ಕೊರೋನಾ ಹೋರಾಟಕ್ಕೆ ದೇಣಿಗೆ ನೀಡಿದ ಸುಮಲತಾ ಅಂಬರೀಶ್ ವಿರುದ್ಧ ಆಕ್ರೋಶ

By Suvarna NewsFirst Published Apr 2, 2020, 4:06 PM IST
Highlights

ಕೊರೋನಾ ವೈರಸ್ ವಿರುದ್ಧ ಸಮರಕ್ಕೆ ಸಂಸದ ಪ್ರದೇಶಾಭಿವೃದ್ಧಿಯಲ್ಲಿ 1 ಕೋಟಿ ರೂ. ಪ್ರಧಾನಿ ಮಂತ್ರಿ ಪರಿಹಾರ ನಿಧಿಗೆ ಕೊಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಬೆಂಗಳೂರು, (ಏ.02): ಕೊರೋನಾ ವಿರುದ್ಧ ಹೋರಾಟಕ್ಕೆ ಮಂಡ್ಯ ಸಂಸದರೆ ಸುಮಲತಾ ಈಗ 1 ಕೋಟಿ ಹಣವನ್ನು ಮತ್ತೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. 

ನಟಿ ಹಾಗೂ ಸಂಸದೆ ಸುಮಲತಾ ಕೊರೋನಾ ವಿರುದ್ಧ ಹೋರಾಟಕ್ಕೆ ಈ ಹಿಂದೆ ತಮ್ಮ ಎರಡು ತಿಂಗಳ ವೇತನವನ್ನು ನೀಡಿದ್ದರು. ಅಂದರೆ ಎರಡು ಲಕ್ಷ ರೂಪಾಯಿಯನ್ನು ಪ್ರಧಾನ ಮಂತ್ರಿಗಳ ನಿಧಿ ಹಾಗೂ ಮುಖ್ಯಮಂತ್ರಿಗಳ ನಿಧಿಗೆ ನೀಡಿದ್ದರು.

ಕೊರೋನಾ ಆತಂಕ: ಮಂಡ್ಯದ ಮಿಮ್ಸ್‌ಗೆ 50 ಲಕ್ಷ ನೀಡಿದ ಸಂಸದೆ ಸುಮಲತಾ

ಮಂಡ್ಯ ಸಂಸದರೆ ಸುಮಲತಾ ಈಗ ಒಂದು ಕೋಟಿ ಹಣವನ್ನು ಮತ್ತೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಈ ಹಣವನ್ನು ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ತೆಗೆದು ಪ್ರಧಾನ ಮಂತ್ರಿಗಳ ನಿಧಿಗೆ ಕೊಟ್ಟಿದ್ದಾರೆ. ಸುಮಲತಾ ದೇಣಿಗೆ ನೀಡಿರುವ ಕುರಿತು ನಟಿ ಖುಷ್ಬು ಟ್ವೀಟ್​ ಮಾಡಿದ್ದಾರೆ.

ಈ ಹಣವನ್ನು ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ತೆಗೆದು ಪ್ರಧಾನ ಮಂತ್ರಿಗಳ ನಿಧಿಗೆ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಾಗಿಸಿದೆ.

ಮೋದಿ ಜತೆ ಕೈಜೋಡಿಸಿದ ಸುಮಲತಾ; ಕೊರೋನಾ ನಿಧಿಗೆ 1 ಕೋಟಿ ರೂ. ಸಹಾಯ

ಪ್ರದೇಶಾಭಿವೃದ್ಧಿಯಿಂದ  ಪ್ರಧಾನಿ ಮಂತ್ರಿ ನಿಧಿಗೆ ಕೊಟ್ಟಿರುವ ಬಗ್ಗೆ ಸುಮಲತಾ ವಿರುದ್ದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ನಮ್ಮ ಹಣ ಕೊಡಲು ನೀವೇ ಬೇಕಾ ಅಂತೆಲ್ಲಾ  ಟ್ರೋಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾವೇರಿ ಹೋರಾಟಕ್ಕೆ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಅಂಬಿ ಹೆಂಡತಿ ನೀವಾ ಎಂದು ಅಪಹಾಸ್ಯ ಮಾಡುತ್ತಿದ್ದಾರೆ. ಇದರಿಂದ ಸಂಸದೆ ಸುಮಲತಾ ಅಂಬರೀಶ್ ಅವರು ಸಹ ಗರಂ ಆಗಿದ್ದಾರೆ.


ಏಪ್ರಿಲ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!