2023 ರೋಹಿತ್ ಶರ್ಮಾ ಪಾಲಿಗೆ ಕರಾಳ ವರ್ಷ..! ಒಂದಲ್ಲ, ಎರಡಲ್ಲ 4 ಬಾರಿ ಹಿಟ್‌ಮ್ಯಾನ್ ಹಾರ್ಟ್ ಬ್ರೇಕ್..!

By Suvarna News  |  First Published Dec 18, 2023, 5:52 PM IST

ಕನ್ನಡಿಗ ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ, ಬುಮ್ರಾ ಸೇರಿದಂತೆ ಇನ್ನು ಕೆಲ ಆಟಗಾರರು ಈ ವರ್ಷ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದ್ರೆ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಪಾಲಿಗೆ ಮಾತ್ರ 2023 ನಿಜಕ್ಕೂ ಅನ್ಲಕ್ಕಿ ಇಯರ್. 2023 ರಲ್ಲಿ, ಒಂದಲ್ಲ. ಎರಡಲ್ಲ, ನಾಲ್ಕು ಬಾರಿ ರೋಹಿತ್ ಹಾರ್ಟ್ ಬ್ರೇಕ್ ಆಗಿದೆ. 


ಬೆಂಗಳೂರು(ಡಿ.18) ನಾವೀಗ ವರ್ಷದ ಕೊನೆಯಲ್ಲಿದ್ದೇವೆ. ಇನ್ನು 12 ದಿನ ಕಳೆದ್ರೆ 2023 ವರ್ಷಕ್ಕೆ ಗುಡ್‌ಬೈ ಹೇಳೋ ಸಮಯ. 2023 ಹಲವರಿಗೆ ಖುಷಿ- ದುಃಖ ಎರಡನ್ನೂ ನೀಡಿದೆ. ಆದ್ರೆ, ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಪಾಲಿಗೆ ಮಾತ್ರ ಅನ್‌ಲಕ್ಕಿಯಾಗಿದೆ. ಅದ್ಹೇಗೆ ಅಂತೀರಾ..? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ..!

2023, ಟೀಂ ಇಂಡಿಯಾದ ಹಲವು ಆಟಗಾರರಿಗೆ ಲಕ್ಕಿ ಇಯರ್. ರನ್‌ಮಷೀನ್ ವಿರಾಟ್ ಕೊಹ್ಲಿಗಂತೂ ಮರೆಯಲಾಗದ ವರ್ಷ. ಈ ವರ್ಷ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನ ಬ್ರೇಕ್ ಮಾಡಿದ್ದಾರೆ. ಟೆಸ್ಟ್ ಮತ್ತು ಒನ್‌ಡೇ ಫಾರ್ಮೆಟ್ ಸೇರಿ ಒಟ್ಟು 8 ಶತಕ ಸಿಡಿಸಿದ್ದಾರೆ. 

Latest Videos

undefined

ಇನ್ನು ಕನ್ನಡಿಗ ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ, ಬುಮ್ರಾ ಸೇರಿದಂತೆ ಇನ್ನು ಕೆಲ ಆಟಗಾರರು ಈ ವರ್ಷ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದ್ರೆ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಪಾಲಿಗೆ ಮಾತ್ರ 2023 ನಿಜಕ್ಕೂ ಅನ್ಲಕ್ಕಿ ಇಯರ್. 2023 ರಲ್ಲಿ, ಒಂದಲ್ಲ. ಎರಡಲ್ಲ, ನಾಲ್ಕು ಬಾರಿ ರೋಹಿತ್ ಹಾರ್ಟ್ ಬ್ರೇಕ್ ಆಗಿದೆ. 

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ ನಾಯಕರಾಗಿದ್ದು ಯಾರಿಗೂ ಇಷ್ಟವಿಲ್ವಾ..?

ಯೆಸ್, 2023 ರೋಹಿತ್ ಶರ್ಮಾ ಪಾಲಿಗೆ ಕರಾಳ ವರ್ಷ ಅಂದ್ರೆ ತಪ್ಪಿಲ್ಲ. IPLನಲ್ಲೇ ಹಿಟ್‌ಮ್ಯಾನ್‌ಗೆ ದುರಾದೃಷ್ಟ ಬೆನ್ನೇರಿತು. ಟೂರ್ನಿಯಲ್ಲಿ ರೋಹಿತ್ ಫ್ಲಾಪ್ ಶೋ ನೀಡಿದ್ರು. 16 ಪಂದ್ಯಗಳಲ್ಲಿ ಬ್ಯಾಟ್ ಬೀಸಿ, ಕೇವಲ 2 ಅರ್ಧಶತಕ ದೊಂದಿಗೆ 332 ರನ್ಗಳಿಸಿದ್ರು. ಇನ್ನು ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್‌ನಲ್ಲೇ ಸೋತು ಟೂರ್ನಿಯಿಂದ ಹೊರಬಿತ್ತು.

