ಕಲಬುರಗಿ: 12ದಿನದಿಂದ ಇಲ್ಲ ಹೊಸ ಕೊರೋನಾ ಕೇಸ್‌, ಇದರ ಬೆನ್ನಲ್ಲೇ ಮತ್ತೊಂದು ಗುಡ್‌ ನ್ಯೂಸ್

By Suvarna NewsFirst Published Mar 31, 2020, 1:58 PM IST
Highlights

ಕೊರೋನಾ ಸೋಂಕಿನಿಂದಾಗಿ ದೇಶದಲ್ಲಿ ಮೊದಲು ಸಾವು (ಮಾ.10) ಸಂಭವಿಸಿದ್ದ ಕಲಬುರಗಿಯಲ್ಲಿ ಕಳೆದ 11 ದಿನಗಳಿಂದ ಸೋಂಕಿನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎನ್ನುವುದು ಸಮಾಧಾನಕರ ವಿಷಯ. ಇದು ಉತ್ತಮ ಬೆಳವಣಿಗೆಯಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಗುಡ್‌ನ್ಯೂಸ್ ಇಲ್ಲಿದೆ.

ಕಲಬುರಗಿ, (ಮಾ.31):  ಕೊರೋನಾ ಸೋಂಕಿನಿಂದ‌ ಮೃತರಾಗಿದ್ದ ಕಲಬುರಗಿಯ 76 ವರ್ಷದ ವಯೋವೃದ್ಧನ ಮಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು,‌ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

76 ವರ್ಷದ ವಯೋವೃದ್ಧ ಕಳೆದ‌ ಮಾರ್ಚ್ 10 ರಂದು ವಯೋಸಹಜ ಕಾಯಿಲೆಯ ಜೊತೆಗೆ ಕೊರೋನಾ‌ ಸೋಂಕಿನಿಂದ ಮೃತಪಟ್ಟಿದ್ದ. ಇದರಿಂದ ಕಲಬುರಗಿ ರೆಡ್ ಅಲರ್ಟ್ ಆಗಿ ಮಾರ್ಪಟ್ಟಿತ್ತು. ಮೃತನ ನೇರ ಸಂಪರ್ಕದಲ್ಲಿ ಬಂದಿದ್ದ ಆತನ 45 ವರ್ಷದ ಮಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ದೃಢವಾದ ಹಿನ್ನೆಲೆಯಲ್ಲಿ ಕಲಬುರಗಿ ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಐಸೋಲೇಷನ್ ವಾರ್ಡ್ ನಲ್ಲಿಟ್ಟು ತೀವ್ರ ನಿಗಾದಡಿ ಚಿಕಿತ್ಸೆ ನೀಡಲಾಗಿತ್ತು.

ಕಲಬುರಗಿಯಲ್ಲಿ 11 ದಿನದಿಂದ ಇಲ್ಲ ಹೊಸ ಕೊರೋನಾ ಕೇಸ್‌

ಚಿಕಿತ್ಸೆಯ 14 ದಿನಗಳ ನಂತರ ಸದರಿ ಮಹಿಳೆಗೆ ಕೋವಿಡ್-19 ಪರೀಕ್ಷೆ ಮಾಡಿದಾಗ ನೆಗೆಟಿವ್ ಕಂಡುಬಂದಿದೆ. 24 ಗಂಟೆ‌ ನಂತರ‌ ಮತ್ತೊಮ್ಮೆ ಪರೀಕ್ಷಿಸಿದಾಗ ಸಹ ನೆಗೆಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಡಿ.ಸಿ. ಶರತ್ ಬಿ. ಸ್ಪಷ್ಟಪಡಿಸಿದರು.

ದೇಶದಲ್ಲಿ ಮೊದಲ ಸಾವಾಗಿದ್ದ ಕಲಬುರಗಿಯಲ್ಲಿ. ಇದರಿಂದ ಜಿಲ್ಲೆಯ ಜನರು ಮಾತ್ರವಲ್ಲದೇ ಇಡೀ ಕರ್ನಾಟಕವೇ ಬೆಚ್ಚಿ ಬಿದ್ದಿತ್ತು. ಅಲ್ಲದೇ ಅಲ್ಲಿನ ಜನರಲ್ಲಿ ಕೊರೋನಾ ಮಾಹಾಮಾರಿ ಬೈಯಭೀತುಯಲ್ಲೇ ಕಾಲಕಳೆಯುವಂತೆ ಮಾಡಿತ್ತು.

ಆದ್ರೆ, ಇದೀಗ ಕಳೆದ 11 ದಿನಗಳಿಂದ ಇದುವರೆಗೂ ಒಂದು ಸೋಂಕಿ ಕೇಸ್‌ಗಳು ಪತ್ತೆಯಾಗಿ ಎನ್ನುವುದು ಸಮಾಧಾನ ತಂದಿದೆ. ಇದರ ಬೆನ್ನಲ್ಲೇ ಸೋಂಕಿತರೊಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎನ್ನುವುದು ಸಂತಸದ ಸಂಗತಿ. ಇದು ಹೊಸ ಆಶಾಕಿರಣವಾಗಿದೆ.

click me!