ಪಾಕಿಸ್ತಾನದ ಮೂವರು ಕ್ರಿಕೆಟ್ ಆಟಗಾರ್ತಿಯರಿಗೆ ಕೋವಿಡ್ ಪಾಸಿಟಿವ್..!

By Suvarna News  |  First Published Oct 28, 2021, 5:26 PM IST

* ಪಾಕಿಸ್ತಾನದ ಮೂವರು ಕ್ರಿಕೆಟ್ ಆಟಗಾರ್ತಿಯರಿಗೆ ಕೋವಿಡ್ ಪಾಸಿಟಿವ್

* ಆಟಗಾರ್ತಿಯರ ಹೆಸರನ್ನು ಗುಪ್ತವಾಗಿಟ್ಟ ಪಿಸಿಬಿ

* ವಿಂಡೀಸ್‌ ಎದುರು ಏಕದಿನ ಸರಣಿಯನ್ನಾಡಲು ಸಜ್ಜಾದ ಪಾಕ್


ಕರಾಚಿ(ಅ.28): ಪಾಕಿಸ್ತಾನ ಮಹಿಳಾ ಕ್ರಿಕೆಟ್ (Pakistan Women's Cricket Team) ತಂಡದ ಮೂವರು ಆಟಗಾರ್ತಿಗೆ ಕೋವಿಡ್ 19 (COVID 19) ಸೋಂಕು ತಗುಲಿರುವುದು ದೃಢಪಟ್ಟಿದೆ. ಅಕ್ಟೋಬರ್ 28ರಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) (ಪಿಸಿಬಿ) ತನ್ನ ಪ್ರಕಟಣೆಯಲ್ಲಿ ಈ ವಿಚಾರವನ್ನು ಖಚಿತಪಡಿಸಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ್ತಿಯರು ಮುಂಬರುವ ವೆಸ್ಟ್‌ ಇಂಡೀಸ್‌ ವಿರುದ್ದದ ಏಕದಿನ ಕ್ರಿಕೆಟ್‌ ಸರಣಿಗೆ (ODI Cricket Series) ಸಜ್ಜಾಗಲು ಕರಾಚಿಯಲ್ಲಿರುವ ಹನೀಫ್ ಮೊಹಮ್ಮದ್ ಹೈಫರ್ಫಾಮೆನ್ಸ್‌ ಸೆಂಟರ್‌ನಲ್ಲಿ ಒಟ್ಟಾಗಿದ್ದರು. ಈ ವೇಳೆ ಪ್ರತಿನಿತ್ಯ ನಡೆಸುವ ಕೋವಿಡ್ ಟೆಸ್ಟ್ (COVID Test) ನಡೆಸಿದಾಗ ಮೂವರು ಆಟಗಾರ್ತಿಯರಿಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿದೆ. ಆದರೆ ಯಾವೆಲ್ಲಾ ಆಟಗಾರ್ತಿಯರಿಗೆ ಕೋವಿಡ್ 19 ಸೋಂಕು ತಗುಲಿದೆ ಎನ್ನುವ ಮಾಹಿತಿಯನ್ನು ಪಿಸಿಬಿ ಗುಪ್ತವಾಗಿಟ್ಟಿದೆ. ಈ ಎಲ್ಲಾ ಆಟಗಾರ್ತಿಯರು ನವೆಂಬರ್ 06ರವರೆಗೆ ಅಂದರೆ 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ. ಇದೀಗ ಕೋವಿಡ್ ಪ್ರೋಟೋಕಾಲ್‌ನಂತೆ ಉಳಿದ ಆಟಗಾರ್ತಿಯರಿಗೆ ನವೆಂಬರ್ 02ರವರೆಗೆ ಐಸೋಲೇಷನ್‌ನಲ್ಲಿರಲು ಸೂಚಿಸಲಾಗಿದೆ. ಈ ಎಲ್ಲಾ ಆಟಗಾರ್ತಿಯರು ಪ್ರತಿ 2 ದಿನಗಳಿಗೊಮ್ಮೆ ಕೋವಿಡ್‌ ಟೆಸ್ಟ್‌ಗೆ ಒಳಗಾಗಲಿದ್ದಾರೆ

