ವಿದೇಶದಿಂದ ಬಂದವರಿಗೆ ಕಡ್ಡಾಯವಾಗಿ ಹೋಂ ಕ್ವಾರೆಂಟೈನ್ ನಿಗದಿ ಮಾಡಿದ್ದರೂ ಸಿಂಗಾಪುರ್‌ನಿಂದ ಮರಳಿದ ಉಪಜಿಲ್ಲಾಧಿಕಾರಿಯೊಬ್ಬರು ಹೋ ಕ್ವಾರೆಂಟೈನ್‌ನಿಂದ ತಪ್ಪಿಸಿಕೊಂಡು ಟೀಕೆಗೊಳಗಾಗಿದ್ದಾರೆ.
ಕೊಲ್ಲಂ(ಮಾ.31): ವಿದೇಶದಿಂದ ಬಂದವರಿಗೆ ಕಡ್ಡಾಯವಾಗಿ ಹೋಂ ಕ್ವಾರೆಂಟೈನ್ ನಿಗದಿ ಮಾಡಿದ್ದರೂ ಸಿಂಗಾಪುರ್‌ನಿಂದ ಮರಳಿದ ಉಪಜಿಲ್ಲಾಧಿಕಾರಿ ಅನುಪಮ್ ಮಿಶ್ರಾ ಹೋ ಕ್ವಾರೆಂಟೈನ್‌ನಿಂದ ತಪ್ಪಿಸಿಕೊಂಡು ಟೀಕೆಗೊಳಗಾಗಿದ್ದಾರೆ.
ಮಾರರ್ಚ್ 19ರಂದು ಸಿಂಗಾಪುರ್‌ನಿಂದ ಬಂದಿದ್ದ ಕೇರಳದ ಉಪ ಜಿಲ್ಲಾಧಿಕಾರಿ ಅನುಪಮ್ ಕ್ವಾರೆಂಟೈನ್‌ನಿಂದ ತಪ್ಪಿಸಿಕೊಂಡ ವ್ಯಕ್ತಿ. ಕೊಲ್ಲಂಗೆ ಮರಳಿದಾಗ ಹೋಂ ಕ್ವಾರೆಂಟೈನ್‌ನಲ್ಲಿರವುದಾಗಿ ಈ ಅಧಿಕಾರಿ ಒಪ್ಪಿಕೊಂಡಿದ್ದರು. ಆದರೆ ನಂತರದಲ್ಲಿ ತಮ್ಮದೇ ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ.
ಕೊರೋನಾ ಗೆದ್ದ ವೃದ್ಧ ದಂಪತಿ..! ಚಿಕಿತ್ಸೆಯ ಜೊತೆ ಇವರಿಗೆ ಬಲ ನೀಡಿದ್ದು ಒಲವು..!
ಹೋಂ ಕ್ವಾರೆಂಟೈನ್ ಪರಿಶೀಲನೆಗೆಂದು ಐಎಎಸ್ ಅಧಿಕಾರಿಯ ಮನೆಗೆ ಹೋದ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಲಾಕ್ ಆಗಿರುವುದನ್ನು ಗಮನಿಸಿದ್ದಾರೆ. ಅಧಿಕಾರಿಯ ಮನೆ ಹೊರಗಿನಿಂದಲೇ ಬೀಗ ಹಾಕಿರುವ ಸ್ಥಿತಿಯಲ್ಲಿ ಕಂಡು ಬಂದಿತ್ತು. ತಪ್ಪಿಸಿಕೊಂಡ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೊಲ್ಲಂ ಜಿಲ್ಲಾಧಿಕಾರಿ ಬಿ ಅಬ್ಉಲ್ ನಝರ್ ತಿಳಿಸಿದ್ದಾರೆ.
ಈ ಬಗ್ಗೆ ಅನುಪಮ್ ಮಿಶ್ರಾ ಅವರನ್ನು ಪ್ರಶ್ನಿಸಿದಾಗ, ಆತ ಕ್ವಾರೆಂಟೈನ್‌ನಲ್ಲಿರುವಂತೆ ತಿಳಿಸಿದ ದಿನವೇ ಬೆಂಗಳೂರಿಗೆ ಬಂದು ತನ್ನ ಸಹೋದರನೊಂದಿಗೆ ಕ್ವಾರೆಂಟೈನ್‌ನಲ್ಲಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶತಕದತ್ತ..!
ಆದರೂ ಆತ ಇರುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇದು ಬೇಜವಾಬ್ದಾರಿಯಲ್ಲದೆ ಮತ್ತೇನು ಎಂದು ಕೇರಳ ಮೀನುಗಾರಿಕಾ ಸಚಿವ ಜೆ ಮರ್ಸಿಕುಟ್ಟಿ ಅಭಿಪ್ರಾಯಿಸಿದ್ದಾರೆ. ಹೋಂ ಕ್ವಾರೆಂಟೈನ್‌ನಲ್ಲಿರುವವರ ಮೇಲೆ ನಿಗಾವಹಿಸಿರುವ ಕೇರಳ ಪೊಲೀಸ್ ಅವರ ನೆಟ್‌ವರ್ಕ್‌ಗಳ ಮೇಲೆ ನಿಗಾವಹಿಸಿದೆ.