ಓದು ಅಂತ ಹೇಳಿದ್ದೇ ತಪ್ಪಾಯ್ತಾ? ನೇಣಿಗೆ ಶರಣಾದ ವಿದ್ಯಾರ್ಥಿ

Kannadaprabha News   | Asianet News
Published : Apr 06, 2020, 11:52 AM IST
ಓದು ಅಂತ ಹೇಳಿದ್ದೇ ತಪ್ಪಾಯ್ತಾ? ನೇಣಿಗೆ ಶರಣಾದ ವಿದ್ಯಾರ್ಥಿ

ಸಾರಾಂಶ

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ| ಬೆಳಗಾವಿಯ ಸದಾಶಿವನಗರದಲ್ಲಿ ನಡೆದ ಘಟನೆ| ಲಾಕ್‌ಡೌನ್‌ನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಕೆ| ವಿದ್ಯಾರ್ಥಿ ವಿಡಿಯೋ ಗೇಮ್‌ ಆಡುತ್ತಿದ್ದ ವಿದ್ಯಾರ್ಥಿ|

ಬೆಳಗಾವಿ(ಏ.06): ಪೋಷಕರು ಅಭ್ಯಾಸ ಮಾಡುವಂತೆ ಹೇಳಿದ್ದಕ್ಕೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಭಾನುವಾರ ನಡೆದಿದೆ. 

ಇಲ್ಲಿನ ಸದಾಶಿವ ನಗರದ ಸೂರಜ್‌ ಕಳ್ಳಿಗುದ್ದಿ(16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಿಸಿದ ನಂತರ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿದೆ.

ಮೆಣಸು ದರ ಕುಸಿತ: ಬೆಳಗಾವಿ ರೈತ ಆತ್ಮಹತ್ಯೆ

ಹೀಗಾಗಿ ವಿದ್ಯಾರ್ಥಿ ವಿಡಿಯೋ ಗೇಮ್‌ನಲ್ಲಿ ತಲ್ಲೀನನಾಗಿದ್ದನ್ನು ಗಮನಿಸಿದ ಪಾಲಕರು ಹೆಚ್ಚಿನ ಅಧ್ಯಯನ ಮಾಡಿ ಪರೀಕ್ಷೆಗೆ ಸಿದ್ಧವಾಗುವಂತೆ ಸೂಚಿಸಿದ್ದರು. ಮನನೊಂದ ಸೂರಜ್‌ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?