Latest Videos

undefined

ವಿಂಡೀಸ್ ಎದುರಿನ 3 ಪಂದ್ಯಗಳ ಏಕದಿನ ಸರಣಿಗೆ ಪಾಕ್ ಆತಿಥ್ಯ: 

ಪಾಕಿಸ್ತಾನದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು ವೆಸ್ಟ್‌ ಇಂಡೀಸ್‌ ಮಹಿಳಾ ಕ್ರಿಕೆಟ್ ತಂಡವು ಪ್ರವಾಸ ಕೈಗೊಳ್ಳಲಿದೆ. ನವೆಂಬರ್ 08ರಿಂದ ನವೆಂಬರ್ 14ರ ವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ಜರುಗಲಿದೆ. ಈ ಎಲ್ಲಾ ಪಂದ್ಯಗಳು ಕರಾಚಿಯ ನ್ಯಾಷನಲ್ ಸ್ಟೇಡಿಯಂ (Karachi National Cricket Stadium) ನಲ್ಲಿ ಜರುಗಲಿವೆ. 

T20 World Cup: ನ್ಯೂಜಿಲೆಂಡ್ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗುಡ್‌ ನ್ಯೂಸ್‌..!

2021ರ ವರ್ಷಾರಂಭದಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು 3 ಪಂದ್ಯಗಳ ಟಿ20 ಸರಣಿ ಹಾಗೂ ಐದು ಪಂದ್ಯಗಳ ಏಕದಿನ ಸರಣಿಯನ್ನಾಡಲು ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿತ್ತು. ನಮ್ಮ ತಂಡವು ಇದೀಗ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿರುವುದು ನವೆಂಬರ್ 21ರಿಂದ ಆರಂಭವಾಗಲಿರುವ ವಿಶ್ವಕಪ್ ಅರ್ಹತೆ ಗಳಿಸಲು ಉತ್ತಮ ಪೂರ್ವಭಾವಿ ತಯಾರಿಯಾಗಲಿದೆ ಎಂದು ವೆಸ್ಟ್‌ ಕ್ರಿಕೆಟ್ ಮಂಡಳಿಯ (Windies Cricket Board) ಕಾರ್ಯನಿರ್ವಾಹಕ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ ಮಧ್ಯಭಾಗದಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿರುವ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಾವಳಿಗೂ ಮುನ್ನ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿರುವುದು ನಮ್ಮ ವಿಂಡೀಸ್ ತಂಡಕ್ಕೆ ಅನುಕೂಲವಾಗಲಿದೆ. ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದರಿಂದ ಬೇರೆ ರೀತಿಯ ವಾತಾವರಣದಲ್ಲಿ ಕ್ರಿಕೆಟ್ ಆಡಿದ ಅನುಭವ ಸಿಗಲಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಸಿಇಒ ಜಾನಿ ಗ್ರೇವ್ ತಿಳಿಸಿದ್ದಾರೆ.

T20 World Cup: ಒಬೆಡ್ ಮೆಕಾಯ್‌ ಬದಲಿಗೆ ವೆಸ್ಟ್ ಇಂಡೀಸ್ ತಂಡ ಕೂಡಿಕೊಂಡ ಜೇಸನ್ ಹೋಲ್ಡನ್‌..!

ಕೆಲ ತಿಂಗಳ ಹಿಂದಷ್ಟೇ ನ್ಯೂಜಿಲೆಂಡ್ ಪುರುಷರ ಕ್ರಿಕೆಟ್‌ (New Zealand Cricket Team) ತಂಡವು ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನಾಡಲು ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿತ್ತು. ಪಂದ್ಯ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದಾಗ, ಭದ್ರತೆಯ ನೆಪವೊಡ್ಡಿ ಪಾಕ್ ವಿರುದ್ದ ಮೈದಾನಕ್ಕಿಳಿಯಲು ನ್ಯೂಜಿಲೆಂಡ್ ತಂಡ ಹಿಂದೇಟು ಹಾಕಿತ್ತು. ಇನ್ನು ನ್ಯೂಜಿಲೆಂಡ್ ತಂಡವು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಹಿಂದೇಟು ಹಾಕಿದ ಬೆನ್ನಲ್ಲೇ ಇಂಗ್ಲೆಂಡ್ ತಂಡ (England Cricket Team) ಕೂಡಾ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದೆ.

click me!