ಕೊರೋನಾ ಭೀತಿ: ಮೈಸೂರಿಗರೇ ಯಾವುದೇ ಕಾರಣಕ್ಕೂ ನಮ್ಮ ಊರಿಗೆ ಬರಬೇಡಿ!

By Suvarna NewsFirst Published Mar 26, 2020, 8:09 AM IST
Highlights

70 ಜನರನ್ನ ಹೋಂ ಕ್ವಾರಂಟೇನ್‌ನಲ್ಲಿ ಇಟ್ಟ ಆರೋಗ್ಯಾಧಿಕಾರಿಗಳು|ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ನಡೆದ ಘಟನೆ| ಮುಂಜಾಗ್ರತಾ ಕ್ರಮವಾಗಿ ಯಾರೂ ಮನೆಯಿಂದ ಹೊರ ಬಾರದಂತೆ ಕಟ್ಟಪ್ಪಣೆ| 

ಹಾಸನ(ಮಾ.26): ಕೊರೋನಾ ಪಾಸಿಟಿವ್ ಇರೋ ಪ್ರದೇಶದಿಂದ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ  ಊರಿಗೆ ಬಂದ 70 ಜನರನ್ನ ಹೋಂ ಕ್ವಾರಂಟೇನ್‌ನಲ್ಲಿ ಇಟ್ಟ ಘಟನೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಯಾರೂ ಮನೆಯಿಂದ ಹೊರ ಬಾರದಂತೆ ಕಟ್ಟಪ್ಪಣೆ ಮಾಡಲಾಗಿದೆ.

ಈ ಗ್ರಾಮದಲ್ಲಿ ಬಹುತೇಕ ಕುಟುಂಬಗಳು ಜ್ಯೋತಿಷ್ಯ ಹೇಳಿ ಜೀವ‌ನ ನಡೆಸುತ್ತಾರೆ. ಈ ಗ್ರಾಮದ ಸುಮಾರು 70 ಕೇರಳದ‌ ಕಾಸರಗೋಡು, ಕರ್ನಾಟಕದ ಮಂಗಳೂರು ಸೇರಿ ವಿವಿಧೆಡೆ ಜ್ಯೋತಿಷ್ಯ ಹೇಳುತ್ತಾರೆ. ಕೊರೋನಾ ಆತಂಕ ಶುರುವಾಗುತ್ತಲೆ ಸ್ವಗ್ರಾಮಕ್ಕೆ ವಾಪಸ್ ಆಗಿದ್ದಾರೆ. 

ಭಾರತ್‌ ಲಾಕ್‌ಡೌನ್‌: ಬೆಂಗಳೂರಲ್ಲಿ BMTC ಬಸ್‌ ಸಂಚಾರ ಆರಂಭ

ಇವರೆಲ್ಲ ಉರಿಗೆ ಬಂದ ಕೂಡಲೇ ಇವರನನ್ನ ಹೋಂ ಕ್ವಾರಂಟೇನ್‌ನಲ್ಲಿ ಇಡಲಾಗಿದೆ. ಕೊರೋನಾ ಪಾಸಿಟಿವ್ ಇರೋ ಪ್ರದೇಶದಿಂದ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇವರನ್ನ ಹೋಂ ಕ್ವಾರಂಟೇನ್‌ನಲ್ಲಿ ಇಡಲಾಗಿದೆ ಎಂದು ತಿಳಿದು ಬಂದಿದೆ. ಯಾರಿಗೂ ರೋಗದ ಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ‌ ಹೋಂ ಕ್ವಾರಂಟೇನ್‌ನಲ್ಲಿ ಇಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇನ್ನೂ ಮೈಸೂರಿನಲ್ಲಿ ಕೊರೋನಾ ವೈರಸ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗುತ್ತವೇ ಎಚ್ಚೆತ್ತೆಕೊಂಡಿರುವ ಮೈಸೂರು ತಾಲೂಕಿನ ಸಾತಗಳ್ಳಿ‌ ಗ್ರಾಮಸ್ಥರು ಗ್ರಾಮಕ್ಕೆ ಬೇಲಿ ಹಾಕಿದ್ದಾರೆ. ಈ ಮೂಲಕ ಮೈಸೂರು ಜನರೆ ನಮ್ಮೂರಿಗೆ ಬರಬೇಡಿ ಎಂದು  ಊರಿನ ಎರಡೂ ಮುಖ್ಯ ರಸ್ತೆಗಳನ್ನು ಗ್ರಾಮಸ್ಥರು ಮುಚ್ಚಿದ್ದಾರೆ. 

ಮೊಹಲ್ಲಾ ಕ್ಲಿನಿಕ್ ವೈದ್ಯನಿಗೇ ಕೊರೋನಾ: 1 ಸಾವಿರ ಮಂದಿಗೆ ಸೋಂಕು ಹರಡಿರುವ ಭೀತಿ!

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಅನ್ಯರನ್ನು ಗ್ರಾಮಸ್ಥರು ನಿರ್ಭಂದಿಸಿದ್ದಾರೆ.  ಈ ಗ್ರಾಮದಲ್ಲಿ ಸುಮಾರು‌ 1000 ಜನ ವಾಸ ಮಾಡುತ್ತಿದ್ದಾರೆ. ಈಗಾಲೇ ಗ್ರಾಮದ ಸುತ್ತಲ‌ ಪ್ರದೆಶದಲ್ಲಿ ಕೈ ಮೇಲೆ ಸೀಲು ಹೊಂದಿದ 19 ಜನರಿದ್ದಾರೆ.

ಈ ಗ್ರಾಮದ ಮೈಸೂರಿನ ರಿಂಗ್ ರಸ್ತೆಗೆ  ಹೊಂದಿಕೊಂಡಿದೆ. ಹೀಗಾಗಿ ಗ್ರಾಮಸ್ಥರಲ್ಲಿ ಕೊರೋನಾ ಭೀತಿ ಶುರುವಾಗಿದೆ. ಮೈಸೂರು ನಗರದಿಂದ ಗ್ರಾಮಕ್ಕೆ‌ ಯಾರೇ ಬಂದರೂ ಈ ಗ್ರಾಮಕ್ಕೆ ನೋ ಎಂಟ್ರಿ, ಗ್ರಾಮದಿಂದಲೂ ಹೊರಗೆ ಹೊಗಲು ಅವಕಾಶ ಇಲ್ಲ. ಹಾಲು, ತರಕಾರಿ, ನೀರು, ಧಾನ್ಯಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಅದು ಕೂಡ ಊರಿನ ಹಾಲಿನ‌ ಕೇಂದ್ರದಿಂದ ಅನುಕೂಲವಾಗಿದೆ. ಒಬ್ಬರಿಗೊಬ್ಬರು ತರಕಾರಿ‌ ಹಂಚಿಕೆ, ಬೇಳೆ ಧಾನ್ಯ ಹಂಚಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಭಾರತ ಲಾಕ್‌ಡೌನ್ ಗೆ ಸ್ಪಂದಿಸಿದ ಜನರು ಗ್ರಾಮದಲ್ಲೇ ಉಳಿದುಕೊಂಡಿದ್ದಾರೆ. 
 

click me!