'ದೆಹಲಿಗೆ ಹೋಗಿ ಬಂದವರಿಂದಲೇ ಕೊರೋನಾ ವೈರಸ್‌ ಹೆಚ್ಚಳ'

By Kannadaprabha News  |  First Published Apr 6, 2020, 11:22 AM IST

ಜಮಾತ್‌ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡು ಬಂದವರಿಂದಲೇ ದೇಶದಲ್ಲಿ ಕೊರೋನಾ ವೈರಸ್‌ ಹೆಚ್ಚಳ| ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಆರೋಪ| ಹೊರಗಿನಿಂದ ಒಳ್ಳೆಯವರಂತೆ ಕಂಡರೂ ಮನಸ್ಥಿತಿಗಳು ಮಾತ್ರ ಹಾಗೆಯೇ ಇವೆ| ಇವರಿಂದಾಗಿಯೇ ಆಂಧ್ರ, ತಮಿಳುನಾಡಿನಲ್ಲಿ ಕೊರೋನಾ ವೈರಸ್‌ ಪೀಡಿತರ ಸಂಖ್ಯೆ ಹೆಚ್ಚಳ|
 


ಬಳ್ಳಾರಿ(ಏ.06): ದೆಹಲಿಯ ನಿಜಾಮುದ್ದೀನ್‌ ಜಮಾತ್‌ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡು ಬಂದವರಿಂದಲೇ ದೇಶದಲ್ಲಿ ಕೊರೋನಾ ವೈರಸ್‌ ಹೆಚ್ಚಾಗಲು ಕಾರಣವಾಗಿದೆ ಎಂದು ಆರೋಪಿಸಿರುವ ನಗರದ ಬಿಜೆಪಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಕೊರೋನಾ ವೈರಸ್‌ ನಿಯಂತ್ರಣಕ್ಕೆ ಸಹಕರಿಸದವರು ‘ಟೆರರಿಸ್ಟ್‌’ ಮನೋಭಾವದವರು ಎಂದು ಜರಿದಿದ್ದಾರೆ.

ನಗರದ ಭತ್ರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿರುವ ಉಚಿತ ಔಷಧ ವಿತರಣೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

Latest Videos

undefined

ದೆಹಲಿಯ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದವರಿಂದ ರೋಗಾಣು ಹೆಚ್ಚಾಗಿದೆ. ಇದರ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಶ್ರಮಿಸುತ್ತಿದ್ದು, ಇಷ್ಟಾಗಿಯೂ ರೋಗಾಣು ನಿಯಂತ್ರಣಕ್ಕೆ ಸಹಕರಿಸಿದವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದ ಶಾಸಕ ರೆಡ್ಡಿ, ಎಲ್ಲರೂ ಹಾಗಿಲ್ಲ. ಆದರೆ, ವಿನಾಕಾರಣ ಚಿಕಿತ್ಸೆಗೆ ಸ್ಪಂದಿಸದೆ ಅಸಹಕಾರ ವ್ಯಕ್ತಪಡಿಸುವವರು ‘ಟೆರರಿಸ್ಟ್‌’ ಮನಸ್ಥಿತಿಯವರು. ಕೆಲವರು ಹೊರಗಿನಿಂದ ಒಳ್ಳೆಯವರಂತೆ ಕಂಡರೂ ಮನಸ್ಥಿತಿಗಳು ಮಾತ್ರ ಹಾಗೆಯೇ ಇವೆ. ಇವರಿಂದಾಗಿಯೇ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಕೊರೋನಾ ವೈರಸ್‌ ಪೀಡಿತರ ಸಂಖ್ಯೆ ಹೆಚ್ಚಾಗಿದೆ ಎಂದರು.

ಕೊರೋನಾ ಭೀತಿ:'ಪೊಲೀಸರಿಂದಲೇ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ'

ಯಾರು ಏನೇ ಮಾಡಿದ್ರೂ ನಮ್ಮ ರಾಮ, ನಮ್ಮ ಈಶ್ವರ ಭಗವಂತ ನಮ್ಮನ್ನು ಕಾಪಾಡುತ್ತಾನೆ. ಪ್ರಧಾನಮಂತ್ರಿಗಳು ಕರೆ ನೀಡಿದಂತೆ ದೀಪ ಹಚ್ಚುತ್ತೇವೆ. ಕೆಲ ಕೋಮುವಾದಿಗಳು ದೀಪ ಹಚ್ಚುವುದಿಲ್ಲ. ಅವರು ಹಚ್ಚದಿರುವ ದೀಪದ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಹಚ್ಚಿ ಕವರ್‌ ಮಾಡ್ತೀವಿ. ನನ್ನ ಮನೆಯಲ್ಲಿ 150 ದೀಪ ಹಚ್ಚುವೆ ಎಂದು ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದರು.

"

click me!