ಮೂವರು ದಿಗ್ಗಜರಿಗೆ ಕೊನೆಯ ಐಪಿಎಲ್..! ಟ್ರೋಫಿಯೊಂದಿಗೆ ವಿದಾಯ ಹೇಳ್ತಾರಾ ತ್ರಿಮೂರ್ತಿಗಳು..?

By Naveen Kodase  |  First Published Dec 18, 2023, 2:48 PM IST

ಒಬ್ಬ ವೈಟ್ ಬಾಲ್‌ನಲ್ಲಿ ಗ್ರೇಟ್ ಬ್ಯಾಟರ್. ಮತ್ತೊಬ್ಬ ರೆಡ್ ಬಾಲ್‌ನಲ್ಲಿ ಗ್ರೇಟ್ ಬೌಲರ್. ಇನ್ನೊಬ್ಬ ಗ್ರೇಟ್ಗಳಲ್ಲೇ ಗ್ರೇಟರ್. ಈ ಮೂವರು ಮುಂದಿನ ಐಪಿಎಲ್ ಬಳಿಕ ಫ್ರಾಂಚೈಸಿ ಲೀಗ್ಗೆ ಗುಡ್ ಬೈ ಹೇಳಲು ಸಿದ್ದತೆ ಮಾಡಿಕೊಳ್ತಿದ್ದಾರೆ.


ಬೆಂಗಳೂರು(ಡಿ.18): ಐಪಿಎಲ್ ಆರಂಭಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಮಿನಿ ಬಿಡ್ ಸಹ ಇನ್ನೂ ನಡೆದಿಲ್ಲ. ಫೈನಲ್ ಟೀಮ್‌ಗಳು ಸಹ ಆಗಿಲ್ಲ. ಆಗ್ಲೇ ಮೂವರು ಲೆಜೆಂಡ್ ಕ್ರಿಕೆಟರ್ಸ್ ಐಪಿಎಲ್‌ಗೆ ವಿದಾಯ ಹೇಳಲು ಪ್ಲಾನ್ ಮಾಡ್ತಿದ್ದಾರೆ. 2024ರಲ್ಲಿ ಐಪಿಎಲ್ ಆಡಿ ಫ್ರಾಂಚೈಸಿ ಲೀಗ್ನಿಂದ ದೂರ ಉಳಿಯಲಿದ್ದಾರೆ. ಆ ತ್ರಿಮೂರ್ತಿಗಳು ಯಾರು ಅನ್ನೋದನ್ನ ನೋಡಿಕೊಂಡು ಬರೋಣ ಬನ್ನಿ.

ಮೂವರು ದಿಗ್ಗಜರಿಗೆ ಕೊನೆಯ ಐಪಿಎಲ್..!

Latest Videos

undefined

ಒಬ್ಬ ವೈಟ್ ಬಾಲ್‌ನಲ್ಲಿ ಗ್ರೇಟ್ ಬ್ಯಾಟರ್. ಮತ್ತೊಬ್ಬ ರೆಡ್ ಬಾಲ್‌ನಲ್ಲಿ ಗ್ರೇಟ್ ಬೌಲರ್. ಇನ್ನೊಬ್ಬ ಗ್ರೇಟ್ಗಳಲ್ಲೇ ಗ್ರೇಟರ್. ಈ ಮೂವರು ಮುಂದಿನ ಐಪಿಎಲ್ ಬಳಿಕ ಫ್ರಾಂಚೈಸಿ ಲೀಗ್ಗೆ ಗುಡ್ ಬೈ ಹೇಳಲು ಸಿದ್ದತೆ ಮಾಡಿಕೊಳ್ತಿದ್ದಾರೆ. ಈಗಾಗಲೇ ಕಲರ್ ಫುಲ್ ಟೂರ್ನಿಗೆ ವಿದಾಯ ಹೇಳುವ ಮುನ್ಸೂಚನೆಯನ್ನೂ ನೀಡಿದ್ದಾರೆ. ಈ ಮೂವರು ನಿವೃತ್ತಿಯಾದ್ರೆ ಐಪಿಎಲ್ ತನ್ನ ಕಲರ್ ಫುಲ್ ಅನ್ನೇ ಕಳೆದುಕೊಳ್ಳಲಿದೆ. ಯಾಕಂದ್ರೆ ಐಪಿಎಲ್ಗೆ ಈ ಮೂವರ ಕೊಡುಗೆ ಅಪಾರ.

