IPL Auction 5 ಬಾರಿಯ ಚಾಂಪಿಯನ್‌ ಮುಂಬೈಗೆ ಗ್ರೀನ್‌ ಬಲ; ರೋಹಿತ್ ಪಡೆಗೆ ಮತ್ತೆ ಕಪ್‌ ಗೆಲ್ಲುವ ಛಲ..!

Published : Dec 24, 2022, 09:41 AM IST
IPL Auction 5 ಬಾರಿಯ ಚಾಂಪಿಯನ್‌ ಮುಂಬೈಗೆ ಗ್ರೀನ್‌ ಬಲ; ರೋಹಿತ್ ಪಡೆಗೆ ಮತ್ತೆ ಕಪ್‌ ಗೆಲ್ಲುವ ಛಲ..!

ಸಾರಾಂಶ

ದುಬಾರಿ ಮೊತ್ತ ನೀಡಿ ಕ್ಯಾಮರೋನ್ ಗ್ರೀನ್ ಖರೀದಿಸಿದ ಮುಂಬೈ ಇಂಡಿಯನ್ಸ್‌ ಮಿನಿ ಹರಾಜಿನಲ್ಲಿ ಎಂಟು ಆಟಗಾರರು ಮುಂಬೈ ಇಂಡಿಯನ್ಸ್ ತೆಕ್ಕೆಗೆ ಆರನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ ರೋಹಿತ್ ಶರ್ಮಾ ಪಡೆ

ಕೊಚ್ಚಿ(ಡಿ.24): ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡವೆಂದು ಗುರುತಿಸಿಕೊಂಡಿರುವ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು, ಮಿನಿ ಹರಾಜಿನಲ್ಲಿ ಜಿದ್ದಿಗೆ ಬಿದ್ದವರಂತೆ ಹೋರಾಡಿ ಆಸ್ಟ್ರೇಲಿಯಾದ ಕ್ಯಾಮರೋನ್ ಗ್ರೀನ್ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಕ್ಯಾಮರೋನ್ ಗ್ರೀನ್ ಮಾತ್ರವಲ್ಲದೇ, ಜೇ ರಿಚರ್ಡ್‌ಸನ್, ಪೀಯೂಸ್ ಚಾವ್ಲಾ ಸೇರಿದಂತೆ ಒಟ್ಟು 8 ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹೌದು, ಮುಂಬೈ ಇಂಡಿಯನ್ಸ್ ತಂಡವು ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ದಾಖಲೆಯ 17.50 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇದಷ್ಟೇ ಅಲ್ಲದೇ ಆಸ್ಟ್ರೇಲಿಯಾದ ಮತ್ತೋರ್ವ ವೇಗಿ ಜೇ ರಿಚರ್ಡ್‌ಸನ್ ಅವರಿಗೆ 1.50 ಕೋಟಿ ರುಪಾಯಿ ನೀಡಿ ಮುಂಬೈ ಇಂಡಿಯನ್ಸ್ ತಂಡವು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಅನುಭವಿ ಲೆಗ್‌ಸ್ಪಿನ್ನರ್ ಪೀಯೂಸ್ ಚಾವ್ಲಾ ಕೂಡಾ 50 ಲಕ್ಷ ರುಪಾಯಿಗೆ ಮುಂಬೈ ಪಾಳಯ ಕೂಡಿಕೊಂಡಿದ್ದಾರೆ.

ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಪಾಲಾದ ಆಟಗಾರರ ಕಂಪ್ಲೀಟ್ ಡೀಟೈಲ್ಸ್ ಹೀಗಿದೆ

* ಕ್ಯಾಮರೋನ್ ಗ್ರೀನ್‌- ಆಲ್ರೌಂಡರ್ - 17.50 ಕೋಟಿ ರುಪಾಯಿ
* ಜೇ ರಿಚರ್ಡ್‌ಸನ್ - ಬೌಲರ್ - 1.50 ಕೋಟಿ ರುಪಾಯಿ
* ಪೀಯೂಸ್ ಚಾವ್ಲಾ - ಬೌಲರ್ - 50 ಲಕ್ಷ ರುಪಾಯಿ
* ನೆಹಲ್‌ ವದೇರಾ - ಆಲ್ರೌಂಡರ್ - 20 ಲಕ್ಷ ರುಪಾಯಿ
*  ರಾಘವ್ ಗೋಯೆಲ್ - ಬೌಲರ್ -  20 ಲಕ್ಷ ರುಪಾಯಿ
* ಡುಯನ್ ಯಾನ್ಸೆನ್ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಶಮ್ಸ್ ಮುಲಾನಿ - ಆಲ್ರೌಂಡರ್ - 20 ಲಕ್ಷ ರುಪಾಯಿ

ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಹೀಗಿತ್ತು:

ರೋಹಿತ್ ಶರ್ಮಾ(ನಾಯಕ), ಟಿಮ್ ಡೇವಿಡ್, ರಮನ್‌ದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟನ್ ಸ್ಟಬ್ಸ್, ಡೇವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡುಲ್ಕರ್, ಅರ್ಶದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆನ್‌ಡ್ರಾಫ್,  ಆಕಾಶ್ ಮಧ್ವಾಲ್

IPL Retention ಫ್ಯಾಬಿಯನ್ ಅಲೆನ್, ಉನದ್ಕಟ್ ಸೇರಿ 13 ಆಟಗಾರರ ಕೈಬಿಟ್ಟ ಮುಂಬೈ ಇಂಡಿಯನ್ಸ್!

ಟ್ರೇಡಿಂಗ್ ಮೂಲಕ ಖರೀದಿಸಿದ ಆಟಗಾರ: ಜೇಸನ್ ಬೆಹ್ರೆನ್‌ಡ್ರಾಫ್

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ 14 ಪಂದ್ಯಗಳ ಪೈಕಿ ಕೇವಲ 4 ಗೆಲುವು ಹಾಗೂ 10 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿಯುವ ಮೂಲಕ ತೀವ್ರ ಮುಖಭಂಗ ಅನುಭವಿಸಿತ್ತು. ಇದೀಗ 2023ರ ಐಪಿಎಲ್ ಟೂರ್ನಿಗೆ ಮಾರಕ ವೇಗಿ ಜೋಫ್ರಾ ಆರ್ಚರ್ ಸಂಪೂರ್ಣ ಫಿಟ್ ಆಗಿ ಮುಂಬೈ ಇಂಡಿಯನ್ಸ್ ತಂಡ ಕೂಡಿಕೊಳ್ಳಲಿದ್ದಾರೆ. ಇದರ ಜತೆಗೆ ಕ್ಯಾಮರೋನ್ ಗ್ರೀನ್ ಕೂಡಾ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಕ್ಷಮತೆ ಹೊಂದಿದ್ದು, ಈ ತಂಡವನ್ನಿಟ್ಟುಕೊಂಡು ಮುಂಬೈ ಇಂಡಿಯನ್ಸ್ ಪಡೆ ಆರನೇ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಡರ್-19 ಏಷ್ಯಾಕಪ್‌: ಫೈನಲ್‌ನಲ್ಲಿ ಮತ್ತೆ ಪಾಕ್ ಬಗ್ಗುಬಡಿಯಲು ಭಾರತ ಯುವ ಪಡೆ ರೆಡಿ!
ICC Men’s T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಅಚ್ಚರಿಯ ಆಯ್ಕೆ, ಗಿಲ್‌ಗಿಲ್ಲ ಸ್ಥಾನ