ಕೊರೋನಾ ತಾಂಡವ: ಭಾರತದ ಸಹಾಯ ಯಾಚಿಸಿದ ವಿಶ್ವದ ದೊಡ್ಡಣ್ಣ!

By Suvarna News  |  First Published Apr 5, 2020, 10:01 AM IST

ಕೊರೋನಾ ತಾಂಡವಕ್ಕೆ ನಡುಗಿದ ವಿಶ್ವದ ದೊಡ್ಡಣ್ಣ| ದಯವಿಟ್ಟು ಸಹಾಯ ಮಾಡಿ, ಭಾರತಕ್ಕೆ ಅಮೆರಿಕಾದ ಮನವಿ| ಔಷಧ ಪೂರೈಕೆ ಮತ್ತೆ ಆರಂಭಿಸಿ ಎಂದ ಟ್ರಂಪ್


ವಾಷಿಂಗ್ಟನ್(ಏ.05); ಕೊರೋನಾ ಮಹಾಮಾರಿಗೆ ನಲುಗಿರುವ ವಿಶ್ವದ ದೊಡ್ಡಣ್ಣ ಅಮೆರಿಕ ಸದ್ಯ ಭಾರತದ ಬಳಿ ಸಹಾಯ ಕೋರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪಿಎಂ ಮೋದಿ ನಡುವೆ ಶನಿವಾರ ಸಂಜೆ ಫೋನ್ ಮೂಲಕ ಸಂಬಾಷಣೆ ನಡೆದಿದ್ದು, ಈ ವೇಳೆ ಕೊರೋನಾ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಚರ್ಚೆ ನಡೆದಿದೆ. ಇನ್ನು ಟ್ರಂಪ್ ಪಿಎಂ ಮೋದಿ ಬಳಿ ಹೈಡ್ರೋಕ್ಸೈಕ್ಲೋರಾಯಿಕ್ಸಿನ್ ಮಾತ್ರೆಗಳನ್ನೂ ರಫ್ತು ಮಾಡುವಂತೆ ಕೋರಿದ್ದಾರೆ. ಈ ಮಾತ್ರೆಗಳನ್ನು ಕೊರೋನಾ ಚಿಕಿತ್ಸೆಗೆ ನೀಡಲಾಗುತ್ತದೆ.

ಸೋಂಕಿತನ ಜತೆ ಉಸಿರಾಡಿದ್ರೂ ಕೊರೋನಾ ವೈರಸ್‌ ಬರುತ್ತೆ!

Tap to resize

Latest Videos

undefined

ನಾನು ಕೂಡಾ ಹೈಡ್ರೋಕ್ಸೈಕ್ಲೋರಾಯಿಕ್ಸಿನ್ ಸೇವಿಸುತ್ತೇನೆ: ಟ್ರಂಪ್

ಕೊರೋನಾ ವೈರಸ್ ಟಾಸ್ಕ್ ಫೋರ್ಸ್ ಸಂಬಂಧಿತ ಪ್ರೆಸ್ ಬ್ರೀಫಿಂಗ್‌ನಲ್ಲಿ ಪಿಎಂ ಮೋದಿ ಜೊತೆಗೆ ನಡೆಸಿದ ಸಂಬಾಷಣೆ ಕುರಿತು ಮಾಹಿತಿ ನೀಡಿದ ಟ್ರಂಪ್ 'ಇಂದು ನಾನು ಪಿಎಂ ಮೋದಿ ಬಳಿ ನಡೆದ ಸಂಭಾಷಣೆಯಲ್ಲಿ ಈಗಾಗಲೇ ನಿಲ್ಲಿಸಲಾಗಿರುಉವ Hydroxychloroquine ಮಾತ್ರೆಗಗಳ ಪೂರೈಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇನೆ. ನಾನು ಕೂಡಾ ಈ ಮಾತ್ರೆ ಸೇವಿಸುತ್ತೇನೆ.ಈ ಕುರಿತು ನನ್ನ ವೈದ್ಯರ ಬಳಿ ಸಲಹೆ ಪಡೆಯುತ್ತೇನೆ' ಎಂದಿದ್ದಾರೆ.

ಭಾರತ ಔಷಧಿ ರಫ್ತು ಮಾಡಿದರೆ ನಾವು ಋಣಿ

'ಭಾರತ ಹೆಚ್ಚಿನ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ಉತ್ಪಾದಿಸುತ್ತದೆ. ಭಾರತೀಯರಿಗೂ ಇದರ ಅಗತ್ಯವಿದೆ. ಹೀಗಿರುವಾಗ ನಮ್ಮ ಆರ್ಡರ್ ಕಳುಹಿಸಿಕೊಟ್ಟರೆ ನಾವು ಭಾರತಕ್ಕೆ ಋಣಿಯಾಗಿರುತ್ತೇವೆ' ಎಂದಿದ್ದಾರೆ.

ಕೊರೋನಾ ತಾಂಡವ: ಅಮೆರಿಕದಲ್ಲಿ ಒಂದೇ ದಿನ ಸಾವಿರಕ್ಕೂ ಅಧಿಕ ಮಂದಿ ಸಾವು!

ಪಿಎಂ ಮೋದಿ ಕೂಡಾ ಮಾಹಿತಿ ನೀಡಿದ್ದರು

ಇನ್ನು ಟ್ರಂಪ್ ಈ ಮಾಹಿತಿ ನೀಡುವುದಕ್ಕೂ ಮೊದಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರೊಂದಿಗೆ ನಡೆದ ಮಾತುಕತೆ ಕುರಿತು ಮಾಹಿತಿ ನಿಡಿದ್ದರು. ಈ ಸಂಬಂಧ ಟ್ವೀಟ್ ಮಾಡಿದ್ದ ಮೋದಿ 'ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಫೋನ್ ಮೂಲಕ ವಿಸ್ತಾರ ಚರ್ಚೆ ನಡೆಯಿತು. ಈ ಮಾತುಕತೆ ಚೆನ್ನಾಗಿ ನಡೆಯಿತು. ಕೊರೋನಾ ವೈರಸ್ ವಿರುದ್ಧ ಭಾರತ ಹಾಗೂ ಅಮೆರಿಕ ಒಗ್ಗಟ್ಟಿನಿಂದ ಹೋರಾಡಲು ಒಪ್ಪಿಕೊಂಡಿದ್ದೇನೆ' ಎಂದಿದ್ದಾರೆ.

click me!