ಐಪಿಎಲ್‌ಗೆ ಗುಡ್ ಬೈ ಹೇಳಲು ಕ್ಯಾಪ್ಟನ್ಸಿ ಬಿಟ್ಟ ರೋಹಿತ್..!

ರೋಹಿತ್ ಶರ್ಮಾ ವೈಟ್ ಬಾಲ್ ಕ್ರಿಕೆಟ್ ಕಿಂಗ್. ಭಾರತಕ್ಕೆ ಎರಡು ಏಷ್ಯಾಕಪ್ ಗೆಲ್ಲಿಸಿಕೊಟ್ಟಿರುವ ಮುಂಬೈಕರ್, ಒನ್ಡೇಯಲ್ಲಿ 10 ಸಾವಿರ ರನ್ ಹೊಡೆದಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್‌ಗೆ ದಾಖಲೆಯ ಐದು ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ. ಹೌದು, ಮುಂಬೈ ಗೆದ್ದಿರೋ ಐದಕ್ಕೆ ಐದು ಐಪಿಎಲ್ ಕಪ್‌ಗಳನ್ನ ರೋಹಿತ್ ಕ್ಯಾಪ್ಟನ್ಸಿಯಲ್ಲೇ ಗೆದ್ದಿದೆ. ಆದ್ರೆ ಈ ಸಲ ಹಾರ್ದಿಕ್ ಪಾಂಡ್ಯಗೋಸ್ಕರ ಕ್ಯಾಪ್ಟನ್ಸಿ ಬಿಟ್ಟಿದ್ದಾರೆ.

ರೋಹಿತ್ ಶರ್ಮಾ ಅವರನ್ನ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿಯಿಂದ ಕಿಕೌಟ್ ಮಾಡಿದಲ್ಲ. ಅವರಿಗೆ ಮಾಹಿತಿ ನೀಡಿಯೇ ಕೆಳಗಿಳಿಸಿದ್ದು ಅನ್ನೋ ಸುದ್ದಿ ನಿಮಗೆ ಆಗ್ಲೇ ಗೊತ್ತಾಗಿದೆ. ಅವರು ಕ್ಯಾಪ್ಟನ್ಸಿ ಬಿಟ್ಟಿರುವುದೇ ಐಪಿಎಲ್‌ಗೆ ಗುಡ್ ಬೈ ಹೇಳಲು. ಹೌದು, ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಆಡಿ. ಅವರಿಗೊಂದಿಷ್ಟು ಟಿಪ್ಸ್ ನೀಡಿ. ತಂಡವನ್ನ ರೆಡಿ ಮಾಡಿ. ಐಪಿಎಲ್ ವಿದಾಯ ಹೇಳಲು ಎದುರು ನೋಡ್ತಿದ್ದಾರೆ. 2025ರ ಐಪಿಎಲ್ ವೇಳೆಗೆ ರೋಹಿತ್‌ಗೆ 38 ವರ್ಷವಾಗಿರುತ್ತೆ. ಆ ವೇಳೆಗೆ ಅವರಿಗೆ ಫಿಟ್ನೆಸ್ ಮತ್ತು ಫಾರ್ಮ್ ಎರಡು ಇರೋದಿಲ್ಲ. ಅಲ್ಲಿಗೆ 2024ರ ಐಪಿಎಲ್ ರೋಹಿತ್ ಪಾಲಿಗೆ ಕೊನೆ ಐಪಿಎಲ್.

ಅಶ್ವಿನ್‌ಗೆ ಕೊನೆ ಐಪಿಎಲ್?

