ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಿದ್ದೇ ರತನ್ ಟಾಟಾ ನೆರವಿನಿಂದ!

By Naveen Kodase  |  First Published Oct 10, 2024, 1:26 PM IST

1983ರಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಐತಿಹಾಸಿಕ ಏಕದಿನ ವಿಶ್ವಕಪ್ ಗೆಲುವಿನ ಹಿಂದೆ ದಿಗ್ಗಜ ಉದ್ಯಮಿ ರತನ್ ಟಾಟಾ ಪಾತ್ರವಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು:  ಭಾರತದ ದಿಗ್ಗಜ ಉದ್ಯಮಿ, ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿದ್ದ ರತನ್ ಟಾಟಾ(86) ಬುಧವಾರ ತಡರಾತ್ರಿ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ರತನ್ ಟಾಟಾ ನಿಧನಕ್ಕೆ ಇಡೀ ಭಾರತವೇ ಕಂಬನಿ ಮಿಡಿದಿದೆ. ಇನ್ನು ಭಾರತೀಯ ಕ್ರಿಕೆಟ್ ಜಗತ್ತು ಕೂಡಾ ದಿಗ್ಗಜ ಉದ್ಯಮಿಯ ನಿಧನಕ್ಕೆ ಸಂತಾಪ ಸೂಚಿಸಿದೆ. ದೂರದೃಷ್ಟಿಯ ನಾಯಕರಾಗಿದ್ದ ರತನ್ ಟಾಟಾ ಹಲವರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದರು. ಇದಕ್ಕೆ ಕ್ರೀಡಾಪಟುಗಳು ಹೊರತಾಗಿಲ್ಲ. 

ಇನ್ನು ರತನ್ ಟಾಟಾ ಅವರು ಟೀಂ ಇಂಡಿಯಾ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನ ಹಿಂದೆಯೂ ಇದ್ದರು ಎನ್ನುವುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಬಲಾಢ್ಯ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಹಿಂದೆ ರತನ್ ಟಾಟಾ ಅವರ ದೂರದೃಷ್ಟಿಯ ನಿಲುವಿತ್ತು. 

Latest Videos

undefined

ಇಂಗ್ಲೆಂಡ್ ಆಯೋಜಿಸಿದ ಜೀವಮಾನ ಶ್ರೇಷ್ಠ ಪ್ರಶಸ್ತಿ ಸ್ವೀಕಾರಕ್ಕೆ ಗೈರಾಗಿದ್ದ ಟಾಟಾ, ಕಾರಣ ಮುದ್ದಿನ ನಾಯಿ!

ಹೌದು, 1983ರ ಏಕದಿನ ವಿಶ್ವಕಪ್ ಗೆಲುವಿನ ರೂವಾರಿಗಳು ಎನಿಸಿಕೊಂಡಿರುವ ಮೊಹೀಂದರ್ ಅಮರ್‌ನಾಥ್, ಸಂದೀಪ್ ಪಾಟೀಲ್ ಹಾಗೂ ರವಿ ಶಾಸ್ತ್ರಿ ಹೀಗೆ ಈ ಮೂವರು ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಕಾರಣವಾಗಿದ್ದೇ ಟಾಟಾ ಅವರ ಉದ್ಯಮ. ಇದು ಅಚ್ಚರಿಯೆನಿಸಿದರೂ ಸತ್ಯ. ಈ ಮೂವರು ಕ್ರಿಕೆಟಿಗರು ಟಾಟಾ ಸಮೂಹದ ತಂಡದ ಪರ ಕಣಕ್ಕಿಳಿದು ಕಲಿತ ಕ್ರಿಕೆಟ್ ಪಾಠಗಳೇ ವಿಶ್ವಕಪ್ ಗೆಲ್ಲಲು ನೆರವಾಯಿತು. ಮೋಹಿಂದರ್ ಅಮರ್‌ನಾಥ್ ದೇಶಿ ಕ್ರಿಕೆಟ್‌ನಲ್ಲಿ ಏರ್ ಇಂಡಿಯಾ ತಂಡವನ್ನು ಪ್ರತಿನಿಧಿಸಿದರೆ, ಸಂದೀಪ್ ಪಾಟೀಲ್ ಟಾಟಾ ಆಯಿಲ್ ಮಿಲ್ಸ್ ತಂಡವನ್ನು ಪ್ರತಿನಿಧಿಸಿದರು. ಇನ್ನು ರವಿಶಾಸ್ತ್ರಿ ಟಾಟಾ ಸ್ಟೀಲ್ ತಂಡವನ್ನು ಪ್ರತಿನಿಧಿಸಿದ್ದರು. 

