Black Lives Matter: ಮಂಡಿಯೂರದೆ ತಪ್ಪು ಮಾಡಿದೆ ಎಂದು ಕ್ಷಮೆಯಾಚಿಸಿದ ಡಿ ಕಾಕ್..!

By Suvarna News  |  First Published Oct 28, 2021, 3:54 PM IST

* ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದ ಕ್ವಿಂಟನ್ ಡಿ ಕಾಕ್

* Black Lives Matter ಅಭಿಯಾನಕ್ಕೆ ಬೆಂಬಲ ಸೂಚಿಸಿದ  ಡಿ ಕಾಕ್

* Black Lives Matter ಅಭಿಯಾನ ವಿರೋಧಿಸಿ ತಂಡದಿಂದ ಹೊರಗುಳಿದಿದ್ದ ಡಿ ಕಾಕ್


ದುಬೈ(ಅ.28): ಕಪ್ಪು ವರ್ಣಿಯರ ಜೀವಕ್ಕೂ ಬೆಲೆಯಿದೆ ಎನ್ನುವ Black Lives Matter ಎನ್ನುವ ಅಭಿಯಾನ ಸದ್ಯ ಜಗತ್ತಿನಾದ್ಯಂತ ಜಾರಿಯಲ್ಲಿದೆ. ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್‌ ಬ್ಯಾಟರ್‌ ಕ್ವಿಂಟನ್ ಡಿ ಕಾಕ್‌ Black Lives Matter ಗೆ ಬೆಂಬಲ ಸೂಚಕವಾಗಿ ಮಂಡಿಯೂರಿ ಅಭಿಯಾನಕ್ಕೆ ಬೆಂಬಲ ಸೂಚಿಸಲು ನಿರಾಕರಿಸಿ ತಂಡದಿಂದ ಹೊರಗುಳಿದಿದ್ದರು. ಇದೀಗ ತಮ್ಮಿಂದ ತಪ್ಪಾಗಿದೆ ಎಂದು ಡಿ ಕಾಕ್ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ.   

ವೆಸ್ಟ್‌ ಇಂಡೀಸ್ ವಿರುದ್ದದ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯು ಇನ್ನುಳಿದ ಎಲ್ಲಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಫ್ರಿಕಾ ಕ್ರಿಕೆಟಿಗರು ಮಂಡಿಯೂರಿ Black Lives Matter ಅಭಿಯಾನಕ್ಕೆ ಕಡ್ಡಾಯವಾಗಿ ಬೆಂಬಲ ಸೂಚಿಸಬೇಕು ಎಂದು ತಿಳಿಸಿತ್ತು. ಟಾಸ್ ವೇಳೆ ವೈಯುಕ್ತಿಕ ಕಾರಣದಿಂದ ಡಿ ಕಾಕ್‌ ತಂಡದಿಂದ ಹೊರಗುಳಿದಿದ್ದಾರೆ ಎಂದು ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ತಿಳಿಸಿದ್ದರು. ಆದರೆ ಕೆಲಹೊತ್ತಿನ ಬಳಿಕ Black Lives Matter ಅಭಿಯಾನಕ್ಕೆ ಬೆಂಬಲ ಸೂಚಿಸಿ ಮಂಡಿಯೂರಲು ನಿರಾಕರಿಸಿ ಡಿ ಕಾಕ್‌ ಪಂದ್ಯದಿಂದ ಹಿಂದೆ ಸರಿದಿದ್ದರು ಎಂದು ವರದಿಯಾಗಿತ್ತು. 

Tap to resize

Latest Videos

undefined

#blacklivesmatter : ‘ಮಂಡಿಯೂರಲು’ ನಿರಾಕರಿಸಿ ಪಂದ್ಯದಿಂದ ಹೊರಗುಳಿದ ಕ್ವಿಂಟನ್‌ ಡಿ ಕಾಕ್‌!

ಇದೀಗ ಈ ಕುರಿತಂತೆ ತುಟಿಬಿಚ್ಚಿರುವ ಕ್ವಿಂಟನ್ ಡಿ ಕಾಕ್ (Quinton de Kock) , ನನ್ನ ಸಹ ಆಟಗಾರರಲ್ಲಿ ಹಾಗೂ ಅಭಿಮಾನಿಗಳಲ್ಲಿ ನನ್ನನ್ನು ಕ್ಷಮಿಸಿ ಎನ್ನುವ ಪದದೊಂದಿಗೆ ನನ್ನ ಮಾತನ್ನು ಆರಂಭಿಸುತ್ತೇನೆ. ವರ್ಣಬೇಧ ನೀತಿಯ ವಿರುದ್ದ ಹೋರಾಡಬೇಕಿರುವುದು ಎಷ್ಟು ಮಹತ್ವದ ವಿಚಾರವೆಂದು ನನಗೆ ಗೊತ್ತಿದೆ. ಅದೇ ರೀತಿ ಆಟಗಾರರಾಗಿ ನಾವು ಉಳಿದವರಿಗೆ ಹೇಗೆ ಮಾದರಿಯಾಗಬೇಕು ಎನ್ನುವ ಅರಿವಿದೆ ಎಂದು ಡಿ ಕಾಕ್ ಹೇಳಿದ್ದಾರೆ.

