ಎಲ್ಲ 30 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮಾಡಲು ಕರ್ನಾಟಕ ಚಿಂತನೆ ?

By Suvarna News  |  First Published Mar 23, 2020, 1:37 PM IST

ಮಾರ್ಚ್ 31 ರವಗೆ ಕರ್ನಾಟಕ ಸಂಪೂರ್ಣ ಲಾಕ್ ಡೌನ್?| ರಾಜ್ಯದ ಜನತೆಯ ಹಿತದೃಷ್ಠಿಯಿಂದ ಈ ನಿರ್ಧಾರಕ್ಕೆ ಬರಲು ಚಿಂತನೆ|ಪರಿಸ್ಥಿತಿ ಗಂಭೀರತೆ ಅರಿತು ಮನೆಯಲ್ಲಿಯೇ ಇರಿ|
 


ಬೆಂಗಳೂರು[ಮಾ.23]: ಮಾರ್ಚ್ 31 ರವಗೆ ಕರ್ನಾಟಕವನ್ನ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಸಂಜೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂಪ್ಪ ಅವರು ಹೇಳಿದ್ದಾರೆ. 

ಇಂದು[ಸೋಮವಾರ] ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ ಅವರು, ರಾಜ್ಯದ ಜನತೆಯ ಹಿತದೃಷ್ಠಿಯಿಂದ ಈ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಗಲಿದೆ.  ಪರಿಸ್ಥಿತಿ ಗಂಭಿರತೆ ಅರಿತು ಮನೆಯಲ್ಲಿಯೇ ಇರಿ ಎಂದು ರಾಜ್ಯದ ಜನತೆಗೆ ಸಿಎಂ ಮನವಿ ಮಾಡಿಕೊಂಡಿದ್ದಾರೆ.

Tap to resize

Latest Videos

‘ಕೊರೋನಾ ಶಂಕಿತರೇ ಹುಷಾರ್: ಹೊರಗಡೆ ಓಡಾಡಿದ್ರೆ ಪೊಲೀಸರು ಅರೆಸ್ಟ್ ಮಾಡ್ತಾರೆ’

ಕರ್ನಾಟಕ ಲಾಕ್ ಡೌನ್ ಬಗ್ಗೆ ವಿರೋಧ ಪಕ್ಷಗಳ ನಾಯಕರ ಜೊತೆ ಚರ್ಚೆ ನಡೆಸುತ್ತೇವೆ. ವಿಪಕ್ಷ ನಾಯಕರ ವಿಶ್ವಾಸವನ್ನ ತೆಗೆದುಕೊಳ್ಳಲಾಗುವುದು. ವಿಪಕ್ಷ ನಾಯಕರ ಜೊತೆ ಚರ್ಚಿಸದೇ ಲಾಕ್ ಡೌನ್ ಮಾಡುವುದು ಸರಿಯಲ್ಲ ಹೀಗಾಗಿ ವಿಪಕ್ಷ ನಾಯಕರ ಗಮನಕ್ಕೆ ತಂದು ಸಂಜೆ ಲಾಕ್ ಡೌನ್ ಬಗ್ಗೆ  ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಕೊರೋನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸದ್ಯ ರಾಜ್ಯದಲ್ಲಿ ಕೊರೋನಾ ಸೋಂಕಿತ ಸಂಖ್ಯೆ 27ಕ್ಕೆ ಏರಿದೆ. 
 

click me!