ಅಪ್ಪ-ಅಮ್ಮ ಡಿವೋರ್ಸ್​ ಬಳಿಕ ಅನಾಥಾಶ್ರಮ ಸೇರಿದ್ದ ರತನ್​ ಟಾಟಾ ದತ್ತು ಪುತ್ರನಾಗಿ ಬೆಳೆದದ್ದೇ ಕುತೂಹಲ!

ಇನ್ನು ಇದಷ್ಟೇ ಅಲ್ಲದೇ ಭಾರತೀಯ ಕ್ರಿಕೆಟಿಗರಾದ, ಫಾರೂಕ್ ಇಂಜಿನಿಯರ್(ಟಾಟಾ ಮೋಟರ್ಸ್‌), ಮೋಹಿಂದರ್ ಅಮರ್‌ನಾಥ್(ಏರ್ ಇಂಡಿಯಾ), ಜಾವಗಲ್ ಶ್ರೀನಾಥ್(ಇಂಡಿಯನ್ ಏರ್‌ಲೈನ್ಸ್), ಸಂಜಯ್ ಮಂಜ್ರೇಕರ್(ಏರ್ ಇಂಡಿಯಾ), ಕಿರಣ್ ಮೋರೆ(ಟಿಎಸ್‌ಸಿ), ಸಂದೀಪ್ ಪಾಟೀಲ್(ಟಾಟಾ ಆಯಿಲ್ ಮಿಲ್ಸ್), ವಿವಿಎಸ್ ಲಕ್ಷ್ಮಣ್(ಇಂಡಿಯನ್ ಏರ್‌ಲೈನ್ಸ್), ಯುವರಾಜ್ ಸಿಂಗ್(ಇಂಡಿಯನ್ ಏರ್‌ಲೈನ್ಸ್), ಹರ್ಭಜನ್ ಸಿಂಗ್(ಇಂಡಿಯನ್ ಏರ್‌ಲೈನ್ಸ್), ಸುರೇಶ್ ರೈನಾ(ಏರ್ ಇಂಡಿಯಾ), ರಾಬಿನ್ ಉತ್ತಪ್ಪ(ಏರ್ ಇಂಡಿಯಾ), ಮೊಹಮ್ಮದ್ ಕೈಫ್(ಇಂಡಿಯನ್ ಏರ್‌ಲೈನ್ಸ್), ನಿಖಿಲ್ ಚೋಪ್ರಾ(ಇಂಡಿಯನ್ ಏರ್‌ಲೈನ್ಸ್), ಇರ್ಫಾನ್ ಪಠಾಣ್(ಏರ್ ಇಂಡಿಯಾ), ಆರ್‌ಪಿ ಸಿಂಗ್(ಏರ್ ಇಂಡಿಯಾ), ದಿನೇಶ್ ಮೋಂಗಿಯಾ(ಇಂಡಿಯನ್ ಏರ್‌ಲೈನ್ಸ್‌), ಅಜಿತ್ ಅಗರ್ಕರ್(ಟಾಟಾ ಸ್ಟೀಲ್), ರೋಹನ್ ಗವಾಸ್ಕರ್, ರಮೇಶ್ ಪೋವರ್, ಶಾರ್ದೂಲ್ ಠಾಕೂರ್(ಟಾಟಾ ಪವರ್), ಜಯಂತ್ ಯಾದವ್(ಏರ್ ಇಂಡಿಯಾ) ಹಾಗೂ ಜೂಲನ್ ಗೋಸ್ವಾಮಿ(ಏರ್ ಇಂಡಿಯಾ) ಇವರ ಬೆಳವಣಿಗೆಯ ಹಿಂದೆ ಟಾಟಾ ಸಮೂಹದ ಪಾತ್ರವಿದೆ. 
 

click me!