WTC ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು..!

IPLನಲ್ಲಿ ಆಟಗಾರನಾಗಿ ಫೇಲ್ ಆಗಿದ್ದ ರೋಹಿತ್, WTCಯಲ್ಲಿ ನಾಯಕನಾಗಿ ವೈಫಲ್ಯ ಅನುಭವಿಸಿದ್ರು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2021ರಲ್ಲಿ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ಗೆ ಎಂಟ್ರಿ ನೀಡಿತ್ತು. ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. 2023ರಲ್ಲೂ ಟೀಮ್ ಇಂಡಿಯಾ ನಾಯಕತ್ವದಲ್ಲಿ ಫೈನಲ್ ತಲುಪಿತ್ತು. ಅದ್ರೆ, ರೋಹಿತ್ ನಾಯಕತ್ವದಲ್ಲೂ ಭಾರತಕ್ಕೆ WTC ಚಾಂಪಿಯನ್ಸ್ ಪಟ್ಟ ಒಲಿಯಲಿಲ್ಲ. ಇದರಿಂದ ರೋಹಿತ್ ನಾಯಕತ್ವದ ವಿರುದ್ಧ ಟೀಕೆಗಳು ವ್ಯಕ್ತವಾದ್ವು. ಟೆಸ್ಟ್ ನಾಯಕತ್ವಕ್ಕೆ ರೋಹಿತ್ ಅನ್ಫಿಟ್ ಅನ್ನೋ ಮಾತುಗಳು ಕೇಳಿ ಬಂದ್ವು. 

IPL 2024 ಈ ದಿಗ್ಗಜ ಕ್ರಿಕೆಟಿಗರ ಪಾಲಿಗೆ ಕೊನೆಯ ಐಪಿಎಲ್‌..? ಈ ಪಟ್ಟಿಯಲ್ಲಿವೆ ಇಂಟ್ರೆಸ್ಟಿಂಗ್ ಹೆಸರುಗಳು

ಏಕದಿನ ವಿಶ್ವಕಪ್ ಗೆಲ್ಲುವ ಕನಸು ನುಚ್ಚುನೂರು..!

ಯೆಸ್, ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಬಿಗ್ ಚಾಲೆಂಜ್ ಆಗಿತ್ತು. ಆದ್ರೆ, ಚಾಲೆಂಜ್ನಲ್ಲಿ ರೋಹಿತ್ ದಿಗ್ಜಿಜಯ ಸಾಧಿಸಿದ್ರು. ಬ್ಯಾಟಿಂಗ್ ಮತ್ತು ನಾಯಕತ್ವ ಎರಡರಲ್ಲೂ ಮಿಂಚಿದ್ರು. ಬ್ಯಾಟಿಂಗ್ನಲ್ಲಂತೂ ಜಬರ್ದಸ್ತ್ ಪ್ರದರ್ಶನ ನೀಡಿದ್ರು. ಅವ್ರ ಆಟಕ್ಕೆ ಫ್ಯಾನ್ಸ್, ಮಾಜಿ ಪ್ಲೇಯರ್ಸ್ ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂತು. ಆದ್ರೆ, ಸೆಮಿಫೈನಲ್ವರೆಗೂ ಸೋಲಿಲ್ಲದ ಟೀಮ್ ಇಂಡಿಯಾ, ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸ್ತು. ಅಲ್ಲಿಗೆ ವಿಶ್ವಕಪ್ ಗೆಲ್ಲುವ ರೋಹಿತ್ರ ಕನಸು ನುಚ್ಚು ನೂರಾಯ್ತು. 

ಗಾಯದ ಮೇಲೆ ಬರೆ ಎಳೆದ ಮುಂಬೈ ಇಂಡಿಯನ್ಸ್..!

ವಿಶ್ವಕಪ್ ಸೋಲಿನ ನೋವಿನಿಂದ ಹೊರಬರುವ ಮೊದಲೇ, ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್‌ರನ್ನ ಕೆಳಗಿಳಿಸಲಾಗಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಟ್ಟಿನಲ್ಲಿ 2023 ರೋಹಿತ್‌ಗೆ ಖುಷಿಗಿಂತ ಹೆಚ್ಚು ನೋವನ್ನೇ ನೀಡಿದೆ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!