ಸವದತ್ತಿ ಯಲ್ಲಮ್ಮದೇವಿ ಮೇಲೂ ಕೊರೋನಾ ಕಾರ್ಮೋಡ: ಅದ್ಧೂರಿ ಜಾತ್ರೆಗೆ ಬ್ರೇಕ್‌

Kannadaprabha News   | Asianet News
Published : Apr 06, 2020, 12:12 PM IST
ಸವದತ್ತಿ ಯಲ್ಲಮ್ಮದೇವಿ ಮೇಲೂ ಕೊರೋನಾ ಕಾರ್ಮೋಡ: ಅದ್ಧೂರಿ ಜಾತ್ರೆಗೆ ಬ್ರೇಕ್‌

ಸಾರಾಂಶ

ದವನದ ಹುಣ್ಣಿಮೆಯ ಜಾತ್ರೆ ಅದ್ಧೂರಿ ಆಚರಣೆ ರದ್ದು| ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ| ಬೆಳಗಾವಿ ಜಿಲ್ಲೆಯಲ್ಲಿ ಮೂರು ಕೊರೋನಾ ಪಾಸಿಟಿವ್‌ ಪ್ರಕರಣ ದೃಢ| ಮುಂಜಾಗ್ರತಾ ಕ್ರಮವಾಗಿ ಜಿಲ್ಲಾದ್ಯಂತ ಕಟ್ಟೆಚ್ಚರ|

ಬೆಳಗಾವಿ(ಏ.06): ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಿಯ ದವನದ ಹುಣ್ಣಿಮೆಯ ಜಾತ್ರೆಯ ಮೇಲೂ ಮಹಾಮಾರಿ ಕೊರೋನಾ ಕಾರ್ಮೋಡ ಬಿಸಿ ತಟ್ಟಿದೆ.

ಏ. 7 ಮತ್ತು 8 ರಂದು ನಡೆಯಬೇಕಿದ್ದ ದವನದ ಹುಣ್ಣಿಮೆಯ ಜಾತ್ರೆ ಅದ್ಧೂರಿ ಆಚರಣೆಗೆ ದೇವಸ್ಥಾನದ ಆಡಳಿತ ಮಂಡಳಿ ಬ್ರೇಕ್‌ ಹಾಕಿದೆ. ಬೆಳಗಾವಿ ಜಿಲ್ಲೆಯಲ್ಲಿ ಮೂರು ಕೊರೋನಾ ಪಾಸಿಟಿವ್‌ ಪ್ರಕರಣ ದೃಢಪಟ್ಟಿರುವುದರಿಂದ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ.

ಸವದತ್ತಿ ಯಲ್ಲಮ್ಮ ದೇವಸ್ಥಾನ ವದಂತಿ ನಂಬಬೇಡಿ: ಆತಂಕದಲ್ಲಿ ಭಕ್ತರು

ಹಾಗಾಗಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸರಳವಾಗಿ ದವನದ ಹುಣ್ಣಿಮೆಯ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಅದ್ಧೂರಿ ಕಾರ್ಯದ ಬದಲಾಗಿ ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿ ಸದಸ್ಯರು, ಹಾಗೂ ಕೆಲ ಹಿರಿಯರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಪೂಜೆ, ಪುನಸ್ಕಾರಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮನವಿ ಮಾಡಿದ್ದಾರೆ. 
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?