ಕೊರೋನಾ ಭೀತಿ: ಕ್ವಾರಂಟೈನ್‌ನಲ್ಲಿ ಪೊಲೀಸ್‌ ಪೇದೆ!

By Kannadaprabha News  |  First Published Apr 2, 2020, 2:58 PM IST

ಕ್ವಾರಂಟೈನ್‌ನಲ್ಲಿ ಪೊಲೀಸ್ ಪೇದೆ| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಲದ ಪೊಲೀಸ್‌ ಪೇದೆ| ಮಂಗಳೂರಿನಲ್ಲಿ ಕಾರ್ವನಿರ್ವಹಿಸುತ್ತಿರುವ ಪೊಲೀಸ್ ಪೇದೆ|


ಹುನಗುಂದ(ಏ.02): ಮಂಗಳೂರಿನಲ್ಲಿ ಕಾರ್ವನಿರ್ವಹಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಲದ ಪೊಲೀಸ್‌ ಪೇದೆಯೊಬ್ಬನನ್ನು ಹುನಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪಿಸಿದ ಕ್ವಾರಂಟೈನ್‌ ಇಡಲಾಗಿದೆ. 

ಮಂಗಳೂರಿನಲ್ಲಿ ಕಾರ್ವನಿರ್ವಹಿಸುತ್ತಿರುವ ಈ ಪೊಲೀಸ್ ಪೇದೆ ಇಲಾಖೆ ಕೆಲಸದ ನಿಮಿತ್ತ ದೆಹಲಿಗೆ ಹೋಗಿ ಬಮದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಸಂಜೆಯಿಂದ ಹುನಗುಂದ ಆಸ್ಪತ್ರೆಯ ಕ್ವಾರಂಟೈನ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. 

Tap to resize

Latest Videos

ಹೋಂ ಕ್ವಾರಂಟೈನ್‌ ಪಾಲಿಸದ ಬಳ್ಳಾರಿ ವ್ಯಕ್ತಿ ಪೊಲೀಸರ ವಶಕ್ಕೆ

ಸದರಿ ವ್ಯಕ್ತಿ ಪರೀಕ್ಷಿಸಲಾಗಿ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಶಾಂತ ತುಂಬಗಿ ಸ್ಪಷ್ಟಪಡಿಸಿದ್ದಾರೆ. 
 

click me!