 2 ಬಾರಿ ರನ್ನರ್ ಅಪ್ ತಂಡ ಗೋವಾ ಎಫ್‌ಸಿ, ಜೂಮ್ ಆ್ಯಪ್ ಮೂಲಕ ಸಂದರ್ಶನ ನಡೆಸಿ ಸ್ಪೇನ್‌ನ ಜುವಾನ್ ಫರ್ನಾಂಡೋ ಅವರನ್ನು ನೂತನ ಕೋಚ್ ನೇಮಕ ಮಾಡಿಕೊಂಡಿದೆ. ಇದೇ ವೇಳೆ ಹೊಸ ಪ್ರತಿಭೆಗಳ ಹುಡುಕಾಟಕ್ಕೆ ಇನ್‌ಸ್ಟಾಟ್, ವೈಸ್ಕೌಟ್ ಎನ್ನುವ ಮೊಬೈಲ್ ಆ್ಯಪ್‌ಗಳನ್ನು ತಂಡಗಳು ಬಳಕೆ ಮಾಡುತ್ತಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.