
ನವದೆಹಲಿ[ಡಿ.08]: ಭಾರತದ ದೇಸಿ ಟಿ20 ಲೀಗ್ಗಳಲ್ಲಿ ಬೆಟ್ಟಿಂಗ್ ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟರ ಮಟ್ಟಿಗೆ ಎಂದರೆ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ ಭಾರೀ ಕಳವಳ ವ್ಯಕ್ತಪಡಿಸಿದ್ದು, ಲೀಗ್‌ಗಳನ್ನು ಸ್ಥಗಿತಗೊಳಿಸುವಂತೆ ಕೇಳಿಕೊಂಡಿದೆ.
ರಣಜಿ ಟ್ರೋಫಿ: ಇತಿಹಾಸ ಬರೆಯಲು ಸಜ್ಜಾದ ಕರ್ನಾಟಕ!
ಭ್ರಷ್ಟಾಚಾರ ನಿಗ್ರಹ ದಳ, ಗೌಪ್ಯ ವರದಿಯೊಂದನ್ನು ಸಲ್ಲಿಸಿದ್ದು ಅದರಲ್ಲಿ ಈ ವರ್ಷದ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ಪಿಎಲ್)ನ ಟೂಟಿ ಪೇಟ್ರಿಯಾಟ್ಸ್ ಹಾಗೂ ಮದುರೈ ಪ್ಯಾಂಥರ್ಸ್ ನಡುವೆ ಜು.20ರಂದು ನಡೆದ ಪಂದ್ಯಕ್ಕೆ ಅಂತಾರಾಷ್ಟ್ರೀಯ ಬೆಟ್ಟಿಂಗ್ ವೆಬ್‌ಸೈಟ್ ಬೆಟ್‌ಫೇರ್ ಡಾಟ್ ಕಾಮ್‌ನಲ್ಲಿ ಬರೋಬ್ಬರಿ 225 ಕೋಟಿ ರುಪಾಯಿ ಬೆಟ್ಟಿಂಗ್ ನಡೆದಿತ್ತು ಎನ್ನುವ ಅಂಶವನ್ನು ಉಲ್ಲೇಖಿಸಿದೆ.
ಟೀಂ ಇಂಡಿಯಾಗಿಂದು ಟಿ20 ಸರಣಿ ಜಯದ ಗುರಿ
ಈ ಮೊತ್ತದ ಬೆಟ್ಟಿಂಗ್ ಕಂಡು ಸ್ವತಃ ಬೆಟ್‌ಫೇರ್ ಸಂಸ್ಥೆಗೇ ಗಾಬರಿಯಾಗಿತ್ತು. ಅದೇ ಕಾರಣಕ್ಕೆ ಟೂಟಿ ಪೇಟ್ರಿಯಾಟ್ಸ್ ತಂಡದ ಯಾವುದೇ ಪಂದ್ಯಗಳಿಗೆ ಬೆಟ್ಸ್ ತೆಗೆದುಕೊಳ್ಳುವುದು ಸಂಸ್ಥೆ ನಿಲ್ಲಿಸಿತು ಎನ್ನಲಾಗಿದೆ. ತಮಿಳುನಾಡು ಪ್ರೀಮಿಯರ್ ಲೀಗ್, ಕರ್ನಾಟಕ ಪ್ರೀಮಿಯರ್ ಲೀಗ್, ಮುಂಬೈ ಪ್ರೀಮಿಯರ್ ಲೀಗ್‌ನಲ್ಲಿ ಬೆಟ್ಟಿಂಗ್ ನಡೆಸಿರುವ ಬುಕ್ಕಿಗಳಿಗೆ ಪರಸ್ಪರ ಪರಿಚಯವಿದ್ದು, ಎಲ್ಲಾ ಪ್ರಕರಣಗಳಿಗೆ ಹೋಲಿಕೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.