ರೋಹಿತ್ ವೈಟ್ ಬಾಲ್ ಕ್ರಿಕೆಟ್ನಲ್ಲಿ ಲೆಜೆಂಡ್ ಆದ್ರೆ, ಆರ್. ಅಶ್ವಿನ್ ರೆಡ್ ಬಾಲ್ ಕ್ರಿಕೆಟ್ನಲ್ಲಿ ಲೆಜೆಂಡ್ ಬೌಲರ್. ಸದ್ಯ ಭಾರತೀಯ ಕ್ರಿಕೆಟ್‌ನ ಸ್ಪಿನ್ ದಿಗ್ಗಜ. ಈಗ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಅವರಿಗೆ 2024ರ ಐಪಿಎಲ್ ಕೊನೆಯದ್ದು. ವಯಸ್ಸು ಮತ್ತು ವೈಟ್ ಬಾಲ್ ಎರಡು ಅವರ ಮಾತು ಕೇಳುತ್ತಿಲ್ಲ. ಹಾಗಾಗಿ ಕಲರ್ ಫುಲ್ ಟೂರ್ನಿಗೆ ವಿದಾಯ ಹೇಳಲು ಕಾಯ್ತಿದ್ದಾರೆ. ಸಿಎಸ್‌ಕೆಯಲ್ಲಿದ್ದಾಗ ಐಪಿಎಲ್ ಟ್ರೋಫಿ ಹಿಡಿದ್ದಿದ್ದೇ ಅವರ ಐಪಿಎಲ್ ಸಾಧನೆ.

ಟ್ರೋಫಿಯೊಂದಿಗೆ ವಿದಾಯ ಹೇಳ್ತಾರಾ ಧೋನಿ..?

ಎಂ ಎಸ್ ಧೋನಿ, ಕೂಲ್ ಕ್ಯಾಪ್ಟನ್, ಚಾಣಾಕ್ಷ ನಾಯಕ. ಗ್ರೇಟ್ ಫಿನಿಶರ್. ಅದ್ಭುತ ವಿಕೆಟ್ ಕೀಪರ್. ರೋಹಿತ್ ಶರ್ಮಾರಂತೆ ಐದು ಐಪಿಎಲ್ ಟ್ರೋಫಿ ಗೆದ್ದ ನಾಯಕ. ಗ್ರೇಟ್ಸ್‌ಗಳಲ್ಲಿ ಗ್ರೇಟ್ ಎನಿಸಿಕೊಂಡಿರುವ ಮಹಿ, 2019ರ ಬಳಿಕ ಇಂಟರ್ ನ್ಯಾಷನಲ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ರೂ ಐಪಿಎಲ್ ಆಡ್ತಿದ್ದಾರೆ. ವಯಸ್ಸು 40. ಫಿಟ್ನೆಸ್ ಇದ್ದರೂ ಫಾರ್ಮ್ ಇಲ್ಲ. ಆದ್ರೆ ಪಾಪ್ಯುಲಾರಿಟಿ ಇದೆ. ನಾಯಕತ್ವದಲ್ಲಿ ಪಂಟರ್. ಪಾಪುಲಾರಿಟಿ ಮತ್ತು ಕ್ಯಾಪ್ಟನ್ಸಿ. ಈ ಎರಡರಿಂದಲೇ ಧೋನಿ ಇನ್ನೂ ಐಪಿಎಲ್ ಆಡ್ತಿದ್ದಾರೆ. ಸಿಎಸ್‌ಕೆ ಫ್ರಾಂಚೈಸಿ ಸಹ ಧೋನಿ ನಿವೃತ್ತಿಯಾಗಲು ಬಿಡುತ್ತಿಲ್ಲ.

ಆದ್ರೆ 2024ರ ಐಪಿಎಲ್ ಬಳಿಕ ಧೋನಿ ಸಹ ಫ್ರಾಂಚೈಸಿ ಲೀಗ್‌ಗೆ ವಿದಾಯ ಹೇಳಲಿದ್ದಾರೆ. ಅಲ್ಲಿಗೆ ಮೂವರು ಲೆಜೆಂಡ್ ಕ್ರಿಕೆಟರ್ಸ್ ಒಂದೇ ಬಾರಿಗೆ ಐಪಿಎಲ್‌ಗೆ ಗುಡ್ ಬೈ ಹೇಳ್ತಿದ್ದಾರೆ. ಇದು ಕಲರ್ ಫುಲ್ ಟೂರ್ನಿ ನೋಡುಗರಿಗೆ ಬೇಸರ ಮೂಡಿಸೋದಂತೂ ಸತ್ಯ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!