ಕೊರೋನಾ ವೈರಸ್ ಭೀತಿಯಿಂದ KSRTC ಸಿಬ್ಬಂದಿ ಆತ್ಮಹತ್ಯೆಗೆ ಶರಣು..!

By Suvarna News  |  First Published Mar 25, 2020, 9:16 PM IST

ಕೊರೋನಾ ವೈರಸ್‌ ಭೀತಿ ಡೆತ್ ನೋಟು ಬರೆದಿಟ್ಟು ಮಾಹಾರಾಷ್ಟ್ರದಲ್ಲಿ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.


ಉಡುಪಿ, (ಮಾ.25): ತನಗೆ ಕೊರೋನಾ ವೈರಸ್ ಸೋಂಕು ತಗುಲಿರಬಹುದೆಂದು ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಉಪ್ಪೂರುವಿನಲ್ಲಿ ನಡೆದಿದೆ.

ಉಪ್ಪೂರಿನ ನರ್ನಾಡು ನಿವಾಸಿ 56 ವರ್ಷದ ಗೋಪಾಲಕೃಷ್ಣ ಮಡಿವಾಳ ಎಂದು ಗುರುತಿಸಲಾಗಿದೆ. ಇವರು ಕೆಎಸ್‌ಆರ್‌ಟಿಸಿಯಲ್ಲಿ ತರಬೇತುದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದರು.

Tap to resize

Latest Videos

ಕೊರೋನಾ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

'ತನಗೆ ಕೊರೋನಾ ಇದೆ' ಎಂದು ಡೆತ್ ನೋಟ್ ಬರೆದಿಟ್ಟಿದ್ದ ಗೋಪಾಲಕೃಷ್ಣ ಇಂದು (ಬುಧವಾರ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅವರಲ್ಲಿ ಯಾವ ಕೊರೋನಾ ಲಕ್ಷಣಗಳಿರಲಿಲ್ಲ ಎನ್ನುವುದು ಅವರ ಕುಟುಂಬ ಮಾತುಗಳು.

ಈ ಬಗ್ಗೆ ಬ್ರಹ್ಮಾವರ ಪೋಲೀಸರಿಗೆ ಮೃತ ಕುಟುಂಬದವರು ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

click me!