ಜೀವಕ್ಕಿಂತ ಹೆಚ್ಚಾಯ್ತಾ ಮಾಂಸದ ಅಡುಗೆ..? ಮಟನ್ ಕೊಳ್ಳೋಕೆ ಮುಗಿಬಿದ್ದ ಜನ

By Suvarna NewsFirst Published Mar 26, 2020, 7:29 AM IST
Highlights

ಕೊರೋನಾ ವೈರಸ್ ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ದೇಶವೇ ಲಾಕ್‌ಡೌನ್ ಆಗಿರುವಾಗ ಇವರಿಗೆ ಮಾಂಸದಡುಗೆಯ ಚಿಂತೆ. ಸರಳವಾಗಿ ಮನೆಯೊಳಗೇ ಯುಗಾದಿ ಮಾಡಿ ಅಂದ್ರೆ ಜನ ಬೇಕಾಬಿಟ್ಟಿ ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ. ಹೊಸತಡ್ಕು ಆಚರಣೆಗೆ ಮಾಂಸ ಕೊಳ್ಳಲು ಬಂದ ಜನ ನಮಗೆ ಜೀವಕ್ಕಿಂತ ಮಾಂಸದ ಮೇಲೆಯೇ ಪ್ರೀತಿ ಎಂದು ಬೇಜವಾಬ್ದಾರಿ ತೋರಿಸಿದ್ದಾರೆ.

ಬೆಂಗಳೂರು(ಮಾ.26): ಕೊರೋನಾ ವೈರಸ್ ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ದೇಶವೇ ಲಾಕ್‌ಡೌನ್ ಆಗಿರುವಾಗ ಇವರಿಗೆ ಮಾಂಸದಡುಗೆಯ ಚಿಂತೆ. ಸರಳವಾಗಿ ಮನೆಯೊಳಗೇ ಯುಗಾದಿ ಮಾಡಿ ಅಂದ್ರೆ ಜನ ಬೇಕಾಬಿಟ್ಟಿ ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ. ಹೊಸತಡ್ಕು ಆಚರಣೆಗೆ ಮಾಂಸ ಕೊಳ್ಳಲು ಬಂದ ಜನ ನಮಗೆ ಜೀವಕ್ಕಿಂತ ಮಾಂಸದ ಮೇಲೆಯೇ ಪ್ರೀತಿ ಎಂದು ಬೇಜವಾಬ್ದಾರಿ ತೋರಿಸಿದ್ದಾರೆ.

ಯುಗಾದಿ ಹಬ್ಬದ ವಿಶೇಷ ಎಂದರೆ ಹೊಸತಡ್ಕು. ಇಂದು ಮನೆಯಲ್ಲಿ ನಾನ್ ವೆಜ್ ಅಡುಗೆ ಮಾಡಿ ಎಲ್ಲರೂ ಹಬ್ಬ ಆಚರಣೆ ಮಾಡುತ್ತಾರೆ. ಭಾರತ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಬಹುತೇಕ ಮಾಂಸದಂಗಡಿಗಳು ಕ್ಲೋಸ್ ಆಗಿವೆ.

ಯುಗಾದಿ ವರ್ಷದ ತೊಡಕಿಗೂ ಕುತ್ತು ತಂದ ಕೊರೋನಾ: ಮಾಂಸದೂಟದ ಭಾಗ್ಯವೂ ಇಲ್ಲ!

ಕೆಲವೊಂದಿಷ್ಟು ಮಾಂಸದ ಅಂಗಡಿಗಳು ತೆರೆಯಲಾಗಿದ್ದು, ಮಾಂಸದಂಗಡಿಗಳಲ್ಲಿ ಸಾರ್ವಜನಿಕರು ಸಾಲುಗಟ್ಟಿ ನಿಂತು ಮಾಂಸ ಕೊಳ್ಳುತ್ತಿದ್ದಾರೆ. 600 ರೂಪಾಯಿ ಇದ್ದ ಮಟನ್ ರೇಟ್ ದಿಢೀರ್ ಏರಿಕೆಯಾಗಿದೆ. ಕೆಜಿಗೆ 800 ರೂಪಾಯಿಗೆ ಏರಿಕೆ ಮಾಡಿ ಮಟನ್ ಮಾರಾಟ ಮಾಡುತ್ತಿದ್ದಾರೆ.

ಕೆ.ಆರ್. ಮಾರುಕಟ್ಟೆಯಲ್ಲಿಯೂ ಜನದಟ್ಟಣೆ ಹೆಚ್ಚಾಗಿದ್ದು, ಸೊಪ್ಪು ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ. ಹೊಸತಡ್ಕು ಹಿನ್ನೆಲೆ ಸೊಪ್ಪು ಖರೀದಿಗಾಗಿ ಮುಗಿಬಿದ್ದ ಜನ ಗುಂಪು ಗುಂಪಾಗಿ ಬಂದು ಸೊಪ್ಪು ಖರೀದಿ ಮಾಡುತ್ತಿದ್ದಾರೆ.

ಕಂಪ್ಲೀಟ್ ಲಾಕ್‌ಡೌನ್: ಅಗತ್ಯ ವಸ್ತು ಪೂರೈಕೆ ಸರ್ಕಾರಕ್ಕೆ ಸವಾಲು!

ಮಟನ್ ಶಾಪ್‌ಗಳಿಗೆ ಪೊಲೀಸರು ಸೂಚನೆ ನೀಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೆ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಶಾಪ್ ಕ್ಲೋಸ್ ಮಾಡಿಸ್ತಿವಿ ಎಂದು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಮೀಟರ್‌ಗೆ ಒಂದು ವೃತ್ತ ಹಾಕಿ ಗ್ರಾಹಕರನ್ನು ನಿಲ್ಲಿಸಲಾಗಿದೆ.

click me!