ಮಹಾಮಾರಿ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈದಿಗಳ ಸಾಥ್‌!

By Kannadaprabha NewsFirst Published Mar 25, 2020, 7:47 AM IST
Highlights

ಕೈದಿಗಳಿಂದ ಮಾಸ್ಕ್‌ ತಯಾರಿಕೆ| ಬೆಂಗಳೂರಿನ ಕೇಂದ್ರ ಕಾರಾಗೃಹಗಳಲ್ಲಿ ಮಾಸ್ಕ್ ತಯಾರಿಕೆ| ರಾಜ್ಯದ ಎಲ್ಲ ಕೇಂದ್ರ ಕಾರಾಗೃಹಗಳಲ್ಲಿ ಪ್ರತಿ ದಿನ ಐದು ಸಾವಿರ ಮಾಸ್ಕ್‌ ಉತ್ಪಾದನೆ|
 

ಬೆಂಗಳೂರು(ಮಾ.25): ಮಹಾಮಾರಿ ಕೊರೋನಾ ಸೋಂಕು ವಿರುದ್ಧದ ಹೋರಾಟಕ್ಕೆ ರಾಜ್ಯದ ಕೈದಿಗಳು ಕೂಡಾ ಸಾಥ್‌ ನೀಡಿದ್ದು, ಕೇಂದ್ರ ಕಾರಾಗೃಹಗಳಲ್ಲಿ ಮಾಸ್ಕ್ ಗಳನ್ನು ತಯಾರಿಸಿ ಪೊಲೀಸ್‌ ಇಲಾಖೆಗೆ ಪೂರೈಸುವ ಕೆಲಸ ಆರಂಭಿಸಿದ್ದಾರೆ.

ಮಾಸ್ಕ್‌ಗಳ ಕೊರತೆ ನಿವಾರಿಸಲು ಕೇಂದ್ರ ಕಾರಾಗೃಹಗಳಲ್ಲಿ ಮಾಸ್ಕ್‌ಗಳನ್ನು ತಯಾರಿಸುವ ಆರಂಭಿಸಿದೆ. ಎಲ್ಲ ಕೇಂದ್ರ ಕಾರಾಗೃಹಗಳಲ್ಲಿ ಪ್ರತಿ ದಿನ ಐದು ಸಾವಿರ ಮಾಸ್ಕ್‌ಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಬಂದೀಖಾನೆ ಮತ್ತು ಸುಧಾರಣಾ ಸೇವೆ ಇಲಾಖೆಯ ಡಿಜಿಪಿ ಅಲೋಕ್‌ ಮೋಹನ್‌ ತಿಳಿಸಿದ್ದಾರೆ.

ಅಮೆರಿಕ: ಒಂದೇ ದಿನ 10000 ಜನಕ್ಕೆ ವೈರಸ್‌, 130 ಮಂದಿ ಸಾವು!

2 ಸಾವಿರ ಮಾಸ್ಕ್‌ ತಯಾರಿ:

ಈ ಪೈಕಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಪ್ರತಿ ದಿನ ಎರಡು ಸಾವಿರ ಮಾಸ್ಕ್‌ಗಳನ್ನು ತಯಾರಿಸಲಾಗುತ್ತಿದೆ. ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿ, ನಗರ ಸಶಸ್ತ್ರ ಮೀಸಲು ಪಡೆ ಹಾಗೂ ಜಲಮಂಡಳಿ ಇಲಾಖೆಗಳಿಗೆ 17 ಸಾವಿರ ಮಾಸ್ಕ್‌ಗಳನ್ನು ಪೂರೈಸಲಾಗಿದ್ದು, ಇದಕ್ಕೆ ಉತ್ಪಾದನಾ ವೆಚ್ಚವಾಗಿ ತಲಾ ಮಾಸ್ಕ್‌ಗೆ .6 ನಿಗದಿ ಪಡಿಸಲಾಗಿದೆ ಎಂದು ಹೇಳಿದ್ದಾರೆ.

ಕರ್ಣಾಟಕ ಬ್ಯಾಂಕ್‌ ಸೇವಾ ವಾಹಿನಿಗಳು ಇಂದಿನಿಂದ ಉಚಿತ

ವಿಡಿಯೋ ಕಾನ್ಫೆರನ್ಸ್‌ ಮೂಲಕ ವಿಚಾರಣೆ:

ಬಂಧಿಗಳಿಗೆ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕಿಸಲು ದೂರವಾಣಿ ಸೌಲಭ್ಯ ನೀಡಲಾಗಿದೆ. ವಿಡಿಯೋ ಕಾನ್ಫೆರನ್ಸ್‌ ಮೂಲಕ ನ್ಯಾಯಾಲಯಗಳ ವಿಚಾರಣೆಗೆ ಹಾಜರು ಪಡಿಸಲಾಗುತ್ತಿದೆ. ಕಾರಾಗೃಹಗಳ ಆವರಣದ ಸ್ವಚ್ಛತೆ ಹಾಗೂ ಕೈದಿಗಳು ಮತ್ತು ಸಿಬ್ಬಂದಿ ವೈಯಕ್ತಿಕ ನೈರ್ಮಲ್ಯಕ್ಕೆ ವಿಶೇಷ ಒತ್ತನ್ನು ನೀಡಲಾಗುತ್ತಿದೆ. ಕೊರೋನಾ ವೈರಸ್‌ ಸೋಂಕು ಕುರಿತು ಜೈಲಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಕೊರೋನಾ ತಡೆಗೆ ಕೈಜೋಡಿಸಿದ ಕೈದಿಗಳು: ಜೈಲಿನಲ್ಲಿ ಮಾಸ್ಕ್ ತಯಾರಿಕೆಯ ಫೋಟೋಸ್'
 

click me!