ಬೇಲಿ ಮುಳ್ಳಿನಕಾಯಿಗೆ ಬಾರಿ ಡಿಮ್ಯಾಂಡ್ ಆರಂಭವಾಗಿದ್ದು, ಕೊರೋನಾ ವೈರಾಣುವಿನ ಮಾದರಿಯನ್ನೇ ಹೋಲುವ ಈ ಕಾಯಿಯನ್ನು ತಂದು ಮನೆಗೆ ಕಟ್ಟಿಪೂಜಿಸಲಾಗುತ್ತಿದೆ. ಬೇಲಿ ಮುಳ್ಳಿನ ಕಾಯಿಗೆ ಕೊರೋನಾ ಕಾಯಿ ಎಂದು ನಾಮಕರಣ ಮಾಡಲಾಗಿದೆ.
ಮೈಸೂರು(ಏ.04): ಕೊರೋನಾ ವೈರಾಣು ವ್ಯಾಪಕವಾಗಿ ಹರುಡುತ್ತಲೇ ಮೈಸೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಹೊಸ ಮೌಢ್ಯಾಚರಣೆಯೊಂದು ಬೆಳಕಿಗೆ ಬಂದಿದೆ.
ಬೇಲಿ ಮುಳ್ಳಿನಕಾಯಿಗೆ ಬಾರಿ ಡಿಮ್ಯಾಂಡ್ ಆರಂಭವಾಗಿದ್ದು, ಕೊರೋನಾ ವೈರಾಣುವಿನ ಮಾದರಿಯನ್ನೇ ಹೋಲುವ ಈ ಕಾಯಿಯನ್ನು ತಂದು ಮನೆಗೆ ಕಟ್ಟಿಪೂಜಿಸಲಾಗುತ್ತಿದೆ. ಬೇಲಿ ಮುಳ್ಳಿನ ಕಾಯಿಗೆ ಕೊರೋನಾ ಕಾಯಿ ಎಂದು ನಾಮಕರಣ ಮಾಡಲಾಗಿದೆ.
'ಚಹಾಕ್ಕೆ ಬೆಲ್ಲ, ಅರಿಶಿಣ ಹಾಕಿ ಕುಡಿದ್ರೆ ಕೊರೋನಾ ಬರಲ್ಲ'..!
ಮುಳ್ಳು ಮುತ್ತಿಗೆ ಗಿಡ ಅಥವಾ ಊಜಿ ಗಿಡ ಎಂತಲೂ ಗ್ರಾಮಾಂತರ ಪ್ರದೇಶದಲ್ಲಿ ಕರೆಯುವ ಈ ಗಿಡದ ಕಾಯಿಯನ್ನು ಈ ಹಿಂದೆ ಮಕ್ಕಳು ಆಟವಾಡುವಾಗ ಬಲ್ಪ… ನಂತೆ ಬಳಸುತ್ತಿದ್ದರು. ಅದರ ಹೂವನ್ನು ಬ್ಯಾಟರಿ ಎಂದು ತಿಳಿದು ಆಟವಾಡುತ್ತಿದ್ದರು. ಆದರೆ ದುರಾದೃಷ್ಟವಶಾತ್ ಈಗ ಆ ಗಿಡಕ್ಕೆ ಬೇಡಿಕೆ ಹೆಚ್ಚಿದೆ. ತಾಲೂಕಿನ ರಮ್ಮನಹಳ್ಳಿ, ಹಂಚ್ಯಾ ಸುತ್ತಮುತ್ತಲ ಪ್ರದೇಶದಲ್ಲಿ ಬೇಲಿ ಕಾಯಿಗಾಗಿ ಜನ ಹುಡುಕಾಟ ಆರಂಭಿಸಿದ್ದಾರೆ. ಮನೆ ಮುಂದೆ ಒಂದು ಕಾಯಿ, ಜೊತೆಗೆ ಮಾವು, ಬೇವಿನ ಸೊಪ್ಪನ್ನು ತೋರಣವನ್ನಾಗಿಸಿ ಕಟ್ಟಿಕುಂಕುಮವಿಟ್ಟು ಗಂಧದ ಕಟ್ಟಿಹಚ್ಚಿ ಪೂಜಿಸುತ್ತಿದ್ದಾರೆ.
ಹೆಚ್ಚುತ್ತಿರುವ ಕೊರೋನಾ ಪ್ರಕರಣ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ
ಹೀಗೆ ಪೂಜಿಸಿದರೆ ಕೊರೋನಾ ಬರುವುದಿಲ್ಲ ಎಂಬ ಸುದ್ದಿಯನ್ನು ಯಾರೋ ಹಬ್ಬಿಸಿದ್ದರಿಂದ ಸಾರ್ವಜನಿಕರು ಆ ಕಾಯಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ರಮ್ಮನಹಳ್ಳಿ ಸುತ್ತಮುತ್ತ ಅನೇಕ ಮನೆಗಳ ಮುಂದೆ ಅದನ್ನು ಕಟ್ಟಿಪೂಜಿಸಲಾಗುತ್ತಿದೆ.