Quinton de Kock statement 📝 pic.twitter.com/Vtje9yUCO6

— Cricket South Africa (@OfficialCSA)

ನಾನು ವೆಸ್ಟ್‌ ಇಂಡೀಸ್ ವಿರುದ್ದ ಕಣಕ್ಕಿಳಿಯದೇ ಯಾರಿಗೂ ಅಗೌರವ ಸೂಚಿಸಿಲ್ಲ. ನನ್ನಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೇ ದಯವಿಟ್ಟು ನನ್ನ ಕ್ಷಮಿಸಿ ಎಂದು ಅಭಿಮಾನಿಗಳಲ್ಲಿ ಡಿ ಕಾಕ್ ಕ್ಷಮೆಯಾಚಿಸಿದ್ದಾರೆ. ಬಹುತೇಕ ಮಂದಿಗೆ ಗೊತ್ತಿಲ್ಲ, ನಾನು ಸಹಾ ಮಿಶ್ರ ಕುಟುಂಬದಿಂದ ಬಂದವನು ಎಂದು. ನನ್ನ ಮಲತಾಯಿ ಕೂಡಾ ಕಪ್ಪು ಬಣ್ಣದವರು. ನನ್ನ ಪಾಲಿಗೆ Black Lives Matter ಹುಟ್ಟಿನಿಂದಲೇ ಅರಿವಿಗೆ ಬಂದಿದೆ. ಮುಂಬರುವ ಪಂದ್ಯಗಳಲ್ಲಿ ತಾವು ಮಂಡಿಯೂರಿ ಈ ಅಭಿಯಾನಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ.

T20 World Cup: ಒಬೆಡ್ ಮೆಕಾಯ್‌ ಬದಲಿಗೆ ವೆಸ್ಟ್ ಇಂಡೀಸ್ ತಂಡ ಕೂಡಿಕೊಂಡ ಜೇಸನ್ ಹೋಲ್ಡನ್‌..!

ಅಮೆರಿಕಾದಲ್ಲಿ ಕಳೆದ ವರ್ಷ ಅಂದರೆ 2020ರ ಮೇ 25ರಂದು ಜಾರ್ಜ್ ಫ್ಲಾಯ್ಡ್‌ (George floyd) ಎನ್ನುವ ಕಪ್ಪು ವರ್ಣೀಯ ವ್ಯಕ್ತಿಯನ್ನು ಬಿಳಿಯ ಪೊಲೀಸ್ ಅಧಿಕಾರಿ ಹತ್ಯೆ ಮಾಡಿದ್ದರು. ಈ ಧಾರುಣ ಹತ್ಯೆಯಾದ ಬಳಿಕ ಕ್ರಿಕೆಟಿಗರೂ ಸೇರಿದಂತೆ ಜಗತ್ತಿನಾದ್ಯಂತ ‘ಬ್ಲಾಕ್‌ ಲೈವ್ಸ್ ಮ್ಯಾಟರ್‌’ ಆಂದೋಲನ ನಡೆಯುತ್ತಿದೆ. ಟೀಂ ಇಂಡಿಯಾ ಕ್ರಿಕೆಟಿಗರು ಕೂಡ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ Black Lives Matter ಅಭಿಯಾನಕ್ಕೆ ಬೆಂಬಲ ಸಲ್ಲಿಸಿದ್ದರು. ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಡಿ ಕಾಕ್‌ ಈ ಹಿಂದೆಯೂ ಈ ಆಂದೋಲನವನ್ನು ಬೆಂಬಲಿಸಿರಲಿಲ್ಲ. ದಕ್ಷಿಣ ಆಫ್ರಿಕಾ ತಂಡದಲ್ಲಿ ಕಪ್ಪು ವರ್ಣೀಯರಿಗೆ ಮೀಸಲು ನೀಡುವ ವಿಚಾರವಾಗಿ ಕೆಲ ಆಟಗಾರರು ಹಾಗೂ ಕ್ರಿಕೆಟ್‌ ಮಂಡಳಿ ನಡುವೆ ತಿಕ್ಕಾಟ ನಡೆದಿತ್ತು. ಕಪ್ಪು ವರ್ಣೀಯ ಆಟಗಾರರಿಗೆ ಮೀಸಲು ನೀಡುವ ಬಗ್ಗೆ ಡಿ ಕಾಕ್‌ ಬಹಿರಂಗವಾಗಿ ಆಕ್ಷೇಪಿಸಿದ್ದರು

click me!