
ಮಂಗಳೂರು(ಮಾ.25): ಕೊರೋನಾ ವೈರಸ್‌ನಿಂದ ಉಂಟಾಗಿರುವ ಜಾಗತಿಕ ವಿಪತ್ತಿನ ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ತನ್ನ ಪರ್ಯಾಯ ಸೇವಾ ವಾಹಿನಿಗಳನ್ನು (ಆಲ್ಟರ್‌ನೇಟಿವ್ ಡೆಲಿವರಿ ಚಾನೆಲ್ಸ್) ಗ್ರಾಹಕರಿಗೆ ಮುಂದಿನ ಪ್ರಕಟಣೆಯವರೆಗೆ ಉಚಿತವಾಗಿ ನೀಡಲಿದೆ.
ಗ್ರಾಹಕರು ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸಾಧ್ಯವಾದಷ್ಟುಮಟ್ಟಿಗೆ ತಮ್ಮ ಮನೆಯಲ್ಲಿಯೇ ಅಥವಾ ತಾವಿರುವಲ್ಲಿಯೇ ಡಿಜಿಟಲ್ ತಂತ್ರಜ್ಞಾನ ಆಧಾರಿತವಾದ ಬ್ಯಾಂಕ್‌ನ ಸೇವಾ ವಾಹಿನಿಗಳನ್ನು ಬಳಸಿ ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡಿಕೊಳ್ಳಬಹುದಾಗಿದೆ.
21 ದಿವಸ ಇಡೀ ದೇಶವೇ ಲಾಕ್ ಡೌನ್: ಏನು ಸಿಗುತ್ತೆ? ಏನು ಸಿಗೋಲ್ಲ?
ಪರ್ಯಾಯ ಸೇವಾ ವಾಹಿನಿಗಳಾದ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ, ಎಂ.ಪಾಸ್ ಬುಕ್‌ಗಳನ್ನು ಬಳಸಿ, ಆನ್‌ಲೈನ್ ಪೇಮೆಂಟ್ ಮೂಲಕ ನೆಫ್ಟ್, ಆರ್‌ಟಿಜಿಎಸ್ ಮುಂತಾದ ಸೇವೆಗಳನ್ನು ಬಳಸಿಕೊಳ್ಳಬಹುದು.
ಗ್ರಾಹಕರು ತಮ್ಮ ಶಾಖಾ ಭೇಟಿಯನ್ನು ಹಿತಮಿತಗೊಳಿಸಿಕೊಳ್ಳುವುದರ ಜೊತೆಗೆ ನಗದು ವ್ಯವಹಾರವನ್ನು ಸಾಧ್ಯವಾದಷ್ಟುಮಟ್ಟಿಗೆ ಕಡಿತಗೊಳಿಸಿಕೊಂಡು, ಕೊರೊನ ವೈರಸ್ ಸೋಂಕು ಹರಡದಂತೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಎಂದು ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.