ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿದೆ.
ಮುಂಬೈ(ಜ.14): ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ದುಕೊಂಡಿದೆ. ಭಾರತ ಆಡುತ್ತಿರುವ ವರ್ಷದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆಲ್ಲುವಲ್ಲಿ ವಿಫಲವಾಗಿದೆ.
Australia wins the toss and elects to bowl first in the 1st ODI against at the Wankhede. pic.twitter.com/4vhE55kafX
— BCCI (@BCCI)ಈಗಾಗಲೇ ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಮುಂಬೈನ ವಾಂಖೆಡೆ ಮೈದಾನ ಸಜ್ಜಾಗಿದೆ.
ಮುಂಬೈನಲ್ಲಿಂದು ಇಂಡೋ-ಆಸೀಸ್ ಒನ್ ಡೇ ಫೈಟ್
ಆಸೀಸ್ ರನ್ ಮಷೀನ್ ಮಾರ್ನಸ್ ಲಬುಶೇನ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಇನ್ನುಳಿದಂತೆ ಭಾರತ ತಂಡದ ಪರ ಶಿಖರ್ ಧವನ್, ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ.
2019ರ ಆರಂಭದಲ್ಲೂ ಆಸ್ಟ್ರೇಲಿಯಾ ತಂಡವು ಭಾರತ ಪ್ರವಾಸವನ್ನು ಕೈಗೊಂಡಿತ್ತು. ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ತಂಡವು 3-2 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು.
ತಂಡಗಳು ಹೀಗಿವೆ:
ಭಾರತ:
1st ODI. India XI: S Dhawan, R Sharma, KL Rahul, V Kohli, S Iyer, R Pant, R Jadeja, S Thakur, K Yadav, M Shami, J Bumrah https://t.co/yur0YulQOC
— BCCI (@BCCI)ಆಸ್ಟ್ರೇಲಿಯಾ:
1st ODI. Australia XI: D Warner, A Finch, S Smith, M Labuschagne, A Turner, A Carey, A Agar, P Cummins, M Starc, K Richardson, A Zampa https://t.co/yur0YulQOC
— BCCI (@BCCI)